2025 ರ ಪ್ರಯಾಗರಾಜ್ ಮಹಾ ಕುಂಭಮೇಳವು 26 ಫೆಬ್ರವರಿ 2025 ರಂದು ಮಹಾ ಶಿವರಾತ್ರಿಯ ದಿನದಂದು (ಇಲ್ಲಿ, ಇಲ್ಲಿ)ಕೊನೆಗೊಂಡಿದೆ. ಈ ಮಧ್ಯೆ, ನದಿ ದಂಡೆಯಲ್ಲಿ (ಘಾಟ್) ಅದ್ಭುತವಾದ ಪಟಾಕಿ ಪ್ರದರ್ಶನವನ್ನು ತೋರಿಸುವ ವೀಡಿಯೊ ಕ್ಲಿಪ್ (ಇಲ್ಲಿ) ಸೋಶಿಯಲ್ ಮೀಡಿಯಾ ವೈರಲ್ ಆಗುತ್ತಿದೆ, ಇದು 2025 ರ ಮಹಾ ಕುಂಭದದ್ದು ಎಂದು ಹೇಳಿಕೊಳ್ಳುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: 2025 ರ ಮಹಾ ಕುಂಭಮೇಳದ ಸಮಯದಲ್ಲಿ ನಡೆದ ಅದ್ಭುತ ಪಟಾಕಿ ಪ್ರದರ್ಶನವನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ಈ ವೀಡಿಯೊ 2025 ರ ಪ್ರಯಾಗರಾಜ್ ಮಹಾ ಕುಂಭಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಈ ವೀಡಿಯೊ 2024 ರ ನವೆಂಬರ್ 15 ರಂದು ವಾರಣಾಸಿಯಲ್ಲಿ ದೇವ್ ದೀಪಾವಳಿ ಆಚರಣೆಯ ಸಮಯದಲ್ಲಿ ಗಂಗಾ ನದಿಯ ಘಾಟ್‌ಗಳಲ್ಲಿ ನಡೆದ ಪಟಾಕಿ ಪ್ರದರ್ಶನವನ್ನು ತೋರಿಸುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ಈ ವೈರಲ್ ವೀಡಿಯೊದ ವಿವರಗಳನ್ನು ಪರಿಶೀಲಿಸಲು, ನಾವು ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ನವೆಂಬರ್ 15, 2024 ರಂದು ‘photographycliclucknow’ ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು (ಆರ್ಕೈವ್) ನಮಗೆ ತೋರಿಸಿದೆ. ಈ ವೀಡಿಯೊದ ವಿವರಣೆಯ ಪ್ರಕಾರ, ದೃಶ್ಯಗಳು ವಾರಣಾಸಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಗೆ ಸಂಬಂಧಿಸಿವೆ. ಈ ವೀಡಿಯೊ ನವೆಂಬರ್ 2024 ರದ್ದು ಆಗಿತ್ತು, 2025 ರ ಮಹಾ ಕುಂಭವು 13 ಜನವರಿ 2025 ರಂದು ಪ್ರಾರಂಭವಾಗುವ ಹಿಂದಿನದಾಗಿದೆ, ಈ ವೀಡಿಯೊ 2025 ರ ಮಹಾ ಕುಂಭದದ್ದಲ್ಲ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ.
ಈ ಹುಡುಕಾಟದ ಸಮಯದಲ್ಲಿ, ನವೆಂಬರ್ 2024 ರಲ್ಲಿ ವಾರಣಾಸಿಯಲ್ಲಿ ನಡೆದ ದೇವ್ ದೀಪಾವಳಿ ಆಚರಣೆಯ ದೃಶ್ಯಗಳನ್ನು ತೋರಿಸುವುದಾಗಿ ಹೇಳಿಕೊಂಡು ಫೇಸ್‌ಬುಕ್, ಯೂಟ್ಯೂಬ್ (ಇಲ್ಲಿ, ಇಲ್ಲಿ) ಮತ್ತು ಇನ್‌ಸ್ಟಾಗ್ರಾಮ್ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ) ನಲ್ಲಿ ಅನೇಕ ಸೋಶಿಯಲ್ ಮೀಡಿಯಾ ಉಸೆರ್ಸ್ ಅದೇ ವೀಡಿಯೊವನ್ನು ನವೆಂಬರ್ 2024 ರಲ್ಲಿ ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

ವಾರಣಾಸಿಯಲ್ಲಿ ನಡೆದ 2024 ರ ದೇವ್ ದೀಪಾವಳಿ ಆಚರಣೆಗಳ ಕುರಿತಾದ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
2025 ರ ಮಹಾ ಕುಂಭದಲ್ಲಿ 45 ದಿನಗಳ ಧಾರ್ಮಿಕ ಸಭೆಯಲ್ಲಿ ಪಟಾಕಿ ಪ್ರದರ್ಶನ ನಡೆದ ಬಗ್ಗೆ ಯಾವುದೇ ವರದಿಗಳಿಲ್ಲ.ಇನ್ನು ಹೆಚ್ಚಾಗಿ, ನಾವು 2025 ರ ಮಹಾ ಕುಂಭದ ಅಫೀಷಿಯಲ್ ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳನ್ನು ಸ್ಕ್ಯಾನ್ ಮಾಡಿದ್ದೇವೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಆದರೆ, ಈ ಹ್ಯಾಂಡಲ್‌ಗಳಲ್ಲಿ 2025 ರ ಮಹಾ ಕುಂಭದಲ್ಲಿ ಪಟಾಕಿ ಪ್ರದರ್ಶನಗಳ ಯಾವುದೇ ಸುದ್ದಿ ಅಥವಾ ದೃಶ್ಯಗಳು ನಮಗೆ ಸಿಕ್ಕಿಲ್ಲ. 2025 ರ ಮಹಾ ಕುಂಭದ ಕೊನೆಯ ದಿನವಾದ ಫೆಬ್ರವರಿ 26, 2025 ರಂದು, ಭಾರತೀಯ ವಾಯುಪಡೆಯು ಮೇಳದ ಆವರಣದಲ್ಲಿ ಅದ್ಭುತವಾದ ವಾಯು ಪ್ರದರ್ಶನವನ್ನು ನಡೆಸಿತು (ಇಲ್ಲಿ).
ಒಟ್ಟಾರೆಯಾಗಿ ಹೇಳುವುದಾದರೆ, ವಾರಣಾಸಿಯ 2024 ರ ದೇವ್ ದೀಪಾವಳಿ ಪಟಾಕಿ ಪ್ರದರ್ಶನವನ್ನು 2025 ರ ಮಹಾ ಕುಂಭದ ದೃಶ್ಯಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.