ಆಫ್ರಿಕನ್ ದೇಶವಾದ ಎರಿಟ್ರಿಯಾದಲ್ಲಿ ಪ್ರತಿಯೊಬ್ಬ ಪುರುಷನು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಜೈಲಿಗೆ ಹೋಗಬೇಕಾಗುತ್ತದೆ. ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‍ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯ್ನು ಪರಿಶೀಲಿಸೋಣ.
ಪ್ರತಿಪಾದನೆ: ಎರಿಟ್ರಿಯಾದಲ್ಲಿ ಪುರುಷರು ಇಬ್ಬರು ಮಹಿಳೆಯರನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಅವರು ಜೈಲಿಗೆ ಹೋಗುತ್ತಾರೆ.
ನಿಜಾಂಶ: ಇದು ಗಾಸಿಪ್ ವೆಬ್‌ಸೈಟ್‌ನಿಂದ 2016 ರಲ್ಲಿ ಪ್ರಾರಂಭವಾದ ಕಟ್ಟುಕಥೆಯಾಗಿದೆ. ಈ ಕಥೆ ಹೆಚ್ಚು ಪ್ರಚಾರಗೊಂಡಾಗ, ಎರಿಟ್ರಿಯನ್ ಸರ್ಕಾರವು ಪ್ರತಿಕ್ರಿಯೆಯಾಗಿ, ಕಥೆಯನ್ನು ಎಣೆಯಲಾಗಿದೆ ಎಂದು ಹೇಳಿತ್ತು. ದೇಶದ ದಂಡಸಂಹಿತೆಯ ಪ್ರಕಾರ ಎರಿಟ್ರಿಯಾದಲ್ಲಿ ಬಹುಪತ್ನಿತ್ವ ಕಾನೂನುಬಾಹಿರವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡದಾಗ, 2016 ರಲ್ಲಿ ಹಂಚಿಕೊಳ್ಳಲಾದ ಈ ಕಥೆಯ ಕುರಿತು ಕೆಲವು ಮಾಧ್ಯಮ ವರದಿಗಳು ಲಭ್ಯವಾಗವೆ. BBC ಯ ವರದಿಯ ಪ್ರಕಾರ, ಈ ವಂಚನೆಯ ಕಥೆಯನ್ನು ಮೊದಲು ಕೀನ್ಯಾದ Crazy Monday ಎಂಬ ವಿಡಂಬನಾತ್ಮಕ ಅಂಕಣದಿಂದ ಪ್ರಕಟಿಸಲಾಗಿದೆ. ಈ ಕಥೆಯು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಈ ಕಥೆಯ ಕುರಿತು ಕೆಲವು ಇತರ ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.
ಎರಿಟ್ರಿಯನ್ ಸರ್ಕಾರದ ಪ್ರತಿಕ್ರಿಯೆ
2016 ರಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಎರಿಟ್ರಿಯಾದ ಮಾಹಿತಿ ಸಚಿವ ಯೆಮನ್ ಜಿ. ಮೆಸ್ಕೆಲ್, “ಕಡ್ಡಾಯ ಬಹುಪತ್ನಿತ್ವದ ಕುರಿತಾದ ಮುಫ್ತಿಯವರ ಊಹೆಯ ಧಾರ್ಮಿಕ ತೀರ್ಪಿನ ಈ ಹಾಸ್ಯಾಸ್ಪದ, ಕಟ್ಟುಕಥೆ ಮತ್ತು ಕ್ಷುಲ್ಲಕ ಕಥೆಯನ್ನು ಮಾಧ್ಯಮಗಳು ವೈಭವೀಕರಿಸಿ ಸುಖಿಸುತ್ತಿವೆ” ಎಂದು ಹೇಳೀದ್ದಾರೆ. ಎರಿಟ್ರಿಯಾದ ಮತ್ತೊಬ್ಬ ಅಧಿಕಾರಿ [ಎರಿಟ್ರಿಯನ್ ರಾಜಧಾನಿ] “ಅಸ್ಮಾರಾದಲ್ಲಿ ಒಬ್ಬ ಹುಚ್ಚನಿಗೆ ಈ ಕಥೆ ನಿಜವಲ್ಲ ಎಂದು ತಿಳಿಯುತ್ತದೆ ಆದರೆ ಈ ಮಾಧ್ಯಮಗಳಿಗೆ ತಿಳಿಯುವುದಿಲ್ಲವೆ ಎಂದು ಹೇಳಿರುವುದನ್ನು, BBC ವರದಿ ಮಾಡಿದೆ.
ಎರಿಟ್ರಿಯಾದ ದಂಡಸಂಹಿತೆಯ ಪ್ರಕಾರ, ಬಹುಪತ್ನಿತ್ವ ಕಾನೂನುಬಾಹಿರವಾಗಿದೆ. ಈ ಕಥೆಯು ಕಟ್ಟುಕತೆಯಾಗಿದ್ದು , ಈಗ ಮತ್ತೆ ನಿಜವಾದ ಘಟನೆ ಎಂಬಂತೆ ಹಂಚಿಕೊಳ್ಳಲಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಎರಿಟ್ರಿಯಾದಲ್ಲಿ ಬಹುಪತ್ನಿತ್ವವನ್ನು ಕಾನೂನುಬದ್ಧಗೊಳಿಸಲಾಗಿಲ್ಲ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕಥೆಯು ಕಟ್ಟುಕಥೆಯಾಗಿದೆ. ಈ ಕಥೆ 2016 ರಲ್ಲಿ ಹೆಚ್ಚು ಈ ಕಥೆ ಹೆಚ್ಚು ಪ್ರಚಾರಗೊಂಡಾಗ, ಎರಿಟ್ರಿಯನ್ ಸರ್ಕಾರವು ಪ್ರತಿಕ್ರಿಯೆ ನೀಡಿ ಈ ಕಥೆ ಸುಳ್ಳು ಎಂದು ಹೇಳಿತ್ತು. ಎರಿಟ್ರಿಯಾದ ದಂಡಸಂಹಿತೆಯ ಪ್ರಕಾರ, ಬಹುಪತ್ನಿತ್ವ ಕಾನೂನುಬಾಹಿರವಾಗಿದೆ. ಈ ಕಥೆಯು ಕಟ್ಟುಕತೆಯಾಗಿದ್ದು , ಈಗ ಮತ್ತೆ ನಿಜವಾದ ಘಟನೆ ಎಂಬಂತೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾನೆ ತಪ್ಪಾಗಿದೆ.