Fake News - Kannada
 

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಸಂದರ್ಭದಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ

0

ಸೆಪ್ಟೆಂಬರ್ 2025ರಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) 100 ವರ್ಷಗಳನ್ನು ಪೂರೈಸಿತು.  ಇದರ ಸಲುವಾಗಿ ಸಂಘಟನೆಯು ಭಾರತದಾದ್ಯಂತ ಆಚರಣೆಗಳನ್ನು ನಡೆಸಿತು. 01 ಅಕ್ಟೋಬರ್ 2025ರಂದು, ನವದೆಹಲಿಯಲ್ಲಿರುವ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಆರ್‌ಎಸ್‌ಎಸ್‌ನ ಕೊಡುಗೆಗಳನ್ನು ಎತ್ತಿ ತೋರಿಸುವ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು. ₹100 ಸ್ಮರಣಾರ್ಥ ನಾಣ್ಯದ ಒಂದು ಭಾಗದಲ್ಲಿ ರಾಷ್ಟ್ರೀಯ ಲಾಂಛನವಿದ್ದು, ಇನ್ನೊಂದು ಭಾಗದಲ್ಲಿ ‘ವರದ ಮುದ್ರೆ’ಯಲ್ಲಿರುವ (ಆಶೀರ್ವಾದ ಅಥವಾ ಔದಾರ್ಯವನ್ನು ಸಂಕೇತಿಸುವ ಕೈ ಭಂಗಿ) ‘ಭಾರತ ಮಾತೆ’ಯ ಚಿತ್ರ, ಅದರ ಜೊತೆಗೆ ಸಿಂಹ ಮತ್ತು ವಂದಿಸುತ್ತಿರುವ ಸ್ವಯಂಸೇವಕರು ಇದ್ದಾರೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).

​ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) 100ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂದು ಹೇಳುವ ಅಂಚೆ ಚೀಟಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ (ಇಲ್ಲಿ). ಈ ಲೇಖನದಲ್ಲಿ, ಪೋಸ್ಟ್‌ನಲ್ಲಿ ಮಾಡಲಾದ ಈ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಕ್ಲೇಮ್: ಆರ್‌ಎಸ್‌ಎಸ್ ಶತಮಾನೋತ್ಸವದ ಸಂದರ್ಭದಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರವು ಬಿಡುಗಡೆ ಮಾಡಿದ ಆರ್‌ಎಸ್‌ಎಸ್ ಸ್ಮರಣಾರ್ಥ ಅಂಚೆ ಚೀಟಿಯ ಫೋಟೋ ಇದಾಗಿದೆ.

ಫ್ಯಾಕ್ಟ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಆಚರಣೆಗಳಿಗಾಗಿ ನೆದರ್‌ಲ್ಯಾಂಡ್ಸ್ ಸರ್ಕಾರವು ಅಧಿಕೃತವಾಗಿ ಆರ್‌ಎಸ್‌ಎಸ್ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂಬ  ಕ್ಲೈಮ್ ನಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಅಂಚೆ ಚೀಟಿಯನ್ನು ವಾಸ್ತವವಾಗಿ, ನೆದರ್‌ಲ್ಯಾಂಡ್ಸ್‌ನಲ್ಲಿರುವ ಹಿಂದೂ ಸ್ವಯಂಸೇವಕ ಸಂಘ (HSS NL) ಸಂಸ್ಥೆಯು ಆರ್‌ಎಸ್‌ಎಸ್ ಶತಮಾನೋತ್ಸವವನ್ನು ಸ್ಮರಿಸಲು, World Post Day ಆದ 09  ಅಕ್ಟೋಬರ್ 2025ರಂದು ಬಿಡುಗಡೆ ಮಾಡಿದೆ. ಅಲ್ಲದೆ, ನೆದರ್‌ಲ್ಯಾಂಡ್ಸ್ ಅಂಚೆ ಇಲಾಖೆಯ ವೆಬ್‌ಸೈಟ್ ಮೂಲಕ ಯಾರಾದರೂ ತಮ್ಮ ಆಯ್ಕೆಯ ಚಿತ್ರಗಳೊಂದಿಗೆ ಅಂಚೆ ಚೀಟಿಯನ್ನು ರಚಿಸಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ  ಕ್ಲೇಮ್ ತಪ್ಪು

ನೆದರ್‌ಲ್ಯಾಂಡ್ಸ್ ಸರ್ಕಾರವು ಆರ್‌ಎಸ್‌ಎಸ್ ಶತಮಾನೋತ್ಸವ ಆಚರಣೆಗಳಿಗಾಗಿ ಆರ್‌ಎಸ್‌ಎಸ್ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಯನ್ನು ಪರಿಶೀಲಿಸಲು, ನಾವು  ಗೂಗಲ್ ಸರ್ಚ್ ಅನ್ನು ನಡೆಸಿದೆವು. ಆದರೆ, ನೆದರ್‌ಲ್ಯಾಂಡ್ಸ್ ಸರ್ಕಾರವು ಅಂತಹ ಅಂಚೆ ಚೀಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಬಗ್ಗೆ ನಮಗೆ ಯಾವುದೇ ವರದಿಗಳು ಕಂಡುಬಂದಿಲ್ಲ.  ಒಂದು ವೇಳೆ ಹಾಗಾಗಿದ್ದರೆ  ಇದು ನ್ಯೂಸ್ ನಲ್ಲಿ ಪ್ರಕಟವಾಗುತ್ತಿತ್ತು. ಆದರೆ ಅಂತಹ ಯಾವುದೇ ಸುದ್ದಿಯನ್ನು ನಾವು ಕಂಡುಕೊಳ್ಳಲಿಲ್ಲ.

ನಂತರ ನಾವು ಈ ಅಂಚೆ ಚೀಟಿಯನ್ನು ನೆದರ್‌ಲ್ಯಾಂಡ್ಸ್‌ನಲ್ಲಿರುವ ಹಿಂದೂ ಸ್ವಯಂಸೇವಕ ಸಂಘ (HSS NL) ಎಂಬ ಸಂಸ್ಥೆಯು ಬಿಡುಗಡೆ ಮಾಡಿದೆ ಎಂದು ಕಂಡುಕೊಂಡೆವು. ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವವನ್ನು ಸ್ಮರಿಸಲು, 09  ಅಕ್ಟೋಬರ್ 2025ರಂದು,  ವರ್ಲ್ಡ್ ಪೋಸ್ಟ್ ಡೇ ಸಂದರ್ಭದಲ್ಲಿ ಬಿಡುಗಡೆ ಮಾಡಲ್ಪಟ್ಟಿತು.

ನೆದರ್‌ಲ್ಯಾಂಡ್ಸ್ ಅಂಚೆ ಇಲಾಖೆಯ ವೆಬ್‌ಸೈಟ್ ಮೂಲಕ ಯಾರಾದರೂ ತಾವು ಆಯ್ಕೆ ಮಾಡಿದ ಯಾವುದೇ ಚಿತ್ರದೊಂದಿಗೆ ಅಂಚೆ ಚೀಟಿಯನ್ನು ರಚಿಸಿ ಬಳಸಬಹುದು. ಇದನ್ನು ಮಾಡಲು, ಅವರು ಬಯಸಿದ ಫೋಟೋವನ್ನು ಅಪ್‌ಲೋಡ್ ಮಾಡಿ ಮತ್ತು ನಿಗದಿತ ಶುಲ್ಕವನ್ನು ಪಾವತಿಸಿದರೆ ಸಾಕು.

ಇದೇ ರೀತಿಯ ಕಸ್ಟಮೈಸ್ ಮಾಡಿದ ಅಂಚೆ ಚೀಟಿಗಳನ್ನು ಭಾರತೀಯ ಅಂಚೆ ಇಲಾಖೆ ಕೂಡಾ ಒದಗಿಸುತ್ತದೆ (ಇಲ್ಲಿ, ಇಲ್ಲಿ), ಮತ್ತು ಈ ವಿಷಯದ ಕುರಿತು  ಫ್ಯಾಕ್ಟ್ಲಿ ಲೇಖನವನ್ನು ಇಲ್ಲಿ ನೋಡಬಹುದು.

 ಒಟ್ಟಾರೆಯಾಗಿ ಹೇಳುವುದಾದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವದ ಸಂದರ್ಭದಲ್ಲಿ ನೆದರ್‌ಲ್ಯಾಂಡ್ಸ್ ಸರ್ಕಾರವು ಸ್ಮರಣಾರ್ಥ ಅಂಚೆ ಚೀಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

Share.

Comments are closed.

scroll