Fake News - Kannada
 

ಬಾಂಗ್ಲಾದೇಶದ ಸಂಬಂಧವಿಲ್ಲದ ವೀಡಿಯೊವನ್ನು ಭಾರತದಲ್ಲಿ ಹಿಂದೂ ಮನೆಯಲ್ಲಿ ರೋಹಿಂಗ್ಯಾ ಮುಸ್ಲಿಂ ಕದ್ದು ಮನೆಯಿಂದ ಹೊರಬರುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಬುರ್ಖಾ ಧರಿಸಿದ ರೋಹಿಂಗ್ಯಾ ಮುಸ್ಲಿಂ ಭಾರತದಲ್ಲಿ ಹಿಂದೂ ಮನೆಯಿಂದ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಬುರ್ಖಾ ಧರಿಸಿದ ರೋಹಿಂಗ್ಯಾ ಮುಸ್ಲಿಂ ಭಾರತದಲ್ಲಿ ಹಿಂದೂ ಮನೆಯಿಂದ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರಿಂದ ಸಿಕ್ಕಿಬಿದ್ದಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊದಲ್ಲಿ ರಶೀದ್ ಅಹ್ಮದ್ ಎಂಬ 27 ವರ್ಷದ ರೋಹಿಂಗ್ಯಾ ವ್ಯಕ್ತಿಯನ್ನು ತೋರಿಸಲಾಗಿದೆ, ಈತ ಜುಲೈ 23, 2025 ರಂದು ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿರುವ ಶಾಲ್ಬಗನ್ ಚೆಕ್‌ಪೋಸ್ಟ್ ಬಳಿ ಪೊಲೀಸರು ನಿಯಮಿತ ತಪಾಸಣೆಯ ಸಮಯದಲ್ಲಿ ಬಂಧಿಸಿದರು. ಈತ ರೋಹಿಂಗ್ಯಾ ಕ್ಯಾಂಪ್ ಸಂಖ್ಯೆ 26 ರವನು. ಅಪರಾಧ ಚಟುವಟಿಕೆಗಾಗಿ ಆತ ರಹಸ್ಯವಾಗಿ ಶಿಬಿರವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಎಂದು ಬಾಂಗ್ಲಾದೇಶ ಪೊಲೀಸರು ಶಂಕಿಸಿದ್ದಾರೆ. ಈತ ಹಿಂದೂ ಮನೆಯಿಂದ ಕಳ್ಳತನ ಮಾಡುತ್ತಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಈ ವೀಡಿಯೊ ಭಾರತಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಜುಲೈ 24, 2025 ರ ಅದೇ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡ ಹಲವಾರು ಬಾಂಗ್ಲಾದೇಶ ಮಾಧ್ಯಮ ವರದಿಗಳಿಗೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ಈ ಘಟನೆ ಜುಲೈ 23, 2025 ರಂದು ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಗರದಲ್ಲಿ ನಡೆದಿದೆ. ವೀಡಿಯೊದಲ್ಲಿ ಬುರ್ಖಾ ಧರಿಸಿದ್ದ ವ್ಯಕ್ತಿಯನ್ನು 27 ವರ್ಷದ ರಶೀದ್ ಅಹ್ಮದ್ ಎಂದು ಗುರುತಿಸಲಾಗಿದೆ, ಆತನನನ್ನು ಕಾಕ್ಸ್ ಬಜಾರ್‌ನ ಟೆಕ್ನಾಫ್ ಪ್ರದೇಶದ ಶಾಲ್ಬಗನ್ ಚೆಕ್‌ಪೋಸ್ಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ರಶೀದ್ ರೋಹಿಂಗ್ಯಾ ಕ್ಯಾಂಪ್ ಸಂಖ್ಯೆ 26 ರ ನಿವಾಸಿ ಫರೀದ್ ಅಹ್ಮದ್ ಅವರ ಮಗ.

ಮಾಧ್ಯಮಗಳೊಂದಿಗೆ ಮಾತನಾಡಿದ ಟೆಕ್ನಾಫ್ ಮಾದರಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಗಿಯಾಸುದ್ದೀನ್, ರಶೀದ್ನನ್ನು ನಿಯಮಿತ ಪೊಲೀಸ್ ತಪಾಸಣೆಯ ಸಮಯದಲ್ಲಿ ಬಂಧಿಸಲಾಗಿದೆ ಎಂದು ಹೇಳಿದರು. ಆತನ ನಡವಳಿಕೆ, ಬಟ್ಟೆ ಮತ್ತು ಮಾತನಾಡುವ ರೀತಿ ಅನುಮಾನ ಮೂಡಿಸಿತು, ಪೊಲೀಸರು ಅವರನ್ನು ತಡೆದು ಬಂಧಿಸಿದರು. ಅವರು ಕೆಲವು ಅಪರಾಧ ಚಟುವಟಿಕೆಗಳನ್ನು ನಡೆಸಲು ರಹಸ್ಯವಾಗಿ ಶಿಬಿರವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಆದಾರದ ಮೇಲೆ ಆತನನ್ನು ಶಂಕಿಸಲಾಗಿದೆ. ಪ್ರಸ್ತುತ ಕಾನೂನು ಕ್ರಮಗಳು ನಡೆಯುತ್ತಿದ್ದು,  ಹಿಂದೂ ಮನೆಯಿಂದ ಕದ್ದ ನಂತರ ಓಡಿಹೋಗುತ್ತಿದ್ದಾನೆ  ಎಂದು ಸೂಚಿಸುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಿಂದ ಸಂಬಂಧವಿಲ್ಲದ ವೀಡಿಯೊವನ್ನು ಭಾರತದಲ್ಲಿ ಹಿಂದೂ ಮನೆಯಿಂದ ಕದಿಯುತ್ತಿದ್ದ  ರೋಹಿಂಗ್ಯಾ ಮುಸ್ಲಿಂ ಸಿಕ್ಕಿಬಿದ್ದಿದ್ದಾನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

Comments are closed.

scroll