“ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು” ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಫೇಸ್‌ಬುಕ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ ಎನ್ನಲಾದ ಸ್ಕ್ರೀನ್‌ಶಾಟ್ ಅನ್ನು ಒಳಗೊಂಡಿರುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಸಂದೇಶದಲ್ಲಿನ ವ್ಯಾಕರಣ ದೋಷಗಳು ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದ್ದು, ಬಳಕೆದಾರರು ಮುಖ್ಯಮಂತ್ರಿ ಕಚೇರಿಗೆ ಇಂಗ್ಲಿಷ್ ಶಿಕ್ಷಕರ ಅಗತ್ಯವಿದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯು ಅವರ ಮರಣವನ್ನು ಘೋಷಿಸುವ ವ್ಯಾಕರಣಬದ್ಧವಾಗಿ ತಪ್ಪಾದ ಹೇಳಿಕೆಯನ್ನು ನೀಡಿದೆ.
ಫ್ಯಾಕ್ಟ್: ಫೇಸ್‌ಬುಕ್‌ನ ಆಟೋ ಟ್ರಸ್ಲ್ಯಾಶನ್ ಫೀಚರ್ ಬಳಸಿಕೊಂಡು ವೈರಲ್ ಸ್ಕ್ರೀನ್‌ಶಾಟ್ ಅನ್ನು ರಚಿಸಲಾಗಿದೆ. ಇದು ಮೂಲ ಕನ್ನಡ ಪಠ್ಯವನ್ನು ತಪ್ಪಾಗಿ ಅನುವಾದಿಸಿದೆ. ಸಿದ್ದರಾಮಯ್ಯ ಅವರ ಅಧಿಕೃತ ಪುಟದಲ್ಲಿರುವ ಕನ್ನಡದಲ್ಲಿರುವ ಮೂಲ ಪೋಸ್ಟ್‌ನಲ್ಲಿ ಜುಲೈ 14, 2025 ರಂದು ನಿಧನರಾದ ನಟಿ ಬಿ. ಸರೋಜಾದೇವಿ ಅವರಿಗೆ ಸಿಎಂ ಗೌರವ ಸಲ್ಲಿಸಿದ್ದಾರೆ ಎಂದು ಸರಿಯಾಗಿ ಹೇಳಲಾಗಿದೆ. ಅದು ಅವರ ಸಾವನ್ನು ಘೋಷಿಸಿಲ್ಲ, ಅಥವಾ ಅದರಲ್ಲಿ ಯಾವುದೇ ವ್ಯಾಕರಣ ದೋಷಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ವೈರಲ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ ಗೂಗಲ್ ಲೆನ್ಸ್ ಹುಡುಕಾಟವು ಜುಲೈ 15, 2025 ರಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಫೇಸ್‌ಬುಕ್ ಪೇಜ್ನಲ್ಲಿರುವ ಮೂಲ ಪೋಸ್ಟ್ (ಆರ್ಕೈವ್ ಮಾಡಲಾಗಿದೆ) ಗೆ ನಮ್ಮನ್ನು ಕರೆದೊಯ್ಯಿತು. ಇದು ವೈರಲ್ ಪೋಸ್ಟ್‌ನಲ್ಲಿ ಕಂಡುಬರುವ ಅದೇ ಫೋಟೋಗಳನ್ನು ಒಳಗೊಂಡಿದೆ. ಶೀರ್ಷಿಕೆಯ ಇಂಗ್ಲಿಷ್ ಅನುವಾದ (ಗೂಗಲ್‌ನಿಂದ) ಹೀಗಿದೆ: “ನಿನ್ನೆ ನಿಧನರಾದ ಬಹುಭಾಷಾ ತಾರೆ ಮತ್ತು ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು.” ನಾವು ಕರ್ನಾಟಕ ಸಿಎಂ ಅವರ ಅಧಿಕೃತ X ಹ್ಯಾಂಡಲ್‌ನಲ್ಲಿ ಇದೇ ರೀತಿಯ ವಿವರಣೆ ಮತ್ತು ಅದೇ ಫೋಟೋಗಳನ್ನು ಹೊಂದಿರುವ ಪೋಸ್ಟ್ ಅನ್ನು ಸಹ ಕಂಡುಕೊಂಡಿದ್ದೇವೆ.

ಫೇಸ್‌ಬುಕ್‌ನಲ್ಲಿನ ಮೂಲ ಪೋಸ್ಟ್ ಕನ್ನಡದಲ್ಲಿ ಬರೆಯಲ್ಪಟ್ಟಿದೆ ಮತ್ತು ಯಾವುದೇ ವ್ಯಾಕರಣ ದೋಷಗಳಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಅದರಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮರಣದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆದರೆ ಫೇಸ್‌ಬುಕ್‌ನ ಇನ್ ಬಿಲ್ಟ್ ಟ್ರಸ್ಲ್ಯಾಶನ್ ಫೀಚರ್ ಅನ್ನು ಬಳಸಿಕೊಂಡು ಅನುವಾದಿಸಿದಾಗ, ಇಂಗ್ಲಿಷ್ ನಲ್ಲಿ ತಪ್ಪಾಗಿ ನೀಡಿದೆ: Chief Minister Siddaramaiah passed away yesterday multilingual star, senior actress B. Took darshan of Sarojadevi’s earthly body and paid his last respects.” ( “ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು. ಬಹುಭಾಷಾ ತಾರೆ, ಹಿರಿಯ ನಟಿ ಬಿ. ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.”) ಇದು ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಅನ್ನು ಆಟೋ ಟ್ರಸ್ಲ್ಯಾಶನ್ ಆಯ್ಕೆಯನ್ನು ಬಳಸಿ ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸುತ್ತದೆ.

ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ), ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 14, 2025 ರಂದು ನಿಧನರಾದ ಹಿರಿಯ ಬಹುಭಾಷಾ ನಟಿ ಬಿ. ಸರೋಜಾದೇವಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಅವರ ಕುಟುಂಬ ಸದಸ್ಯರಿಗೆ ಅವರು ಸಾಂತ್ವನ ಹೇಳಿದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಶಾಶ್ವತ ಪರಂಪರೆಯನ್ನು ಬಿಟ್ಟುಹೋದ ನಟಿಗೆ ವಿದಾಯ ಹೇಳಲು ಹಲವಾರು ರಾಜಕೀಯ ಮುಖಂಡರು, ಚಲನಚಿತ್ರೋದ್ಯಮದ ವ್ಯಕ್ತಿಗಳು ಮತ್ತು ಅಭಿಮಾನಿಗಳು ನೆರೆದಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಅವರ ನಿಧನವನ್ನು ಘೋಷಿಸಲಿಲ್ಲ; ವೈರಲ್ ಆಗಿರುವ ಸ್ಕ್ರೀನ್‌ಶಾಟ್ ಕನ್ನಡ ಪೋಸ್ಟ್‌ನ ತಪ್ಪಾದ ಫೇಸ್ಬುಕ್ ಆಟೋ ಟ್ರಸ್ಲ್ಯಾಶನ್ ಪರಿಣಾಮವಾಗಿದೆ.