Fake News - Kannada
 

ಮಹಾ ಕುಂಭಮೇಳ ಚಿತ್ರವನ್ನು ಇಸ್ರೋದ ಉಪಗ್ರಹ ಸೆರೆಹಿಡಿದದನ್ನು ಐಎಸ್ಎಸ್ ಮತ್ತು ಸುನೀತಾ ವಿಲಿಯಮ್ಸ್ ಸೆರೆಹಿಡಿದ ಚಿತ್ರ ಎಂದು ತಪ್ಪಾಗಿ ಹೇಳಲಾಗಿದೆ

0

ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್/ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಒಂಬತ್ತು ತಿಂಗಳುಗಳನ್ನು ಕಳೆದ ನಂತರ, ಮಾರ್ಚ್ 18, 2025 ರಂದು ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹಚರ ಭೂಮಿಗೆ ಮರಳುವ ಸಂದರ್ಭದಲ್ಲಿ, ಎರಡು ಫೋಟೋಗಳು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಫೋಟೋಗಳು 2025 ರ ಪ್ರಯಾಗರಾಜ್ ಮಹಾ ಕುಂಭಮೇಳವನ್ನು ತೋರಿಸುತ್ತವೆ ಎಂದು ಹೇಳಲಾಗಿದ್ದು, ಇದನ್ನು ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಸೆರೆಹಿಡಿದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಹಲವಾರು ಉಸೆರ್ಸ್  ಕಾಮೆಂಟ್‌ಗಳಲ್ಲಿ ಈ ಫೋಟೋಗಳ ನಿಜವಲ್ಲ ಎಂಬ ಅನುಮಾನಗಳನ್ನು ತೋರಿದ್ದಾರೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 2025 ರಲ್ಲಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಸೆರೆಹಿಡಿದ ಪ್ರಯಾಗರಾಜ್ ಮಹಾ ಕುಂಭಮೇಳದ ಫೋಟೋಗಳು.

ಫ್ಯಾಕ್ಟ್: ಇಲ್ಲಿರುವ ಮೊದಲ ಫೋಟೋ ಜನವರಿ 14, 2021 ರಂದು ತೆಗೆದ ಹರಿದ್ವಾರ ಘಾಟ್‌ಗಳ ಅರಿಯಲ್ ವ್ಯೂ ಚಿತ್ರವಾಗಿದ್ದರೆ,  ಎರಡನೇ ಫೋಟೋ ಡಿಸೆಂಬರ್ 22, 2024 ರಂದು ಇಸ್ರೋದ EOS-04 ಉಪಗ್ರಹದಿಂದ ಸೆರೆಹಿಡಿಯಲಾದ ಪ್ರಯಾಗರಾಜ್ ಸಂಗಮವನ್ನು ತೋರಿಸುತ್ತದೆ. ಸುನೀತಾ ವಿಲಿಯಮ್ಸ್ ಅವರ ಸೋದರಸಂಬಂಧಿ  ISS ನಿಂದ ಕುಂಭಮೇಳದ ಫೋಟೋವನ್ನು ಕಳುಹಿಸಿದ್ದಾರೆಂದು ಹೇಳಿದ್ದರೂ, NASA ಗಗನಯಾತ್ರಿ ಡೊನಾಲ್ಡ್ ಆರ್. ಪೆಟ್ಟಿಟ್ ಅವರು ಜನವರಿ 27, 2025 ರಂದು ಮಹಾ ಕುಂಭಮೇಳದ ಚಿತ್ರಗಳನ್ನು ಹಂಚಿಕೊಂಡಿದ್ದರೂ, ಇಲ್ಲಿರುವ ವೈರಲ್ ಫೋಟೋಗಳು ISS ನಿಂದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ. 

ಮೊದಲ ಫೋಟೋ:

ವೈರಲ್ ಆಗಿರುವ ಈ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸ್ಟಾಕ್ ಫೋಟೋ ವೆಬ್‌ಸೈಟ್ ಅಲಾಮಿಯಲ್ಲಿ ಅಪ್‌ಲೋಡ್ ಮಾಡಲಾದ ಒರಿಜಿನಲ್, ಎನ್ಕ್ರಾಪಡ್  ವರ್ಷನ್ ನಮಗೆ ಸಿಕ್ಕಿತು. ಇಲ್ಲಿನ ವಿವರಣೆಯು ಈ ಫೋಟೋವನ್ನು ಜನವರಿ 14, 2021 ರಂದು ತೆಗೆದುಕೊಳ್ಳಲಾಗಿದ್ದು, ಇದು  ಉತ್ತರಾಖಂಡದ ಹರಿದ್ವಾರದಲ್ಲಿರುವ ಕುಂಭ ನಗರಿಯಲ್ಲಿ ಜನರು ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡುತ್ತಿರುವುದನ್ನು ಚಿತ್ರಿಸುತ್ತದೆ ಎಂದು ಹೇಳುತ್ತದೆ. ಹರಿದ್ವಾರದ ಈ ದೃಶ್ಯಗಳನ್ನು ತೋರಿಸುವ ಇದೇ ರೀತಿಯ ಅರಿಯಲ್ ] ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಎರಡನೇ ಫೋಟೋ:

May be an image of 1 person and text that says "Kumbh From Space! oX @SUNNOBC sunnobe Sunita Williams took pictures of Mahakumbh from space reveals her cousin, further said it was largest human gathering that looked lit"

ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇಂಡಿಯನ್ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ಚಿತ್ರ ನಮಗೆ ಸಿಕ್ಕಿತು. ಇಲ್ಲಿನ ವಿವರಣೆಯು ಈ ಫೋಟೋವನ್ನು ಡಿಸೆಂಬರ್ 22, 2024 ರಂದು EOS-04 (RISAT-1A) ಸೆರೆಹಿಡಿದಿದೆ ಎಂದು ಹೇಳುತ್ತದೆ. ಇದು ಪ್ರಯಾಗ್ರಾಜ್ ಸಂಗಮ ಮತ್ತು ಗಂಗಾ ನದಿಯ ಜೂಮ್-ಇನ್ ವಿಭಾಗವನ್ನು ತೋರಿಸುತ್ತದೆ, ಇದು 2025 ರ ಮಹಾ ಕುಂಭಮೇಳಕ್ಕಾಗಿ ವ್ಯವಸ್ಥೆ ಮಾಡಲಾದ ತಾತ್ಕಾಲಿಕ ಪಾಂಟೂನ್ ಸೇತುವೆಗಳನ್ನು ಹೈಲೈಟ್ ಮಾಡುತ್ತದೆ.

A screenshot of a website  AI-generated content may be incorrect.

EOS-04 (ಭೂ ವೀಕ್ಷಣಾ ಉಪಗ್ರಹ-04), ಹಿಂದೆ RISAT-1A ಎಂದು ಕರೆಯಲಾಗುತ್ತಿತ್ತು, ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿಪಡಿಸಿದ ರಾಡಾರ್ ಇಮೇಜಿಂಗ್ ಉಪಗ್ರಹವಾಗಿದೆ. ಕೃಷಿ, ಅರಣ್ಯ, ಮಣ್ಣಿನ ತೇವಾಂಶ ಮೇಲ್ವಿಚಾರಣೆ, ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅನ್ವಯಿಕೆಗಳಿಗೆ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಆದರೆ, ಮಾಧ್ಯಮ ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ಸುನಿತಾ ವಿಲಿಯಮ್ಸ್ ಅವರ ಸೋದರಸಂಬಂಧಿ ಫಲ್ಗುಣಿ ಪಾಂಡ್ಯ, ಸುನಿತಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ತೆಗೆದ ಕುಂಭಮೇಳದ ಫೋಟೋವನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದರು. ಹೆಚ್ಚುವರಿಯಾಗಿ, 27 ಜನವರಿ 2025 ರಂದು, NASA ಗಗನಯಾತ್ರಿ ಡೊನಾಲ್ಡ್ ಆರ್. ಪೆಟ್ಟಿಟ್ ISS ನಿಂದ ತೆಗೆದ ಪ್ರಯಾಗರಾಜ್ ಮಹಾ ಕುಂಭಮೇಳದ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಸಮಯದಲ್ಲಿ, ಸುನಿತಾ ವಿಲಿಯಮ್ಸ್ ಡೊನಾಲ್ಡ್ ಆರ್. ಪೆಟ್ಟಿಟ್ ಮತ್ತು ಇತರ ಗಗನಯಾತ್ರಿಗಳೊಂದಿಗೆ ISS ನಲ್ಲಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಕುಂಭಮೇಳದ ಇಸ್ರೋ ಉಪಗ್ರಹ ಸೆರೆಹಿಡಿದ ಚಿತ್ರವನ್ನು ಸುನಿತಾ ವಿಲಿಯಮ್ಸ್ ಅವರ ಐಎಸ್ಎಸ್ ಫೋಟೋ ಎಂದು ತಪ್ಪಾಗಿ ಪ್ರಸಾರ ಮಾಡಲಾಗಿದೆ.

Share.

Comments are closed.

scroll