ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಫೋಟೋ ಮತ್ತು ಅದರೊಂದಿಗೆ ಒಂದು ಸಂದೇಶವಿರುವ ಚಿತ್ರವೊಂದು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ಆ ಸಂದೇಶವು ಹಿಂದಿಯಲ್ಲಿದ್ದು, ಅದರ ಕನ್ನಡ ಅನುವಾದ ಹೀಗಿದೆ: “ಹಿಂದೂಗಳು ರಾಮನಂತೆ ಶಾಂತವಾಗಿರುವವರೆಗೆ ರಾಮನ ಅಸ್ತಿತ್ವದ ಬಗ್ಗೆ ಪುರಾವೆಗಳನ್ನು ಕೇಳಲಾಗುತ್ತಿರುತ್ತದೆ, ಯಾವ ದಿನ ಅವರು ಪರಶುರಾಮನಂತೆ ಆಕ್ರಮಣಕಾರಿಯಾಗುತ್ತಾರೋ, ಅಂದು ಬಾಬರನ ಸಂತತಿಯೂ ಜೈ ಶ್ರೀ ರಾಮ್ ಎಂದು ಹೇಳುತ್ತದೆ”. ಹಾಗಾದರೆ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬೆಂಜಮಿನ್ ನೆತನ್ಯಾಹು: “ಹಿಂದೂಗಳು ರಾಮನಂತೆ ಶಾಂತವಾಗಿರುವವರೆಗೆ ರಾಮನ ಅಸ್ತಿತ್ವದ ಬಗ್ಗೆ ಪುರಾವೆಗಳನ್ನು ಕೇಳಲಾಗುತ್ತಿರುತ್ತದೆ, ಯಾವ ದಿನ ಅವರು ಪರಶುರಾಮನಂತೆ ಆಕ್ರಮಣಕಾರಿಯಾಗುತ್ತಾರೋ, ಅಂದು ಬಾಬರನ ಸಂತತಿಯೂ ಜೈ ಶ್ರೀ ರಾಮ್ ಎಂದು ಹೇಳುತ್ತದೆ.”
ಫ್ಯಾಕ್ಟ್: ನೆತನ್ಯಾಹು ಅವರು ಈ ರೀತಿಯ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಈ ಹೇಳಿಕೆಗಳನ್ನು ಅವರು ನೀಡಿದ್ದಾರೆ ಎಂಬುದನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮೂಲಗಳು ಕಂಡುಬಂದಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಈ ಕ್ಲೇಮ್ ಸುಳ್ಳು.
ರಾಮನ ಅಸ್ತಿತ್ವದ ಪುರಾವೆಗಳಿಗಾಗಿ ಹಿಂದೂಗಳನ್ನು ಕೇಳಲಾಗುತ್ತಿರುವ ಬಗ್ಗೆ ಬೆಂಜಮಿನ್ ನೆತನ್ಯಾಹು’ಎಂಬ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ, ನೆತನ್ಯಾಹು ಅವರು ಅಂತಹ ಹೇಳಿಕೆಗಳನ್ನು ನೀಡಿದ್ದಾರೆಂಬ ಬಗ್ಗೆ ಯಾವುದೇ ಸಂಬಂಧಿತ ಮಾಹಿತಿ ಸರ್ಚ್ ರಿಸಲ್ಟ್‌ಗಳಲ್ಲಿ ಕಂಡುಬಂದಿಲ್ಲ.

ಒಂದು ವೇಳೆ ನೆತನ್ಯಾಹು ಅವರು ನಿಜವಾಗಿಯೂ ಅಂತಹ ಹೇಳಿಕೆಗಳನ್ನು ನೀಡಿದ್ದರೆ, ಭಾರತದ ಎಲ್ಲಾ ಪ್ರಮುಖ ದಿನಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಅದನ್ನು ವರದಿ ಮಾಡುತ್ತಿದ್ದವು. ಆದರೆ ಯಾವುದೇ ಸುದ್ದಿ ಸಂಸ್ಥೆಯು ನೆತನ್ಯಾಹು ಅವರು ಅಂತಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ವರದಿ ಮಾಡಿಲ್ಲ. ಆದ್ದರಿಂದ, ಸುಳ್ಳು ಹೇಳಿಕೆಗಳನ್ನು ನೆತನ್ಯಾಹು ಅವರಿಗೆ ಆರೋಪಿಸಲಾಗುತ್ತಿದೆ.
ಕೊನೆಯದಾಗಿ ಹೇಳುವುದಾದರೆ, ಬೆಂಜಮಿನ್ ನೆತನ್ಯಾಹು ಅವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.

