ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಗಳನ್ನು ಸ್ವೀಕರಿಸಿದೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಪೋಸ್ಟ್ ಮಹೀಂದ್ರಾ ಸ್ಕಾರ್ಪಿಯೋಸ್ ಅನ್ನು ನಾಲ್ಕು ಚಿತ್ರಗಳ ಕೊಲಾಜ್ ಮೂಲಕ ಕ್ಯಾಮೌಪ್ಲಾಗ್ ಪೈಂಟ್ಅನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ರತನ್ ಟಾಟಾ ಅವರು 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಸ್ ಖರೀದಿಸಲು ಭಾರತೀಯ ಸೇನೆಗೆ ಹಣ ದೇಣಿಗೆ ನೀಡಿದ್ದಾರೆ.
ಫ್ಯಾಕ್ಟ್: ಭಾರತೀಯ ಸೇನೆಯು ಇತ್ತೀಚೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಗಳನ್ನು ಖರೀದಿಸಿದೆ ಅಥವಾ ಆರ್ಡರ್ ಮಾಡಿದೆ ಅಥವಾ ಅವುಗಳನ್ನು ರತನ್ ಟಾಟಾ ಅವರು ದಾನ ಮಾಡಿದ್ದಾರೆ ಎಂದು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ವರದಿಗಳಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನ ನಿಖರತೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್ಗಳೊಂದಿಗೆ ಹುಡುಕಾಡಿದ್ದೇವೆ. ಆದರೇ ಇಲ್ಲಿ ನಮಗೆ ಈ ಕ್ಲೈಮ್ ಅನ್ನು ಬೆಂಬಲಿಸುವ ಯಾವುದೇ ಸರಿಯಾದ/ನಿಖರವಾದ ವರದಿಗಲು ದೊರಕಿಲ್ಲ. ಅಂತಹ ದೇಣಿಗೆಯನ್ನು ರತನ್ ಟಾಟಾ ಅಥವಾ ಟಾಟಾ ಗ್ರೂಪ್ ನೀಡಿದ್ದರೆ, ಅದು ಖಂಡಿತವಾಗಿಯೂ ನ್ಯೂಸ್ ನಲ್ಲಿ ಪ್ರಕಟವಾಗುತ್ತಿತ್ತು. ಹೆಚ್ಚುವರಿಯಾಗಿ, ನಾವು ರತನ್ ಟಾಟಾ ಮತ್ತು ಟಾಟಾ ಗ್ರೂಪ್‌ನ ಅಫೀಷಿಯಲ್ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ (ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಆದರೆ ಇಲ್ಲಿಯೂ ವೈರಲ್ ಕ್ಲೇಮ್ ಅನ್ನು ಬೆಂಬಲಿಸುವ ಯಾವುದೇ ಪೋಸ್ಟ್‌ಗಳು ಕಂಡುಬಂದಿಲ್ಲ.
ನಮ್ಮ ಹುಡುಕಾಟದ ಸಮಯದಲ್ಲಿ, ವೈರಲ್ ಪೋಸ್ಟ್‌ನಲ್ಲಿನ ಚಿತ್ರವು 2016 ರಿಂದ (ಇಲ್ಲಿ) ಇದೇ ರೀತಿಯ ಕ್ಲೇಮ್ ನೊಂದಿಗೆ ಶೇರ್ ಆಗಿರುವುದನ್ನು ನಾವು ಕಂಡುಕೊಂಡಿದ್ದೇವೆ.
ವೈರಲ್ ಪೋಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು Google ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು 01 ಏಪ್ರಿಲ್ 2012 ರಂದು ‘ಇಂಡಿಯನ್ ಆಟೋಸ್ ಬ್ಲಾಗ್’ ಹೆಸರಿನ ವೆಬ್‌ಸೈಟ್‌ನಲ್ಲಿ ವೈರಲ್ ಪೋಸ್ಟ್‌ನಿಂದ ಒಂದೆರಡು ಚಿತ್ರಗಳನ್ನು ಒಳಗೊಂಡಿರುವ ಆರ್ಟಿಕಲ್ ಗೆ ನಮ್ಮನ್ನು ಕರೆದೊಯ್ಯಿತು. ಈ ಲೇಖನದ ಪ್ರಕಾರ, ವೈರಲ್ ಚಿತ್ರಗಳು ಮಹೀಂದ್ರ ರಕ್ಷಕ ಪ್ಲಸ್ ಅನ್ನು ತೋರಿಸುತ್ತವೆ, ಇದು 2012 ರಲ್ಲಿ DEFEXPO ನಲ್ಲಿ ಪ್ರದರ್ಶಿಸಲಾದ ಮಾರ್ಪಡಿಸಿದ ಸ್ಕಾರ್ಪಿಯೋ ಆಫರ್ ಲೆವೆಲ್-3 ಆಗಿದೆ. ಮಹೀಂದ್ರ ರಕ್ಷಕ ಪ್ಲಸ್ ರಕ್ಷಣಾ ಪಡೆಗಳಿಗೆ ಪ್ರತ್ಯೇಕವಾಗಿ ಲಭ್ಯವಿದೆ. ಇನ್ನು ಹೆಚ್ಚಾಗಿ, ಮಹೀಂದ್ರ ರಕ್ಷಕ ಪ್ಲಸ್‌ನ ಈ ವೈರಲ್ ಚಿತ್ರಗಳನ್ನು ಉಲ್ಲೇಖಿಸುವ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

2019 ರಲ್ಲಿ ಪ್ರಕಟವಾದ ‘ಅಮರ್ ಉಜಾಲಾ’ ಸುದ್ದಿ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗಳಿಗೆ ಬುಲೆಟ್ ಪ್ರೂಫ್ ಸ್ಕಾರ್ಪಿಯೋ (ಮಹೀಂದ್ರ ರಕ್ಷಕ್ ಪ್ಲಸ್) ವಾಹನಗಳನ್ನು ಒದಗಿಸಲಾಗಿದೆ. ಹಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಮಹೀಂದ್ರ ರಕ್ಷಕ್ ಪ್ಲಸ್ ವಾಹನಗಳ ಬಳಕೆಯನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). 12 ಜನವರಿ 2023 ರಂದು ಪ್ರಕಟವಾದ ‘ದಿ ಎಕನಾಮಿಕ್ ಟೈಮ್ಸ್’ ವರದಿಯು ಭಾರತೀಯ ಸೇನೆಯು ಸುಮಾರು 1500 ಮಹೀಂದ್ರ ಸ್ಕಾರ್ಪಿಯೋ ಕ್ಲಾಸಿಕ್ SUV ಗಳನ್ನು ಆರ್ಡರ್ ಮಾಡಿದೆ ಎಂದು ಹೇಳಿದೆ. ಮಹೀಂದ್ರಾ ಆಟೋಮೋಟಿವ್‌ನ ಟ್ವೀಟ್ ಇದನ್ನು ಖಚಿತಪಡಿಸುತ್ತದೆ.
ನಾವು ನಂತರ ಮಹೀಂದ್ರಾ ಆಟೋಮೋಟಿವ್‌ನ ಅಧಿಕೃತ/ಅಫೀಷಿಯಲ್ ಟ್ವಿಟರ್ ಹ್ಯಾಂಡಲ್ ಅನ್ನು ಪರಿಶೀಲಿಸಿದ್ದೇವೆ. ಇಲ್ಲಿ ಭಾರತೀಯ ಸೇನೆಯು ಇತ್ತೀಚೆಗೆ 2,500 ಬುಲೆಟ್‌ಪ್ರೂಫ್ ಸ್ಕಾರ್ಪಿಯೋಗಳನ್ನು ಆರ್ಡರ್ ಮಾಡಿದೆ ಅಥವಾ ಖರೀದಿಸಿದೆ ಎಂದು ದೃಢೀಕರಿಸುವ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಭಾರತೀಯ ಸೇನೆಯು ನಿಜವಾಗಿಯೂ ಅಂತಹ ಆದೇಶವನ್ನು ನೀಡಿದ್ದರೆ, ಅದು ಖಂಡಿತವಾಗಿಯೂ ನ್ಯೂಸ್ ಆಗುತಿತ್ತು ಮತ್ತು ಮಹೀಂದ್ರಾ ಆಟೋಮೋಟಿವ್ನಿಂದ ದೃಢೀಕರಿಸಲ್ಪಡುತ್ತಿತ್ತು. ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ, ಭಾರತೀಯ ಸೇನೆಯು ಇತ್ತೀಚೆಗೆ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋಗಳನ್ನು ಆರ್ಡರ್ ಮಾಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ರತನ್ ಟಾಟಾ ಅದರ ಖರೀದಿಗೆ ಹಣವನ್ನು ನೀಡಿಲ್ಲ ಎಂದು ಖಚಿತವಾಗಿದೆ.
ಈ ಹಿಂದೆ, ರತನ್ ಟಾಟಾ ಅವರು ಭಾರತೀಯ ಸೇನೆಗೆ ಬುಲೆಟ್ ಪ್ರೂಫ್ ಬಸ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳುವ ಮೂಲಕ ಬಸ್‌ನ ಚಿತ್ರವನ್ನು ಒಳಗೊಂಡ ಪೋಸ್ಟ್ ವೈರಲ್ ಆಗಿತ್ತು. ಈ ಕುರಿತು ಫಾಕ್ಟ್ಲಿ ಫ್ಯಾಕ್ಟ್ ಚೆಕ್ ಆರ್ಟಿಕಲ್ ಅನ್ನು ಪ್ರಕಟ ಮಾಡಿತ್ತು (ಇಲ್ಲಿ).
ಒಟ್ಟಾರೆಯಾಗಿ ಹೇಳುವುದಾದರೆ, ರತನ್ ಟಾಟಾ ನೀಡಿದ ದೇಣಿಗೆಯಿಂದ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ 2500 ಬುಲೆಟ್ ಪ್ರೂಫ್ ಸ್ಕಾರ್ಪಿಯೋ ವಾಹನಗಳನ್ನು ಪಡೆದಿದೆ ಎಂಬ ವೈರಲ್ ಹೇಳಿಕೆ ಸುಳ್ಳು.