ಪ್ರಸ್ತುತ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯ ನಡುವೆ (ಇಲ್ಲಿ, ಇಲ್ಲಿ), ಭಾರತದ ಹೆಸರಾಂತ ಕವಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ಬಾಂಗ್ಲಾದೇಶದಲ್ಲಿ (ಇಲ್ಲಿ, ಇಲ್ಲಿ, ಇಲ್ಲಿ) ಧ್ವಂಸಗೊಳಿಸಲಾಗಿದೆ ಎಂದು ಹೇಳುವ ವೀಡಿಯೊ ಮತ್ತು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಹಾಗಾದರೆ ಈ ಲೇಖನದಲ್ಲಿ, ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್ : ಪ್ರಸ್ತುತ 2024ರಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯ ನಡುವೆ ರವೀಂದ್ರನಾಥ ಟ್ಯಾಗೋರ್ ಅವರ ಧ್ವಂಸಗೊಂಡ ಪ್ರತಿಮೆಯನ್ನು ತೋರಿಸುವ ದೃಶ್ಯಗಳು.
ಫ್ಯಾಕ್ಟ್ : ಈ ದೃಶ್ಯಗಳು 2023ಕ್ಕೆ ಸಂಬಂಧಿಸಿದ್ದಾಗಿದ್ದು, ಇತ್ತೀಚಿನ ಬಾಂಗ್ಲಾದೇಶದಲ್ಲಿ 2024 ರ ಗಲಭೆಗೆ ಸಂಬಂಧಿಸಿಲ್ಲ. ವೈರಲ್ ಫೋಟೋವು ಢಾಕಾ ವಿಶ್ವವಿದ್ಯಾಲಯದಲ್ಲಿ ಧ್ವಂಸಗೊಂಡ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ತೋರಿಸುತ್ತದೆ, ವೈರಲ್ ವೀಡಿಯೊ ಅದೇ ವಿಶ್ವವಿದ್ಯಾಲಯದಲ್ಲಿ ಟ್ಯಾಗೋರ್ ಅವರ ಪ್ರತಿಮೆಯನ್ನು ಸ್ಥಾಪಿಸುವುದನ್ನು ತೋರಿಸುತ್ತದೆ. ವರದಿಗಳ ಪ್ರಕಾರ, ಟ್ಯಾಗೋರ್ ಅವರ ಪ್ರತಿಮೆಯನ್ನು ವಿದ್ಯಾರ್ಥಿಗಳು ಸೆನ್ಸಾರ್ಶಿಪ್ ಮತ್ತು ದಬ್ಬಾಳಿಕೆಯ ವಿರುದ್ಧ ಪ್ರತಿಭಟನೆಯಾಗಿ ರಚಿಸಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿರುವ ರಾಜು ಸ್ಮಾರಕ ಪ್ರತಿಮೆಯ ಪಕ್ಕದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಪ್ರತಿಮೆಯನ್ನು ಇರಿಸಿದ್ದರಿಂದ ವಿಶ್ವವಿದ್ಯಾಲಯದ ಅಧಿಕಾರಿಗಳು ಅದನ್ನು ತೆಗೆದುಹಾಕಿದರು. ಆದಾಗ್ಯೂ, ವಿದ್ಯಾರ್ಥಿಗಳು ನಂತರ ವಿಶ್ವವಿದ್ಯಾಲಯದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸಿದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
2024 ರ ಜುಲೈ ನಲ್ಲಿ ಕೋಟಾ ವಿರೋಧಿ ಚಳುವಳಿಯಾಗಿ ಪ್ರಾರಂಭವಾದ ಮಾರಣಾಂತಿಕ ಪ್ರತಿಭಟನೆಗಳಿಗೆ ಬಾಂಗ್ಲಾದೇಶ ಸಾಕ್ಷಿಯಾಗಿದೆ. ಇತ್ತೀಚಿಗೆ, ಈ ಸಾಮೂಹಿಕ ಪ್ರತಿಭಟನೆಗಳು ಒಂದು ದೊಡ್ಡ ಸರ್ಕಾರದ ವಿರೋಧಿ ದಂಗೆಯಾಗಿ ಹುಟ್ಟಿಕೊಂಡಿದೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದಾಗ ಪರಿಸ್ಥಿತಿ ಉಲ್ಬಣಗೊಂಡಿತು. ಪ್ರತಿಭಟನಾಕಾರರು ಢಾಕಾದಲ್ಲಿನ ಅವರ ಅಧಿಕೃತ ನಿವಾಸವನ್ನು ಬಲವಂತವಾಗಿ ಪ್ರವೇಶಿಸಿ, ಲೂಟಿ ಮಾಡಿ (ಇಲ್ಲಿ, ಇಲ್ಲಿ) ಧ್ವಂಸಗೊಳಿಸಿದ್ದಾರೆ.
ವರದಿಗಳ ಪ್ರಕಾರ ಅಲ್ಲಿನ ಮೊಬ್ಸ್ ಗಳು ಅಲ್ಪಸಂಖ್ಯಾತರ ಮನೆಗಳ ಮತ್ತು ಅವರ ಬಿಸಿನೆಸ್ ವಲಯಗಳ ಮೇಲೆ ದಾಳಿ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ, ವಿಶೇಷವಾಗಿ ಹಿಂದೂಗಳ ಬೆಲೆಬಾಳುವ ವಸ್ತುಗಳನ್ನು (ಇಲ್ಲಿ) ಲೂಟಿ ಮಾಡಿದ್ದಾರೆ. ಹಿಂದೂ ಮನೆ ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ವರದಿಗಳೂ ಇವೆ (ಇಲ್ಲಿ). ಇನ್ನು ಹೆಚ್ಚುವರಿಯಾಗಿ, ಕೆಲವು ಕ್ಲೇಮ್ ಗಳ ಪ್ರಕಾರ ಪ್ರತಿಭಟನಾಕಾರರು ಹಿಂದೂ ಮಹಿಳೆಯರನ್ನು (ಇಲ್ಲಿ) ಅಪಹರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವೈರಲ್ ಫೋಟೋದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಢಾಕಾ ಮೂಲದ ಬಂಗಾಳಿ ಸುದ್ದಿ ಸಂಸ್ಥೆ ‘ಪ್ರೋಥೋಮ್ ಅಲೋ’ 17 ಫೆಬ್ರವರಿ 2023 ರಂದು ಪ್ರಕಟಿಸಿದ ಸುದ್ದಿ ವರದಿಗೆ ಕಾರಣವಾಯಿತು, ಅದೇ ವೈರಲ್ ಫೋಟೋವನ್ನು ಇಲ್ಲಿಯೂ ಕಾಣಬಹುದಾಗಿದೆ. ವರದಿಯ ಪ್ರಕಾರ, ಢಾಕಾ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು 14 ಫೆಬ್ರವರಿ 2023 ರಂದು ಸಾರ್ವಜನಿಕ ಕಲಾ ಪ್ರದರ್ಶನದ ಭಾಗವಾಗಿ 19.5 ಅಡಿ ಎತ್ತರದ ಟ್ಯಾಗೋರ್ ಅವರ ಶಿಲ್ಪವನ್ನು ರಾಜು ಸ್ಮಾರಕ ಶಿಲ್ಪದ ಬಳಿ ‘ಸೆನ್ಸಾರ್ಶಿಪ್’ ಮತ್ತು ಬಾಂಗ್ಲಾದೇಶದಲ್ಲಿ ‘ಸ್ಟಿಫ್ಲಿಂಗ್ ಅಂಡ್ ಫ್ರೀಡಂ ಆಫ್ ಸ್ಪೀಚ್’ ಎನ್ನುವ ವಿಷಯದ ವಿರುದ್ಧವಾಗಿ ಇದನ್ನು ನಿರ್ಮಾನಿಸಲಾಯಿತು. ಆದರೆ ಅದನ್ನು ಸ್ಥಾಪಿಸಿದ ಎರಡು ದಿನಗಳ ನಂತರ, ಪ್ರತಿಮೆಯು ಕಾಣೆಯಾಗಿದೆ. ಮುರಿದ ತಲೆ ಮತ್ತು ಇತರ ತುಣುಕುಗಳು ಅಂತಿಮವಾಗಿ ಢಾಕಾದ ಸುಹ್ರವರ್ದಿ ಉದ್ಯಾನ್ (ಗಾರ್ಡನ್ಸ್) ನಲ್ಲಿ ಕಂಡುಬಂದಿವೆ.
17 ಫೆಬ್ರವರಿ 2023 ರಂದು ಪ್ರಕಟವಾದ ಢಾಕಾ ಟ್ರಿಬ್ಯೂನ್ ವರದಿಯು ವೈರಲ್ ವೀಡಿಯೊದಲ್ಲಿರುವ ಅದೇ ಟ್ಯಾಗೋರ್ ಪ್ರತಿಮೆಯನ್ನು ಒಳಗೊಂಡಿದೆ. ವರದಿಯ ಪ್ರಕಾರ, 16 ಫೆಬ್ರವರಿ 2023 ರಂದು ಢಾಕಾ ವಿಶ್ವವಿದ್ಯಾಲಯ (ಡಿಯು) ಅಧಿಕಾರಿಗಳು ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ತೆಗೆದುಹಾಕಿದರು. ರಾಜು ಸ್ಮಾರಕ ಶಿಲ್ಪದ ಪಕ್ಕದಲ್ಲಿ ವಿದ್ಯಾರ್ಥಿಗಳು ಇದನ್ನು ಸ್ಥಾಪಿಸಿದ್ದರು. ಢಾಕಾ ವಿಶ್ವವಿದ್ಯಾಲಯದ ಪ್ರೊಕ್ಟರ್, ಪ್ರೊಫೆಸರ್ ಡಾ.ಎಕೆಎಂ ಗೋಲಮ್ ರಬ್ಬಾನಿ, ‘ಸಂಸ್ಥೆಯು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಮೆಗಳನ್ನು ಇರಿಸಬಹುದು. ಆದರೆ ಇವರು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯ ಗಮನಕ್ಕೆ ಮಾಹಿತಿ ನೀಡದೆ ಶಿಲ್ಪವನ್ನು ಸ್ಥಾಪಿಸಿದ್ದಾರೆ. ಆದ್ದರಿಂದ, ವಿಶ್ವವಿದ್ಯಾನಿಲಯದ ಆಡಳಿತಾ ಮಂಡಳಿಯು ಅದನ್ನು ತೆಗೆದುಹಾಕಿದೆ.’ ಎಂದು ತಿಳಿಸಿದ್ದಾರೆ. 16 ಫೆಬ್ರವರಿ 2023 ರ ದಿನಾಂಕದ ‘ಪ್ರೋಥಮ್ ಅಲೋ’ ಅವರ ವೀಡಿಯೊ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಇದು ಈಗ ವೈರಲ್ ಆಗಿರುವ ವೀಡಿಯೊದಲ್ಲಿರುವ ಅದೇ ದೃಶ್ಯಗಳನ್ನು ಒಳಗೊಂಡಿದೆ.
ವೈರಲ್ ಫೋಟೋವು ಟಾಗೋರ್ ಪ್ರತಿಮೆಯಿಂದ ಮುರಿದ ತಲೆಯನ್ನು ತೋರಿಸುತ್ತದೆ ಎಂದು ದೃಢಪಡಿಸುವ ಹೆಚ್ಚುವರಿ ವರದಿಗಳು ಢಾಕಾ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ಸೆನ್ಸಾರ್‌ಶಿಪ್ ವಿರುದ್ಧ ಪ್ರತಿಭಟಿಸಲು ರಚಿಸಿದ್ದಾರೆ. ಇದನ್ನು ಫೆಬ್ರವರಿ 2023 ರಲ್ಲಿ ವಿಶ್ವವಿದ್ಯಾಲಯದಿಂದ ತೆಗೆದುಹಾಕಲಾಗಿದೆ. ಈ ಕುರಿತ ಮಾಹಿತಿಯನ್ನು ಇಲ್ಲಿ ನೋಡಬಹುದು (ಇಲ್ಲಿ ಮತ್ತು ಇಲ್ಲಿ). ಫೆಬ್ರವರಿ 18, 2023 ರಂದು ಢಾಕಾ ಟ್ರಿಬ್ಯೂನ್ ಪ್ರಕಟಿಸಿದ ವರದಿಯಲ್ಲಿ, ವಿದ್ಯಾರ್ಥಿಗಳು ಪ್ರತಿಮೆಯ ಭಾಗಗಳನ್ನು ಕ್ಯಾಂಪಸ್‌ನಾದ್ಯಂತ ಚದುರಿದ ನಂತರ ಮರುನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಧ್ವಂಸಗೊಂಡ ರವೀಂದ್ರನಾಥ ಟ್ಯಾಗೋರ್ ಪ್ರತಿಮೆಯ ಹಳೆಯ ದೃಶ್ಯಗಳನ್ನು ಬಾಂಗ್ಲಾದೇಶದಲ್ಲಿಇತ್ತೀಚಿಗೆ ನಡೆಯುತ್ತಿರುವ ಗಲಭೆಗೆ ತಪ್ಪಾಗಿ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ.