ಕೇರಳದ ಕಾಸರಗೋಡಿನಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿ ಮುಸ್ಲಿಂ ಲೀಗ್ ಕಚೇರಿಯ ಉದ್ಘಾಟನೆಯನ್ನು ಆಚರಿಸಲಾಗಿದೆ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಮುಸ್ಲಿಂ ಲೀಗ್ ಆಫೀಸ್ ಆರಂಗಡಿ” ಕಟ್ಟಡದ ಉದ್ಘಾಟನಾ ಸಮಯದಲ್ಲಿ ಅಲ್ಲಿನ ಯುವಕರು ಹಸಿರು ಟೀ ಶರ್ಟ್‌ಗಳನ್ನು ಧರಿಸಿ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊವನ್ನು ಕಾಣಬಹುದಾಗಿದೆ. ಹಾಗಾದರೆ ಈ ಲೇಖನದ ಮೂಲಕ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಕೇರಳದ ಕಾಸರಗೋಡಿನಲ್ಲಿ ಐಯುಎಂಎಲ್ ಕಾರ್ಯಕರ್ತರು ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆ ವೇಳೆ ಪಾಕಿಸ್ತಾನದ ಕ್ರಿಕೆಟ್ ಜೆರ್ಸಿ ಧರಿಸಿದ್ದರು
ಫ್ಯಾಕ್ಟ್: ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಕಚೇರಿ ಉದ್ಘಾಟನೆ ವೇಳೆ ಐಯುಎಂಎಲ್ ಕಾರ್ಯಕರ್ತರು ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿ ಧರಿಸಿರಲಿಲ್ಲ. ಅವರ ಶರ್ಟ್ ನ ಎದುರು ಇಂಗ್ಲಿಷ್‌ನಲ್ಲಿ ‘ಆರಂಗಡಿ’ಎಂದು ಬರೆದ ಹಸಿರು ಜೆರ್ಸಿಯನ್ನು ಧರಿಸಿದ್ದರು. ಜೆರ್ಸಿಯ ಬಲಭಾಗದಲ್ಲಿ, ಐಯುಎಂಎಲ್ ನ ಲಾಂಛನವನ್ನು ಕಾಣಬಹುದು. ಮುಂಭಾಗದ ಎಡಭಾಗದಲ್ಲಿ, ನಾವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನ ಧ್ವಜವನ್ನು ಹಾಕಲಾಗಿದೆ, ಜೆರ್ಸಿಯ ಬಲಗೈಯಲ್ಲಿ ಇಂಗ್ಲಿಷ್‌ನಲ್ಲಿ ‘IUML’ ಮತ್ತು ಎಡಗೈಯಲ್ಲಿ ‘MYL’ ಎಂದು ಬರೆಯಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನಲ್ಲಿರುವ ನಿಜಾಂಶವನ್ನು ಪರಿಶೀಲಿಸಲು ಸಂಬಂಧಿತ ಕೀವರ್ಡ್ಗಳನ್ನೂ ಬಳಸಿ ನಾವು ಸರ್ಚ್ ಮಾಡಿದ್ದೇವೆ. ಈ ಮೂಲಕ ಇತ್ತೀಚಿಗೆ ಕೇರಳದ ಕಾಸರಗೋಡಿನ ಆರಂಗಡಿಯಲ್ಲಿ ಹೊಸ ಐಯುಎಂಎಲ್ ಕಚೇರಿಯನ್ನು ಉದ್ಘಾಟಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ‘manishh_bhatt’ (ಮನೀಶ್ ಭಟ್) ಹೆಸರಿನ ಇಸ್ಟಾಗ್ರಾಮ್ ಖಾತೆಯನ್ನು ಕಂಡುಕೊಂಡೆವು. ಇಲ್ಲಿ ಪೋಸ್ಟ್ ಮಾಡಿರುವ ಒಂದು ವಿಡಿಯೋ ನಮ್ಮ ಗಮನಕ್ಕೆ ಬಂತು. ಅದನ್ನು ಸರಿಯಾಗಿ ಗಮನಿಸಿದಾಗ ”ಟೀ ಶರ್ಟ್ ನ ಮೇಲೆ ”ಕೇರಳದ ಮುಸ್ಲಿಂ ಲೀಗ್ ಕಚೇರಿ, ಆರಂಗಡಿ ಎಂದು ಬರೆಯಲಾಗಿದೆ. ಆರಂಗಡಿ ಕೇರಳದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ. ಅಲ್ಲಿರುವ ಧ್ವಜವು ಅಖಿಲ ಭಾರತ ಮುಸ್ಲಿಂ ಲೀಗ್ನದ್ದಾಗಿದೆ. ಇನ್ನು ಟೀ ಶರ್ಟ್ ನ ಮುಂದುಗಡೆ ”ಆರಂಗಡಿ”, ಮತ್ತು ಶರ್ಟ್ ನ ಭುಜದ ಮೇಲೆ “MYL” ಎಂದು ಬರೆದಿರುವುದನ್ನು ಸ್ಪಷ್ಟವಾಗಿ ಕಾಣಬಹುದು.
ಇದನ್ನು ಕ್ಲೂಆಗಿ ತೆಗೆದುಕೊಂಡ, ನಮಗೆ ಫೇಸ್ಬುಕ್ ನಲ್ಲಿಯೂ ‘ಪಚ್ಚಪಡ ಆರಂಗಡಿ’ ಎಂಬ ಖಾತೆಯಲ್ಲಿಯೂ ಕಾಸರಗೋಡು ಜಿಲ್ಲೆಯ ಆರಂಗಡಿಯಲ್ಲಿ ಮುಸ್ಲಿಂ ಲೀಗ್ ಕಚೇರಿಯ ಉದ್ಘಾಟನೆಯ ಇದೇ ರೀತಿಯ ವೀಡಿಯೊ (ಇಲ್ಲಿ) ಲಭ್ಯವಾಗಿದೆ.
ಜೂನ್ 28, 2024 ರಂದು ‘ಪಚ್ಚಪಡ ಆರಂಗಡಿ’ ಮುಸ್ಲಿಂ ಲೀಗ್ ಕಾರ್ಯಕರ್ತರು ಇದೇ ವೈರಲ್ ವಿಡಿಯೋದಲ್ಲಿರುವ ಜೆರ್ಸಿಯನ್ನು ಧರಿಸಿ ರೋಡ್ ಶೋ ನಡೆಸಿದ ವಿಡಿಯೋ ಅವರ ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಜೆರ್ಸಿಯ ಮೇಲೆ ”Arangadi’ ಎಂದು ಇಂಗ್ಲಿಷ್ನಲ್ಲಿ ಬರೆದಿರುವ ಅಕ್ಷರಗಳನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಇನ್ನು ಈ ಜೆರ್ಸಿಯ ಮುಂದಿನ ಬಲಭಾಗದಲ್ಲಿ ಲೀಗ್ ನ ಚಿನ್ಹೆ ಮತ್ತು ಲೋಗೋ ಸಹ ಇದ್ದು, ಇದು ಪಚ್ಚಪಡ ಆರಂಗಡಿ ಫೇಸ್‌ಬುಕ್ ಪುಟದ ಪ್ರೊಫೈಲ್ ನಲ್ಲಿ ಬಳಸಲಾದ ಅದೇ ಲೋಗೋವಾಗಿದೆ. ಶರ್ಟ್ ಮುಂಭಾಗದ ಎಡಭಾಗದಲ್ಲಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಬಾವುಟವನ್ನು ನೋಡಬಹುದು. ಜರ್ಸಿಯ ಬಲಗೈಯಲ್ಲಿ “IUML” ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ ಮತ್ತು ಜರ್ಸಿಯ ಎಡಗೈಯಲ್ಲಿ “MYL” ಅನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇದರ ಸ್ಕ್ರೀನ್ಶಾಟ್ಗಳನ್ನು ಇಲ್ಲಿ ಕೆಳಗೆ ಕಾಣಬಹುದು.
IUML ನ ಕಾರ್ಯಕರ್ತರು ಧರಿಸಿರುವ ಜೆರ್ಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿಯ ನಡುವೆ ಹಸಿರು ಬಣ್ಣವನ್ನು ಹೊರತುಪಡಿಸಿ ಯಾವುದೇ ಹೋಲಿಕೆಗಳಿಲ್ಲ. ಈ ಮೂಲಕ ಕೇರಳದ ಕಾಸರಗೋಡಿನಲ್ಲಿ ನಡೆದ ಮುಸ್ಲಿಂ ಲೀಗ್ ಕಛೇರಿ ಉದ್ಘಾಟನೆ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿ ಧರಿಸಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಸ್ಪಷ್ಟ ಅವಲೋಕಾನನಕ್ಕಾಗಿ ಕೆಳಗೆ ಪಾಕಿಸ್ತಾನದ ಜೆರ್ಸಿಯನ್ನು ನೋಡಬಹುದು.
ಕೊನೆಯದಾಗಿ ಹೇಳುವುದಾದರೆ, ಕೇರಳದ ಕಾಸರಗೋಡಿನಲ್ಲಿ ನಡೆದ ಮುಸ್ಲಿಂ ಲೀಗ್ ಕಚೇರಿ ಉದ್ಘಾಟನಾ ಸಮಯದಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿರಲಿಲ್ಲ.