2024ರ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗಾಗಿ ಮಹಾರಾಷ್ಟ್ರದ ಅಕೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಮಸ್ತಾನ್ ಖಾನ್ ಅವರ ಚುನಾವಣಾ ರ್ಯಾಲಿಯನ್ನು ತೋರಿಸಲು ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೀಡಿಯೊ ವೈರಲ್ ಆಗುತ್ತಿದೆ. ವಿವಿಧ ವಾಹನಗಳಲ್ಲಿ ವ್ಯಕ್ತಿಗಳು ಪ್ಯಾಲೆಸ್ಟೈನ್, ಇರಾನ್, ಇರಾಕ್, ಐಸಿಸ್ ಮತ್ತು ಹೆಜ್ಬುಲ್ಲಾದ ಧ್ವಜಗಳನ್ನು ಹೊತ್ತೊಯ್ಯುತ್ತಿದ್ದರು, ಯಾವುದೇ ಭಾರತೀಯ ಧ್ವಜ ಗೋಚರಿಸುವುದಿಲ್ಲ ಎಂದು ಪೋಸ್ಟ್ ಹೇಳುತ್ತದೆ. ಈ ಲೇಖನದಲ್ಲಿ ವೀಡಿಯೊದ ಹಿಂದಿನ ಸತ್ಯವನ್ನು ಪರಿಶೀಲಿಸೋಣ.
ಕ್ಲೇಮ್: ಮಹಾರಾಷ್ಟ್ರದ ಅಕೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಮಸ್ತಾನ್ ಖಾನ್ ಅವರ ಚುನಾವಣಾ ರಾಲಿಯಲ್ಲಿ ಪ್ಯಾಲೆಸ್ಟೈನ್, ಇರಾನ್, ಇರಾಕ್, ISIS ಮತ್ತು ಹೆಜ್ಬುಲ್ಲಾದ ಧ್ವಜಗಳನ್ನು ಹಿಡಿದಿದ್ದು, ಅಲ್ಲಿ ಭಾರತದ ಧ್ವಜವಿಲ್ಲ ಎಂದು ವೈರಲ್ ವಿಡಿಯೋ ತೋರಿಸುತ್ತದೆ.
ಫ್ಯಾಕ್ಟ್: ವೀಡಿಯೊ ಸೆಪ್ಟೆಂಬರ್ 2024 ರದ್ದು. ಮಹಾರಾಷ್ಟ್ರದ ಲಾತೂರ್‌ನಲ್ಲಿ ಮಿಲಾದ್-ಉನ್-ನಬಿ ಬೈಕ್ ರಾಲಿಯನ್ನು ಇದು ತೋರಿಸುತ್ತದೆ. ವೈರಲ್ ವೀಡಿಯೊದಲ್ಲಿ ಭಾರತೀಯ ಧ್ವಜಗಳು ಗೋಚರಿಸುತ್ತಿದ್ದರೂ, ಉಳಿದ ಧ್ವಜಗಳು ಪ್ಯಾಲೆಸ್ಟೈನ್, ಇರಾನ್, ಇರಾಕ್, ISIS ಅಥವಾ ಹೆಜ್ಬುಲ್ಲಾಗೆ ಸಂಬಂಧಿಸಿವೆಯೇ ಎಂದು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಆದರೆ, ಈ ವೈರಲ್ ವಿಡಿಯೋ ಮಹಾರಾಷ್ಟ್ರದ ಅಕೋಲಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಜಿದ್ ಖಾನ್ ಮಸ್ತಾನ್ ಖಾನ್ ಅವರ ಚುನಾವಣಾ ರಾಲಿಗೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಸೆರ್ಚಿಂಗ್ ಮಾಡಿದಾಗ ಇದು ನಮ್ಮನ್ನು 01 ಅಕ್ಟೋಬರ್ 2024 ರಂದು ಲಾತೂರ್ ಮಹಾರಾಷ್ಟ್ರ ಈದ್ ಮಿಲಾದುನ್ ನಬಿ ಜುಲೂಸ್ “AAJ KA MAHANAGAR ಲೈವ್” ಎಂದು ಟೈಟಲ್ ನೀಡಿದ ಯುಟ್ಯೂಬ್ ಚಾನಲ್‌ಗೆ ಅಪ್‌ಲೋಡ್ ಮಾಡಿದ ವೀಡಿಯೊದ ಫುಲ್ ವರ್ಷನ್ ಗೆ (ಆರ್ಕೈವ್ ಲಿಂಕ್) ನಮ್ಮನ್ನು ಕರೆದೊಯ್ಯಿತು.
ಟೈಟಲ್ ಅನ್ನು ಕ್ಲೂ ಆಗಿ ಬಳಸಿಕೊಂಡು, ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವು 19 ಸೆಪ್ಟೆಂಬರ್ 2024 ರಂದು ಲಾತೂರ್ ನ್ಯೂಸ್ ಅಫೀಷಿಯಲ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ಸುದ್ದಿ ವರದಿಗೆ (ಆರ್ಕೈವ್ ಲಿಂಕ್) ನಮ್ಮನ್ನು ಕರೆದೊಯ್ಯಿತು. ವರದಿಯು ವೀಡಿಯೊವನ್ನು ”ಲಾತೂರ್‌ನಲ್ಲಿ ಈದ್ ಮಿಲಾದುನ್ ನಬಿ ಬೈಕ್ ರಾಲಿ”ಯನ್ನು ತೋರಿಸುತ್ತದೆ ಎಂದು ತಿಳಿಸಿದೆ.
ನಾವು ಲಾತೂರ್ ನ್ಯೂಸ್ ಅಫೀಷಿಯಲ್ ಯೂಟ್ಯೂಬ್ ಚಾನೆಲ್‌ನ ದೃಶ್ಯಗಳೊಂದಿಗೆ ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಹೋಲಿಸಿದಾಗ ಎರಡೂ ಚಿತ್ರಗಳಲ್ಲಿ ಒಂದೇ ವ್ಯಕ್ತಿ ಭಾರತೀಯ ಧ್ವಜವನ್ನು ಹಿಡಿದಿರುವ ಹೋಲಿಕೆಗಳನ್ನು ಕಂಡುಕೊಂಡಿದ್ದೇವೆ.
ವೀಡಿಯೊದಿಂದ ಅಂಗಡಿ ಚಿಹ್ನೆಯನ್ನು ಬಳಸಿಕೊಂಡು ನಾವು Google ನಕ್ಷೆಗಳಲ್ಲಿ ಸ್ಥಳವನ್ನು ಜಿಯೋಲೊಕೇಟ್ ಮಾಡಿದ್ದೇವೆ. ಸ್ಟ್ರೀಟ್ ವ್ಯೂ ಅನ್ನು ಬಳಸಿಕೊಂಡು, ನಾವು ಸ್ಥಳವನ್ನು ಕಂಡುಕೊಂಡಿದ್ದು, ಇದು ವೈರಲ್ ವೀಡಿಯೊದ ಕೀಫ್ರೇಮ್‌ಗೆ ಹೊಂದಿಕೆಯಾಗಿರುವುದನ್ನು ಖಚಿತಪಡಿಸಿದ್ದೇವೆ.
ವೈರಲ್ ವೀಡಿಯೊದಲ್ಲಿ ಜನರು ಭಾರತೀಯ ಧ್ವಜಗಳನ್ನು ಹಿಡಿದಿರುವುದನ್ನ ಗಮನಿಸಬಹುದು. ಆದರೆ ಇತರ ಧ್ವಜಗಳು ಪ್ಯಾಲೆಸ್ಟೈನ್, ಇರಾನ್, ಇರಾಕ್, ISIS ಅಥವಾ ಹೆಜ್ಬುಲ್ಲಾಗೆ ಸಂಬಂಧಿಸಿವೆಯೇ ಎಂದು ನಿಖರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಆದಾಗ್ಯೂ, ವೀಡಿಯೊವು ಲಾತೂರ್‌ನಲ್ಲಿ ಮಿಲಾದ್-ಉನ್-ನಬಿ ರಾಲಿಗೆ ಸಂಬಂಧಿಸಿದ್ದರೂ ಸಹ ಇತ್ತೀಚಿನ ಚುನಾವಣಾ ರಾಲಿಯದಲ್ಲ ಎಂದು ಸ್ಪಷ್ಟವಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಲಾತೂರ್‌ನಿಂದ ನಡೆದ ಮಿಲಾದ್-ಉನ್-ನಬಿ ಬೈಕ್ ರಾಲಿಯ ಹಳೆಯ ವೀಡಿಯೊವನ್ನು ಮಹಾರಾಷ್ಟ್ರದ ಅಕೋಲಾದಲ್ಲಿ ಇತ್ತೀಚಿನ ಕಾಂಗ್ರೆಸ್ ಅಭ್ಯರ್ಥಿಯ ಚುನಾವಣಾ ರಾಲಿಯದ್ದು ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.