Fake News - Kannada
 

ಮಗುವೊಂದು ತನ್ನ ತಾಯಿಯ ಕೈಯಿಂದ ಫೋನ್ ಕಿತ್ತುಕೊಂಡ ನಂತರ ಆಕೆಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆಯುವ ನಿಜವಾದ ವೀಡಿಯೊ ಎಂದು ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

0

ಶಾಲಾ ಬಾಲಕನೊಬ್ಬ ತನ್ನ ತಾಯಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “…ಎಲ್ಲರೂ ಒಮ್ಮೆ ಈ ವಿಡಿಯೋ ನೋಡಿ ಮಕ್ಕಳು ಆಂಡ್ರಾಯ್ಡ ಚಟಕ್ಕೆ ಬಿದ್ದಿರುವುದು ಎಷ್ಟು ಅಪಾಯಕಾರಿ. ಪಾಲಕರೇ ಇಂತಹ ಮಕ್ಕಳ ಹತ್ತಿರ ಎಚ್ಚರದಿಂದಿರಿ” ಎಂದು ನೆಟಿಜನ್‌ಗಳು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹೇಳಿಕೆಯ ಹಿಂದೆ ಎಷ್ಟು ಸತ್ಯವಿದೆ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.

ಕ್ಲೇಮ್: ಮೊಬೈಲ್ ಫೋನ್ ಬಳಸಲು ಬಿಡಲಿಲ್ಲ ಎಂಬ ಕಾರಣಕ್ಕೆ ಶಾಲಾ ಬಾಲಕನೊಬ್ಬ ತನ್ನ ತಾಯಿಗೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದ ನಿಜವಾದ ವೀಡಿಯೊ.

ಫ್ಯಾಕ್ಟ್: ಇದು ಐಡಿಯಾಸ್ ಫ್ಯಾಕ್ಟರಿ ಎಂಬ ಫೇಸ್‌ಬುಕ್ ಪೇಜ್ ನಿಂದ ರಚಿಸಲಾದ ಸ್ಕ್ರಿಪ್ಟ್ ವೀಡಿಯೊ. ಜನರಿಗೆ ಜಾಗೃತಿ ಮೂಡಿಸಲು ಅವರು ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ತಯಾರಿಸಿ, ಅಪ್‌ಲೋಡ್ ಮಾಡುತ್ತಾರೆ. ಈ ವೀಡಿಯೊವನ್ನು ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ ಎಂದು ಮೂಲ ವೀಡಿಯೊದಲ್ಲಿ ಹೇಳಲಾಗಿದೆ . ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಈ ವೀಡಿಯೋವನ್ನು ಪರಿಶೀಲಿಸುತ್ತಿರುವಾಗ, ಫೇಸ್‌ಬುಕ್‌ನಲ್ಲಿ (ಆರ್ಕೈವ್ ಮಾಡಿದ ಪೋಸ್ಟ್) ಅದೇ ವೀಡಿಯೊದೊಂದಿಗೆ ಮತ್ತೊಂದು ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊದ ವಿವರಣೆಯಲ್ಲಿ, ‘Watch more original videos by: Sanjjanaa Galrani’ ಎಂದಿದೆ. 

Sanjjnaa Galrani ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ (ಇಲ್ಲಿ, ಇಲ್ಲಿ) ವೈರಲ್ ವೀಡಿಯೊ ಸ್ವರೂಪದಲ್ಲಿ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ನಟಿ. ಕೆಲವೊಮ್ಮೆ, ಈ ವೀಡಿಯೊಗಳನ್ನು ‘ಐಡಿಯಾಸ್ ಫ್ಯಾಕ್ಟರಿ’ ಎಂಬ ಫೇಸ್ಬುಕ್ ಪೇಜ್ ಜೊತೆಗೆ ಅಪ್‌ಲೋಡ್ ಮಾಡಲಾಗಿದೆ. ‘ಐಡಿಯಾಸ್ ಫ್ಯಾಕ್ಟರಿ’ ಜನರಲ್ಲಿ ಜಾಗೃತಿ ಮೂಡಿಸಲು ಅವರು ಮಾಡಿದ ಸ್ಕ್ರಿಪ್ಟ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತದೆ. ಈ ಹಿಂದೆ, Sanjjnaa Galrani ಅವರು ಅಪ್‌ಲೋಡ್ ಮಾಡಿದ ಸ್ಕ್ರಿಪ್ಟ್ ವೀಡಿಯೊಗಳು ನೈಜ ಘಟನೆ ಎಂದು ಹೇಳಿಕೊಂಡು ವೈರಲ್ ಆಗಿದ್ದವು, ಆದರೆ ನಾವು ಅವು ಸುಳ್ಳು ಎಂದು ಆರ್ಟಿಕಲ್ ಬರೆದಿದ್ದೇವೆ.

ವೈರಲ್ ಆಗಿರುವ ಈ ವೀಡಿಯೋ ಕೂಡ ಅವರೇ ಮಾಡಿದ ಸ್ಕ್ರಿಪ್ಟ್ ವೀಡಿಯೊ ಆಗಿರಬಹುದು ಎಂದು ಶಂಕಿಸಿ, ನಾವು ಅವರ ಪೇಜ್ ನಲ್ಲಿ ಹುಡುಕಿದಾಗ ಈ ವೀಡಿಯೊ ಕಂಡುಬಂದಿಲ್ಲ, ಆದರೆ ನಮಗೆ ಇದು ‘ಐಡಿಯಾಸ್ ಫ್ಯಾಕ್ಟರಿ’ ಪುಟದಲ್ಲಿ (ಆರ್ಕೈವ್ ಮಾಡಿದ ಆವೃತ್ತಿ) ಕಂಡುಬಂದಿದೆ. ಅವರು ಈಗ ಈ ವೀಡಿಯೊವನ್ನು ಡಿಲೀಟ್ ಮಾಡಿದ್ದಾರೆ

ಅವರು ಈ ವೀಡಿಯೊದಲ್ಲಿ ತೋರಿಸಿದ ಸ್ಥಳದಲ್ಲಿ ಮತ್ತೊಂದು ಸ್ಕ್ರಿಪ್ಟ್ ವೀಡಿಯೊವನ್ನು (ಆರ್ಕೈವ್ ಮಾಡಿದ ಆವೃತ್ತಿ) ಮಾಡಿದ್ದಾರೆ ಮತ್ತು ಅದನ್ನು ತಮ್ಮ ಪೇಜ್ ನಲ್ಲಿ  ಅಪ್‌ಲೋಡ್ ಮಾಡಿದ್ದಾರೆ. ಟಿವಿ, ಟ್ರೆಡ್ ಮಿಲ್, ಶೆಲ್ಫ್, ಗೋಡೆಯ ಮೇಲಿನ ಪೇಂಟಿಂಗ್ ಎಲ್ಲವೂ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ವೈರಲ್ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು D-intent Data ಅವರು, ‘ಐಡಿಯಾಸ್ ಫ್ಯಾಕ್ಟರಿ’ ಮೂಲಕ ‘X’ ನಲ್ಲಿ ಅವರ ಮೂಲ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದೆ. ಈ ವೀಡಿಯೊವನ್ನು ಕೇವಲ ಮನರಂಜನೆಗಾಗಿ ಮಾಡಲಾಗಿದೆ ಎಂದು ವಿವರಣೆಯೊಂದಿಗೆ ಪೋಸ್ಟ್ ಮಾಡಿದೆ. ತಮಿಳಿನ ಫ್ಯಾಕ್ಟ್ ಚೆಕ್ಕಿಂಗ್ ನೆಟ್‌ವರ್ಕ್ ‘Admin Media’ ಕೂಡ ಈ ವಿಡಿಯೋ ನಕಲಿ ಎಂದು ಫ್ಯಾಕ್ಟ್ ಚೆಕ್ ಆರ್ಟಿಕಲ್ ಪ್ರಕಟಿಸಿದೆ. ಈ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ‘ಐಡಿಯಾಸ್ ಫ್ಯಾಕ್ಟರಿ’ ಅನ್ನು ಸಂಪರ್ಕಿಸಿದ್ದೇವೆ ಮತ್ತು ಅವರ ಪ್ರತಿಕ್ರಿಯೆಯನ್ನು ನಾವು ಸ್ವೀಕರಿಸಿದ ನಂತರ ಈ ಲೇಖನವನ್ನು ಅಪ್ಡೇಟ್ ಮಾಡಿದ್ದೇವೆ. 

ಕೊನೆಗೆ ಮಹಿಳೆಯೊಬ್ಬರಿಗೆ ಕ್ರಿಕೆಟ್ ಬ್ಯಾಟ್‌ನಿಂದ ಮಗು ಥಳಿಸಿರುವ ಸ್ಕ್ರಿಪ್ಟ್ ವಿಡಿಯೋವನ್ನು ನಿಜ ಘಟನೆಯ ವಿಡಿಯೋ ಎಂದು ತಪ್ಪಾಗಿ ಶೇರ್ ಮಾಡಲಾಗುತ್ತಿದೆ.

Share.

Comments are closed.

scroll