Fake News - Kannada
 

2023 ರಲ್ಲಿ ಸೇನಾ ಸಿಬ್ಬಂದಿಯೊಬ್ಬರನ್ನು ಅವರ ಕುಟುಂಬವು ಸ್ವಾಗತಿಸುತ್ತಿರುವ ವೀಡಿಯೊವನ್ನು ಆಪರೇಷನ್ ಸಿಂದೂರ್‌ಗೆ ಲಿಂಕ್ ಮಾಡಿ ಹಂಚಿಕೊಳ್ಳಲಾಗುತ್ತಿದೆ

0

ಸೇನಾ ಸಿಬ್ಬಂದಿಯೊಬ್ಬರು ಮನೆಗೆ ಆಗಮಿಸಿದ್ದು ಅವರ ಕುಟುಂಬ ಸದಸ್ಯರು ರೆಡ್ ಕಾರ್ಪೆಟ್ ಹಾಸಿ, ನಮಸ್ಕರಿಸುತ್ತಾ ಅವರಿಗೆ ಭವ್ಯ ಸ್ವಾಗತವನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ)  ವೈರಲ್ ಆಗುತ್ತಿದೆ. ಇದು ಆಪರೇಷನ್ ಸಿಂಧೂರ್‌ನಲ್ಲಿ ಭಾಗವಹಿಸಿದ ನಂತರ ಅವರು ಹಿಂತಿರುಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ವೈರಲ್ ಆಗಿರುವ ವೀಡಿಯೊದಲ್ಲಿ ಆಪರೇಷನ್ ಸಿಂದೂರ್‌ನಿಂದ ಹಿಂದಿರುಗಿದ ನಂತರ ಭಾರತೀಯ ಸೇನಾ ಸೈನಿಕನನ್ನು ಅವರ ಕುಟುಂಬವು ಸ್ವಾಗತಿಸುತ್ತಿರುವುದನ್ನು ತೋರಿಸಲಾಗಿದೆ.

ಫ್ಯಾಕ್ಟ್: ಈ ವೀಡಿಯೊ ಆಪರೇಷನ್ ಸಿಂದೂರ್‌ಗೆ ಸಂಬಂಧಿಸಿಲ್ಲ. ಇದು ಆಗಸ್ಟ್ 2023 ನದ್ದಾಗಿದ್ದು, ತರಬೇತಿಯಿಂದ ಮನೆಗೆ ಹಿಂದಿರುಗಿದ ನಂತರ ಸಿಖ್ ಸೈನಿಕನನ್ನು ಅವರ ಕುಟುಂಬವು ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ತೋರಿಸುತ್ತದೆ. ಆದ್ದರಿಂದ, ಈ ಕ್ಲೇಮ್ ದಾರಿ ತಪ್ಪಿಸುವಂತಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಆಗಸ್ಟ್ 17, 2023 ರಂದು ಬ್ರುಟ್ ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಮಗೆ ತೋರಿಸಿದೆ. ” ಸೈನಿಕನೊಬ್ಬ ತನ್ನ ಹಳ್ಳಿಗೆ ಹಿಂತಿರುಗಿದ ನಂತರ ಅವನ ಕುಟುಂಬವು ಹೀಗೆ ಸ್ವಾಗತಿಸಿತು.” ಎಂದು ಕ್ಯಾಪ್ಶನ್ ನಲ್ಲಿ ಹೇಳಲಾಗಿದೆ. ಹಾಗಾಗಿ ಈ ಘಟನೆಯು ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ ಗಿಂತ ಸುಮಾರು ಎರಡು ವರ್ಷಗಳ ಹಿಂದಿನದು.

“If you want to understand the emotional connect between Indians and our Jawans who protect us, look no further than this video… I salute this family” ಎಂಬ ಶೀರ್ಷಿಕೆಯೊಂದಿಗೆ ಆನಂದ್ ಮಹೀಂದ್ರಾ ಅವರು ಆಗಸ್ಟ್ 16, 2023 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊ ಹಳೆಯದಾಗಿದ್ದು  ಇತ್ತೀಚಿನ ಆಪರೇಷನ್ ಸಿಂಧೂರ್ ಅಥವಾ ಪಹಲ್ಗಾಮ್ ಘಟನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸುತ್ತದೆ. 

ಹೆಚ್ಚಿನ ಸಂಶೋಧನೆಯು ಆಗಸ್ಟ್ 2023 ರ ಹಲವಾರು ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ತೋರಿಸಿದೆ. ವೈರಲ್ ವೀಡಿಯೊದಲ್ಲಿ ಸಿಖ್ ಸೈನಿಕನೊಬ್ಬ ತರಬೇತಿಯ ನಂತರ ಮನೆಗೆ ಹಿಂದಿರುಗಿದಾಗ ಅವನ ಕುಟುಂಬದಿಂದ ಭವ್ಯ ಸ್ವಾಗತವನ್ನು ಪಡೆಯುತ್ತಿರುವುದನ್ನು ದೃಢಪಡಿಸುತ್ತದೆ. ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ವೀಡಿಯೊ ವ್ಯಾಪಕ ಗಮನ ಸೆಳೆದಿತ್ತು.  ಇದನ್ನು  ಆರಂಭದಲ್ಲಿ ಸೇನಾ ಅನುಭವಿ ಸಂದೀಪ್ ಥಾಪರ್ ಹಂಚಿಕೊಂಡಿದ್ದು, ತದನಂತರ ವೈರಲ್ ಆಗಿದೆ. ಇದು ಸೈನಿಕನನ್ನು ಕೆಂಪು ಕಾರ್ಪೆಟ್‌ನಿಂದ ಸ್ವಾಗತಿಸುತ್ತಾ, ಅವನ ತಾಯಿಗೆ ನಮಸ್ಕರಿಸುತ್ತಾ, ಅವಳ ಪಾದಗಳನ್ನು ಮುಟ್ಟುತ್ತಾ ಮತ್ತು ಹೂವಿನಿಂದ ಹೃದಯಪೂರ್ವಕವಾಗಿ ಸ್ವಾಗತಿಸುವ ಕುಟುಂಬ ಕ್ಷಣವನ್ನು ಎತ್ತಿ ತೋರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೇನಾ ಸಿಬ್ಬಂದಿಯನ್ನು ಅವರ ಕುಟುಂಬವು ಸ್ವಾಗತಿಸುತ್ತಿರುವುದನ್ನು ತೋರಿಸುವ ವೀಡಿಯೊವಾಗಿದ್ದು ಇದು ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿಲ್ಲ; ಬದಲಾಗಿ ಹಳೆಯ ವೀಡಿಯೊವಾಗಿದೆ.

Share.

Comments are closed.

scroll