ಟಾಟಾ ಮೋಟಾರ್ಸ್ ಸಂಸ್ಥೆಯು 125cc ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವ ಮೂಲಕ ದ್ವಿಚಕ್ರ ವಾಹನ (ಟೂ-ವೀಲರ್) ವಿಭಾಗಕ್ಕೆ ಪ್ರವೇಶಿಸಲು ಯೋಜಿಸುತ್ತಿದೆ ಎಂಬ ಕ್ಲೈಮ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ (ಇಲ್ಲಿ,). ಹಾಗಾದ್ರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ

ಕ್ಲೇಮ್: ಟಾಟಾ ಮೋಟಾರ್ಸ್ 125cc ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುತ್ತಿದೆ.
ಫ್ಯಾಕ್ಟ್ : ವೈರಲ್ ಆಗುತ್ತಿರುವ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಯಾಗಿ, ಟಾಟಾ ಮೋಟಾರ್ಸ್ ಸಂಸ್ಥೆಯು ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ಅನೇಕ ಬಾರಿ ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ಸುಳ್ಳು.
ವೈರಲ್ ಕ್ಲೈಮ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದೆವು. ಆದರೆ, ಟಾಟಾ ಮೋಟಾರ್ಸ್ ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸುತ್ತಿದೆ ಎಂದು ಸೂಚಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಈ ಸಮಯದಲ್ಲಿ ಲಭ್ಯವಾಗಲಿಲ್ಲ.
ನಂತರ ನಾವು ಟಾಟಾ ಮೋಟಾರ್ಸ್‌ನ ಅಫೀಷಿಯಲ್ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ಮತ್ತು ವೆಬ್‌ಸೈಟ್ ಅನ್ನು ಪರಿಶೀಲಿಸಿದೆವು. ಆದರೆ, ಆ ಕ್ಲೈಮ್ ಅನ್ನು ಬೆಂಬಲಿಸುವ ಯಾವುದೇ ಮಾಹಿತಿಯನ್ನು ನಮಗೆ ಅಲ್ಲಿಯೂ ಕಂಡುಬಂದಿಲ್ಲ.
ಈ ಹುಡುಕಾಟದ ಸಮಯದಲ್ಲಿ, ವೈರಲ್ ಕ್ಲೈಮ್ ಅನ್ನು ನಿರಾಕರಿಸುವ ಅನೇಕ ಸ್ಪಷ್ಟೀಕರಣ ಪೋಸ್ಟ್‌ಗಳು (ಇಲ್ಲಿ, ಇಲ್ಲಿ) ಟಾಟಾ ಮೋಟಾರ್ಸ್‌ನ ಅಫೀಷಿಯಲ್ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಕಂಡುಬಂದವು (ಇಲ್ಲಿ, ಇಲ್ಲಿ). ಈ ಪೋಸ್ಟ್‌ಗಳಲ್ಲಿ, ಟಾಟಾ ಮೋಟಾರ್ಸ್ ಸಂಸ್ಥೆಯು ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಟಾಟಾ ಮೋಟಾರ್‌ಸೈಕಲ್‌ಗಳನ್ನು ತೋರಿಸುತ್ತವೆ ಎಂದು ಹೇಳಲಾಗುತ್ತಿರುವ, ವೈರಲ್ ಪೋಸ್ಟ್‌ಗಳಲ್ಲಿ ಹಂಚಿಕೊಂಡಿರುವ ಚಿತ್ರಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ರಚಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಟಾಟಾ ಮೋಟಾರ್ಸ್ ಸಂಸ್ಥೆಯು ದ್ವಿಚಕ್ರ ವಾಹನ ವಿಭಾಗಕ್ಕೆ ಪ್ರವೇಶಿಸುವ ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

