Fake News - Kannada
 

ಸಕ್ಕರೆ ರಹಿತ ಆಹಾರ, ಬಿಸಿ ನಿಂಬೆ ನೀರು ಮತ್ತು ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದರೊಂದಿಗೆ ಕ್ಯಾನ್ಸರ್ ಅನ್ನು ಶಮನ ಮಾಡಬಹುದು ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ

0

ಕ್ಯಾನ್ಸರ್ ಗುಣಪಡಿಸಲು ಡಾ.ಗುಪ್ತಾ ಅವರ ಆಹಾರಕ್ರಮಗಳು ಎಂಬ ಹೇಳಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಸಕ್ಕರೆಯನ್ನು ತೆಗೆದುಕೊಳ್ಳದಿರುವ ಜೊತೆಗೆ ಪ್ರತಿದಿನ ಬಿಸಿ ನಿಂಬೆ ನೀರು ಅಥವಾ ಮೂರು ಚಮಚ ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದು ಕ್ಯಾನ್ಸರ್ ಅನ್ನು ಗುಣಪಡಿಸಬಹುದು. 

ಫ್ಯಾಕ್ಟ್: ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ಗಳನ್ನು (ಸಕ್ಕರೆ-ಮುಕ್ತ ಆಹಾರದಿಂದ ಕ್ಯಾನ್ಸರ್ ಗುಣಪಡಿಸುವುದು, ಬಿಸಿ ನಿಂಬೆ ನೀರು ಮತ್ತು ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದು) ಸಮರ್ಥಿಸಲು ಯಾವುದೇ ಸಂಶೋಧನಾ ಅಧ್ಯಯನವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

”ಡಾಕ್ಟರ್ ಗುರು ಪ್ರಸಾದ್ ರೆಡ್ಡಿ ಬಿ.ವಿ” ಓಶ್ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿ ಎಂದು ಆ ಹೆಸರಿನ ವೈದ್ಯರನ್ನು ಇಂಟರ್ನೆಟ್ ನಲ್ಲಿ ಹುಡುಕಿದಾಗ ಅಂತಹ ಯಾವುದೇ ವ್ಯಕ್ತಿ ಕಂಡುಬಂದಿಲ್ಲ. ಅಲ್ಲದೆ, ಓಶ್ ಸ್ಟೇಟ್ ಮೆಡಿಕಲ್ ಫೆಸಿಲಿಟಿ ರಷ್ಯಾದಲ್ಲಿ ಅಲ್ಲ, ಕಿರ್ಗಿಸ್ತಾನ್‌ನಲ್ಲಿದೆ ಎಂದು ಕಂಡುಬಂದಿದೆ.

 ಕ್ಯಾನ್ಸರ್ ಗುಣಪಡಿಸಲು/ತಡೆಗಟ್ಟಲು ಪೋಸ್ಟ್‌ನಲ್ಲಿ, ಮುಖ್ಯವಾಗಿ ಮೂರು ನಿರ್ದಿಷ್ಟ ಆಹಾರಕ್ರಮಗಳನ್ನು ಸೂಚಿಸಲಾಗಿದೆ.

1. ಸಕ್ಕರೆ ಸೇವನೆಯನ್ನು ತಪ್ಪಿಸುವುದರಿಂದ ಕ್ಯಾನ್ಸರ್ ಕೋಶಗಳ ಸಾವಿಗೆ ಕಾರಣವಾಗುತ್ತದೆಯೇ?

ಗೂಗಲ್‌ನಲ್ಲಿ ‘ಶುಗರ್ ಇಲ್ಲದೆ ಕ್ಯಾನ್ಸರ್ ಕೋಶಗಳು ಸಾಯುತ್ತವೆ’ ಎಂಬ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ಕ್ಲೈಮ್‌ಗೆ ಸಂಬಂಧಿಸಿದ ಕೆಲವು ಲೇಖನಗಳು ದೊರಕಿದೆ. ಕ್ಯಾನ್ಸರ್ ರಿಸರ್ಚ್ ಯುಕೆ ಪ್ರಕಾರ, “ಸಕ್ಕರೆ-ಮುಕ್ತ” ಆಹಾರವನ್ನು ಅನುಸರಿಸುವುದರಿಂದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ ಅಥವಾ ನೀವು ರೋಗನಿರ್ಣಯ ಮಾಡಿದರೆ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.’ ಕ್ಯಾನ್ಸರ್ ಕೌನ್ಸಿಲ್ ಆಸ್ಟ್ರೇಲಿಯಾದ ಸಿಇಒ ಮತ್ತು ಪ್ರೊಫೆಸರ್ ಸಂಚಿಯಾ ಅರಾಂಡಾ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ “ಕ್ಯಾನ್ಸರ್ ಕೋಶಗಳಿಗೆ ಸಕ್ಕರೆ ಬರುವುದನ್ನು ನಿಲ್ಲಿಸುವುದರಿಂದ ನಿಮ್ಮ ದೇಹದ ಆರೋಗ್ಯಕರ ಜೀವಕೋಶಗಳು ಅಗತ್ಯವಾದ ಸಕ್ಕರೆಗಳಿಂದ ಹಸಿವಿನಿಂದ ಬಳಲುತ್ತವೆ. ಇದು ನಿಮ್ಮ ತೂಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, [ಮತ್ತು] ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ಪ್ರಗತಿಯಾಗುವ ಸಾಧ್ಯತೆಯಿದೆ.” ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆದ್ದರಿಂದ, ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸುವುದು ಕೆಲವೊಮ್ಮೆ ಋಣಾತ್ಮಕ ಪರಿಣಾಮ ಬೀರಬಹುದು. ಹಾಗೇಯೇ ಅಮೇರಿಕನ್ ಇನ್‌ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್‌ನ ಇದೇ ರೀತಿಯ ಲೇಖನವನ್ನು ಇಲ್ಲಿ ಓದಬಹುದು.

ಸಿಂಗಾಪುರ ಮತ್ತು ಆಸ್ಟ್ರಿಯಾದ ಕೆಲವು ವಿಜ್ಞಾನಿಗಳು ನಡೆಸಿದ ಕೆಲವು ಸಂಶೋಧನೆಗಳಿವೆ. ಇದು  ಕ್ಯಾಲ್ಸಿಯಂನ ಪರಿಸ್ಥಿತಿಗಳಲ್ಲಿ ಸಕ್ಕರೆಯ ಪ್ರಭಾವದಿಂದ ಹಸಿವಿನಿಂದ ಕೆಲವು ಕ್ಯಾನ್ಸರ್ ಕೋಶಗಳನ್ನು ಮಾತ್ರ ಕೊಲ್ಲಬಹುದು ಎಂದು ಕಂಡುಹಿಡಿದಿದೆ.  ಏಷ್ಯನ್ ಸೈಂಟಿಸ್ಟ್ ಲೇಖನದ ಪ್ರಕಾರ, ‘ಭವಿಷ್ಯದಲ್ಲಿ ಹೊಸ ಕ್ಯಾನ್ಸರ್ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲು ತಮ್ಮ ಸಂಶೋಧನೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿಯನ್ನು ಟೀಮ್ ಹೊಂದಿದೆ.’ ಎಂದು ತಿಳಿಸಿದೆ. ಈ ಸಂಶೋಧನಾ ಲೇಖನವನ್ನು ಇಲ್ಲಿ ಓದಬಹುದು.

2. ಬಿಸಿ ನಿಂಬೆ ನೀರು ಕುಡಿಯುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದೇ?

ಈ ಕ್ಲೇಮ್ ನ ಕುರಿತು ಯಾವುದೇ ಮಾಹಿತಿಗಾಗಿ ಹುಡುಕಿದಾಗ, ‘ನ್ಯಾಷನಲ್ ಸೆಂಟರ್ ಫಾರ್ ಹೆಲ್ತ್ ರಿಸರ್ಚ್’ ತನ್ನ ವೆಬ್‌ಸೈಟ್‌ನಲ್ಲಿ ‘ನಿಂಬೆಹಣ್ಣುಗಳು ಕ್ಯಾನ್ಸರ್ ಅನ್ನು ತಡೆಯುತ್ತದೆಯೇ?’ ಎಂಬ ಕ್ಯಾಪ್ಶನ್ ನೊಂದಿಗೆ  ಆರ್ಟಿಕಲ್ ಅನ್ನು ಪ್ರಕಟಿಸಿರುವುದು ಕಂಡುಬಂದಿದೆ. ಈ ಆರ್ಟಿಕಲ್ ಪ್ರಕಾರ, “ನಿಂಬೆಯು ಎಲ್ಲಾ ರೀತಿಯ ಕ್ಯಾನ್ಸರ್ಗೆ ರೆಮೆಡಿಯಾಗಿದೆ” ಮತ್ತು ‘ಕಿಮೋಥೆರಪಿಗಿಂತ ನಿಂಬೆಹಣ್ಣುಗಳು 10,000 ಪಟ್ಟು ಬಲಶಾಲಿಯಾಗಿದೆ’ ಎಂಬ ಹೇಳಿಕೆಗಳು ಸುಳ್ಳು.” ಅಲ್ಲದೆ, 2011 ರಲ್ಲಿ ಸ್ನೋಪ್ಸ್‌ನ ಫ್ಯಾಕ್ಟ್ – ಚೆಕ್ ಆರ್ಟಿಕಲ್, ಕ್ಲೈಮ್ ಅನ್ನು ಸುಳ್ಳು ಎಂದು ರೇಟಿಂಗ್ ಮಾಡುವುದನ್ನು ಫಲಿತಾಂಶಗಳಲ್ಲಿ ಕಾಣಬಹುದು. ವೈದ್ಯಕೀಯ ಸಂಸ್ಥೆಗಳಿಂದ ಈ ಸಮಸ್ಯೆಯ ಕುರಿತು ಇನ್ನೂ ಕೆಲವು ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

3. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ 3 ಚಮಚ ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದು ಕ್ಯಾನ್ಸರ್ ಅನ್ನು ಗುಣಪಡಿಸಬಹುದೇ?

ತೆಂಗಿನ ಎಣ್ಣೆ ಕ್ಯಾನ್ಸರ್ ಗುಣಪಡಿಸುತ್ತದೆ’ ಎಂಬ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ, ಈ ನಿರ್ದಿಷ್ಟ ವಿಷಯದ ಬಗ್ಗೆ ಸರಿಯಾದ ಸಂಶೋಧನೆ ಇಂಟರ್ನೆಟ್‌ನಲ್ಲಿ ಕಂಡುಬಂದಿಲ್ಲ. ತೆಂಗಿನ ಎಣ್ಣೆಯ ಕೆಲವು ಘಟಕಗಳು ಕೆಲವು ರೀತಿಯ ಕ್ಯಾನ್ಸರ್‌ಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ವರದಿ ಮಾಡುವ ಕೆಲವು ಆರ್ಟಿಕಲ್ ಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಆದರೆ, ಇವು ಸಹ ಈ ಕುರಿತು ಹೆಚ್ಚಿನ ಅಧ್ಯಯನಗಳಿಗೆ ತಿಳಿಸಿವೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ತನ್ನ ವೆಬ್‌ಸೈಟ್‌ನಲ್ಲಿ, ‘ಕೊಬ್ಬರಿ ಎಣ್ಣೆಯ ಅನೇಕ ಹೆಲ್ಥ್ ಕ್ಲೇಮ್ ಗಳು 100% medium-chain triglycerides (MCTs), ಎಂದು ಸಂಶೋಧನೆಗಳು ತಿಳಿಸಿವೆ. ಇದು ಸೂಪರ್ ಮಾರ್ಕೆಟ್ನಲ್ಲಿರುವ  ವಾಣಿಜ್ಯ ತೆಂಗಿನ ಎಣ್ಣೆ ಅಲ್ಲ.’  ಹಾಗಾಗಿ, ತೆಂಗಿನಕಾಯಿ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಕೆಲವು ಸಂಶೋಧನಾ ಅಧ್ಯಯನಗಳು ಹೇಳಿಕೊಂಡರೂ, ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ತೆಂಗಿನ ಎಣ್ಣೆಯಲ್ಲ ಎಂದು ತಿಳಿಸಿದೆ.

ಕ್ಯಾನ್ಸರ್ ರಿಸರ್ಚ್ – ಯುಕೆ ಪ್ರಕಾರ  ಕ್ಯಾನ್ಸರ್ ಕುರಿತು ಇನ್ನೂ ಕೆಲವು ವಿಷಯಗಳನ್ನು ಇಲ್ಲಿ ಓದಬಹುದು.

ಕೊನೆಯದಾಗಿ ಹೇಳುವುದಾದರೆ, ಸಕ್ಕರೆ ಮುಕ್ತ ಆಹಾರ, ಬಿಸಿ ನಿಂಬೆ ನೀರು ಮತ್ತು ಸಾವಯವ ತೆಂಗಿನ ಎಣ್ಣೆಯನ್ನು ಕುಡಿಯುವುದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎನ್ನುವ ಕ್ಲೇಮ್ ಗೆ ಯಾವುದೇ ವೈಜಾನಿಕ ಆಧಾರಗಳಿಲ್ಲ. 

Share.

Comments are closed.

scroll