Fake News - Kannada
 

ಹಕ್ಕಿಯೊಂದು ಬಂದು ಬಾವುಟವನ್ನು ಬಿಚ್ಚಿದೆ? ಇದು ಹಕ್ಕಿ ಮಹಿಮೆಯಲ್ಲ ಬದಲಾಗಿ ಕ್ಯಾಮೆರಾ ಚಮತ್ಕಾರ

0

ಕೇರಳ – ರಾಷ್ಟ್ರ ಧ್ವಜ ಹಾರಿಸುವಾಗ ಮೇಲೆ ಸಿಕ್ಕಾಕಿಕೊಂಡಿದೆ. ಎಲ್ಲಿಂದಲೋ ಪಕ್ಷಿಯೊಂದು ಬಂದು ಬಾವುಟವನ್ನು ಬಿಚ್ಚಿದೆ!!.. ” ಎಂಬ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಶಾಲೆಯ ವಾತಾವರಣವನ್ನು ಹೊಂದಿದ್ದು, ಕೆಲವರು ರಾಷ್ಟ್ರಧ್ವಜವನ್ನು ಹಾರಿಸುವುದನ್ನು ನಾವು ಕಾಣಬಹುದು. ಇಂದು ಒಂದು ಶಾಲೆಯಲ್ಲಿ ನಡೆದ ಹಾಗೆ ಕಾಣುತ್ತಿದೆ. ಕೆಲವರು ರಾಷ್ಟ್ರಧ್ವಜವನ್ನು ಬೀಸುತ್ತಿರುವುದನ್ನು ಕಾಣಬಹುದು. ಆದರೆ ಧ್ವಜವು ಮೇಲೆ ಹೋಗಿ ಸಿಲುಕಿದೆ, ಅದೇ ಸಮಯದಲ್ಲಿ ಪಕ್ಷಿಯೊಂದು ಧ್ವಜದ ಮೇಲ್ಬಾಗದ ಹಿಂಬದಿಯಿಂದ ಬಂದು ಸಿಲುಕಿಕೊಂಡಿರುವ ಬಾವುಟವನ್ನು ಮತ್ತೆ ಹಾರುವಂತೆ ಮಾಡಿತು. ಈ ವಿಡಿಯೋದಲ್ಲಿ ಎಷ್ಟು ನಿಜಾಂಶವಿದೆ ಎಂದು ನೋಡೋಣ. 

ಕ್ಲೇಮ್: ಧ್ವಜವಂದನೆ ಸಮಯದ ವೇಳೆ ಭಾರತದ ರಾಷ್ಟ್ರಧ್ವಜದ ಕಂಬದ ಅಂಚಿನಲ್ಲಿ ಸಿಲುಕಿಕೊಂಡಿದ್ದ ಹಕ್ಕಿ ಬಂದು ಬಾವುಟವನ್ನು ಹರಿಸುವಂತೆ ಮಾಡಿದೆ ಎಂಬ ವಿಡಿಯೋ. 

ಫ್ಯಾಕ್ಟ್: ಇದು ಕ್ಯಾಮೆರಾ ಆಂಗಲ್‌ನ ಮಹಿಮೆ. ಇದೆ ಘಟನೆಯನ್ನು ಬೇರೆ ಬೇರೆ ಆಂಗಲ್ ನಿಂದ ತೆಗೆದ ವಿಡಿಯೋವನ್ನುನೋಡಿದಾಗ ಆ ಹಕ್ಕಿ  ಹಿಂದೆ ತೆಂಗಿನ ಮರದ ಎಲೆಯ ಮೇಲೆ ಕುಳಿತಿರುವುದು ಸ್ಪಷ್ಟವಾಗಿ ಕಾಣಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು, ಸರಿಯಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಈ ವೀಡಿಯೊದೊಂದಿಗೆ ‘X’ ಪೋಸ್ಟ್‌ನ ಅಡಿಯಲ್ಲಿ ಬೇರೆ ಆಂಗಲ್ ನಲ್ಲಿ ತೆಗೆದ  ವೀಡಿಯೊವೊಂದು ನಮಗೆ ದೊರಕಿದೆ. 

ಸುಧೀರ್ ಕೊಠಾರಿ ಎನ್ನುವವರು ಈ  ಪೋಸ್ಟ್ ಮಾಡಿದ್ದಾರೆ. ಈ ಆಂಗಲ್ ನಿಂದ ನೋಡಿದರೆ ನಮಗೆ ನಿಜವಾದ ವಿಷಯ ಅರ್ಥವಾಗುತ್ತದೆ. ಧ್ವಜಸ್ತಂಭದ ಹಿಂದೆ ಕೆಲವು ತೆಂಗಿನ ಮರಗಳಿವೆ.ನಿಜವಾಗಿಯೂ ಬಂದ ಹಕ್ಕಿ ಈ ಮರಗಳಲ್ಲಿರುವ ಕೊಂಬೆಯೊಂದರಲ್ಲಿ ಕುಳಿತಿದೆ. ಇದನ್ನೇ ನಾವು ವೈರಲ್ ವೀಡಿಯೊದ ಆಂಗಲ್ ನಿಂದ ನೋಡಿದರೆ, ಆ ಹಕ್ಕಿ ನಿಜವಾಗಿಯೂ ಸಿಲ್ಕಿಕೊಂಡಿರುವ  ಧ್ವಜವನ್ನು ಸರಿಪಡಿಸಿದಂತೆ ಕಾಣುತ್ತಿದೆ. ಈ ವ್ಯತ್ಯಾಸವನ್ನು ನೀವು ಕೆಳಗೆ ಸ್ಪಷ್ಟವಾಗಿ ನೋಡಬಹುದು.

ಇದೇ ವಿಷಯವನ್ನು ‘ಹಿಂದೂಸ್ತಾನ್ ಟೈಮ್ಸ್‘, ‘ಇಂಡಿಯನ್ ಎಕ್ಸ್‌ಪ್ರೆಸ್‘ ಮತ್ತು ‘ಟೈಮ್ಸ್ ಆಫ್ ಇಂಡಿಯಾ‘ ನಂತಹ ಪ್ರಮುಖ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. 

ಅಂತಿಮವಾಗಿ, ವೈರಲ್ ವೀಡಿಯೊದಲ್ಲಿ ಹೇಳಿಕೊಂಡಂತೆ ಸಿಲುಕಿರುವ ಧ್ವಜವನ್ನು ಹಕ್ಕಿಯಿಂದ ಬೇರ್ಪಡಿಸಲಾಗಿದೆ, ಎನ್ನುವ ವೀಡಿಯೊ ನಿಜವಲ್ಲ, ಇದು ಕೇವಲ ಭ್ರಮೆ. 

Share.

Comments are closed.

scroll