ಇತ್ತೀಚೆಗೆ ಭಾರತದ ಸಂಸತ್ತಿನ ಎರಡೂ ಸದನಗಳು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದವು. ಸುಮಾರು 12 ಗಂಟೆಗಳ ಚರ್ಚೆಯ ನಂತರ ಲೋಕಸಭೆಯು ಏಪ್ರಿಲ್ 02, 2025 ರಂದು ಮಸೂದೆಯನ್ನು ಅಂಗೀಕರಿಸಿತು, 288 ಸದಸ್ಯರು ಪರವಾಗಿ ಮತ್ತು 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು. 12 ಗಂಟೆಗಳ ಚರ್ಚೆಯ ನಂತರ ರಾಜ್ಯಸಭೆಯು ಏಪ್ರಿಲ್ 04, 2025 ರ ಮುಂಜಾನೆ ಮಸೂದೆಯನ್ನು ಅಂಗೀಕರಿಸಿತು, 128 ಪರವಾಗಿ ಮತ್ತು 95 ವಿರುದ್ಧವಾಗಿ ಮತ ಚಲಾಯಿಸಿತು. ಇದರ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ಒಂದು ವೀಡಿಯೊ ಹರಿದಾಡುತ್ತಿದ್ದು, AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಸೂದೆಯ ಕುರಿತು ಸಂಸತ್ತಿನಲ್ಲಿ ಅಳುತ್ತಿರುವುದನ್ನು ತೋರಿಸುತ್ತಿದೆ ಎಂದು ಹೇಳಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರವಾದ ನಂತರ ಅಸಾದುದ್ದೀನ್ ಓವೈಸಿ ನಗುತ್ತಿರುವುದನ್ನು ತೋರಿಸಲಾಗಿದೆ ಎಂದು ಮತ್ತೊಂದು ವೀಡಿಯೊದಲ್ಲಿ (ಇಲ್ಲಿ ) ಹೇಳಲಾಗಿದೆ . ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
Video 1:

ಕ್ಲೇಮ್: AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಸಂಸತ್ತಿನಲ್ಲಿ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ವೈರಲ್ ವೀಡಿಯೊವು 2025 ರ ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ನಡೆದ ಚರ್ಚೆಗೆ ಸಂಬಂಧಿಸಿಲ್ಲ. ಇದು ಆಗಸ್ಟ್ 07, 2024 ರ ಸಂಸತ್ತಿನ ಅಧಿವೇಶನದಲ್ಲಿ ಓವೈಸಿ ತಮ್ಮ ಕನ್ನಡಕವನ್ನು ಸರಿಪಡಿಸಿಕೊಂಡು ಕಣ್ಣುಗಳನ್ನು ಉಜ್ಜುತ್ತಿರುವುವ ವಿಡಿಯೋ. ಇದಲ್ಲದೆ, ಇತ್ತೀಚಿನ ಅಧಿವೇಶನದಲ್ಲಿ, ಅವರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು, ಆದರೆ ವೈರಲ್ ವೀಡಿಯೊದಲ್ಲಿ ಅವರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ನಮ್ಮನ್ನು ಸಂಸದ್ ಟಿವಿಯಲ್ಲಿ “LS | Rajesh Ranjan Alias Pappu Yadav’s Remarks | The Finance (No.2) Bill, 2024 | ಎಂಬ ಶೀರ್ಷಿಕೆಯ ವೀಡಿಯೊದ ಎಕ್ಸ್ಟೆಂಡೆಡ್ ವರ್ಷನ್ ಗೆ ಕರೆದೊಯ್ಯಿತು. ಈ ವೀಡಿಯೊದಲ್ಲಿ, ಅಸದುದ್ದೀನ್ ಓವೈಸಿ ಕಾಂಗ್ರೆಸ್ ಸಂಸದ ಪಪ್ಪು ಯಾದವ್ ಅವರ ಹಿಂದೆ ಕುಳಿತಿರುವುದನ್ನು ಕಾಣಬಹುದು.
4:32 ಟೈಂಸ್ಟಮ್ಪ್ ನಲ್ಲಿ, ಓವೈಸಿ ತಮ್ಮ ಕನ್ನಡಕವನ್ನು ತೆಗೆದು ಕಣ್ಣುಗಳನ್ನು ಉಜ್ಜುತ್ತಿರುವುದನ್ನು ಕಾಣಬಹುದು. ವೈರಲ್ ಕ್ಲಿಪ್‌ನಲ್ಲಿ ತೋರಿಸಿರುವ ಅದೇ ದೃಶ್ಯಗಳು ಇದಾಗಿದೆ. ಆದರೆ, ಯಾದವ್ ಅವರ ಹೇಳಿಕೆಗಳ ಸಮಯದಲ್ಲಿ ಓವೈಸಿ ಭಾವನಾತ್ಮಕವಾಗಿ ಅಥವಾ ಕಣ್ಣೀರು ಸುರಿಸುತ್ತಿರುವಂತೆ ಕಾಣುತ್ತಿಲ್ಲ.
ಆಗಸ್ಟ್ 07, 2024 ರಂದು ಹಂಚಿಕೊಂಡಿರುವ AIMIM ನ ಅಫೀಷಿಯಲ್ ಫೇಸ್‌ಬುಕ್ ಪೇಜ್ ನಲ್ಲಿ ನಾವು ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಈ ಪೋಸ್ಟ್‌ನಲ್ಲಿ ಓವೈಸಿ ಸಂಸತ್ತಿನಲ್ಲಿ ಮಾತನಾಡುವಾಗ ವೈರಲ್ ವೀಡಿಯೊದಲ್ಲಿ ಕಂಡುಬರುವ ಬಟ್ಟೆಗಳನ್ನು ಧರಿಸಿರುವುದನ್ನು ತೋರಿಸುವ ಕ್ಲಿಪ್ ಸೇರಿದೆ.

ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಇತ್ತೀಚಿನ ಸಂಸತ್ತಿನ ಅಧಿವೇಶನದ ವೀಡಿಯೊವನ್ನು ಸಹ ನಾವು ಪರಿಶೀಲಿಸಿದ್ದೇವೆ. ಸರಿಯಾಗಿ ಗಮನಿಸಿದಾಗ, ಓವೈಸಿ ಅಧಿವೇಶನದಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿರುವುದು ಕಂಡುಬಂದಿದೆ, ಆದರೆ ವೈರಲ್ ವೀಡಿಯೊದಲ್ಲಿ, ಅವರು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು.
Video 2:

ಕ್ಲೇಮ್: ಲೋಕಸಭೆಯು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಇತರರು ನಗುತ್ತಿರುವ ವೀಡಿಯೊ.
ಫ್ಯಾಕ್ಟ್: ಈ ವೀಡಿಯೊ ಜನವರಿ 29, 2025 ರದ್ದು, ಮತ್ತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) 2024 ರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಾಂದರ್ಭಿಕ ಸಂಭಾಷಣೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ನಮಗೆ ಅದೇ ವೀಡಿಯೊ (ಆರ್ಕೈವ್ ಮಾಡಿದ ಲಿಂಕ್) ಸಿಕ್ಕಿತು, ಇದನ್ನು ಉತ್ತರ ಪ್ರದೇಶದ ಬಿಜೆಪಿ ರಾಜ್ಯಸಭಾ ಸಂಸದ ಬ್ರಿಜ್ ಲಾಲ್, ಜನವರಿ 29, 2025 ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಅವರು ವಿಡಿಯೋ ಡಿಕ್ರಿಬ್ಷನ್ ನಲ್ಲಿ : “ಇಂದು, 29-01-2025 ರಂದು, ಜೆಪಿಸಿ ‘ವಕ್ಫ್ ತಿದ್ದುಪಡಿ ಮಸೂದೆ-2024’ ಅನ್ನು ತೆರವುಗೊಳಿಸಿದ ನಂತರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಚಹಾ ಕುಡಿಯುತ್ತಾ, ನಗುತ್ತಾ ಮತ್ತು ತಮಾಷೆ ಮಾಡುತ್ತಾ ಮಾತನಾಡಿದರು” ಎಂದು ಹೇಳಿಕೊಂಡಿದ್ದಾರೆ.

ಇದೇ ರೀತಿಯ ದೃಶ್ಯಗಳನ್ನು ಚಿತ್ರಿಸುವ ವೀಡಿಯೊವನ್ನು ANI ಮತ್ತು PTI ನಂತಹ ಸುದ್ದಿ ಸಂಸ್ಥೆಗಳು 29 ಜನವರಿ 2025 ರಂದು ಹಂಚಿಕೊಂಡಿವೆ. ಮಾಧ್ಯಮ ವರದಿಗಳ ಪ್ರಕಾರ, ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ (JPC) ಸದಸ್ಯರು ಕರಡು ಮಸೂದೆ ಅಂಗೀಕಾರದ ನಂತರ ಚಹಾ ಸೇವಿಸಿ ಒಟ್ಟುಗೂಡಿರುವುದನ್ನು ಈ ದೃಶ್ಯಗಳು ತೋರಿಸುತ್ತವೆ. ಹಾಜರಿದ್ದವರಲ್ಲಿ ಅಸದುದ್ದೀನ್ ಓವೈಸಿ ಮತ್ತು JPC ಅಧ್ಯಕ್ಷ ಸಂಸದೆ ಜಗದಾಂಬಿಕಾ ಪಾಲ್ ಸೇರಿದಂತೆ ಇತರ ಸಮಿತಿ ಸದಸ್ಯರು ಇದ್ದರು. 29 ಜನವರಿ 2025 ರಂದು ಪ್ರಕಟವಾದ ಹಲವಾರು ಇತರ ಸುದ್ದಿ ಲೇಖನಗಳು ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅದೇ ದೃಶ್ಯಗಳನ್ನು ವರದಿ ಮಾಡಿದ್ದು, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹಳೆಯ, ಸಂಬಂಧವಿಲ್ಲದ ವೀಡಿಯೊಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ಅಸದುದ್ದೀನ್ ಓವೈಸಿ ಸಂಸತ್ತಿನಲ್ಲಿ ವಕ್ಫ್ ಮಸೂದೆ ಅಂಗೀಕಾರದ ನಂತರ ಅತ್ತು ನಗುತಿದ್ದರೆ ಎಂದು ಎನ್ನಲಾಗಿದೆ.