ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಮಾತನಾಡಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವಾಗಿ ನಡೆದ ಘಟನೆ ಅಲ್ಲ

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಮಾತನಾಡಿದರೆ ಹೀಗಾಗುತ್ತದೆ ಎಂಬ ಪೋನ್ ಸ್ಪೋಟಗೊಳ್ಳುವ ವೀಡಿಯೊ ಇರುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

ಪ್ರತಿಪಾದನೆ: ಫೋನ್ ಚಾರ್ಜ್ ಮಾಡುವಾಗ ಮಾತನಾಡಿದರೆ ಸಿಡಿಯುವ ಭಯಾನಕತೆಯನ್ನು ವೀಡಿಯೊದಲ್ಲಿ ಕಾಣಬಹುದು.

ನಿಜಾಂಶ: ಈ ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿಯೂ ನಡೆದಿರುವುದಿಲ್ಲ. ಇದು ಸ್ಕ್ರಿಪ್ಟ್ ಮಾಡಿದ ನಾಟಕೀಯ ವೀಡಿಯೊವಾಗಿದೆ. ಆದ್ದರಿಂದ, ಪೋಸ್ಟ್ ಮೂಲಕ ಪ್ರತಿಪಾದಿಸಿರುವುದು ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದೇ ವಿಡಿಯೋ ಫೇಸ್ ಬುಕ್ ನಲ್ಲಿ ಸಿಕ್ಕಿತು. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಮುಖ ಬ್ಯಾಡ್ಮಿಂಟನ್ ಆಟಗಾರ್ತಿ ಗುಟ್ಟಾ ಜ್ವಾಲಾ ತಮ್ಮ ಫೇಸ್‌ಬುಕ್ ಪುಟದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು. ಆದಾಗ್ಯೂ, ಗುಟ್ಟಾ ಜ್ವಾಲಾ ಈ ವೀಡಿಯೊವನ್ನು ಹಂಚಿಕೊಂಡ ಪೋಸ್ಟ್‌ನಲ್ಲಿ ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಮತ್ತು ಜಾಗೃತಿಗಾಗಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಫೋನ್ ಅನ್ನು ಚಾರ್ಜ್ ಮಾಡಿದ ನಂತರ ವಿವಿಧ ಕಾರಣಗಳಿಗಾಗಿ ಫೋನ್ ಉರಿಯುವುದು ಅಥವಾ ಸ್ಫೋಟಗೊಳ್ಳುವಂತಹ ಘಟನೆಗಳು ಈ ಹಿಂದೆ (ಇಲ್ಲಿ ಮತ್ತು ಇಲ್ಲಿ) ವರದಿಯಾಗಿದೆ. ದೋಷಯುಕ್ತ ಬ್ಯಾಟರಿಯಿಂದಾಗಿ ಇದು ಸಂಭವಿಸಬಹುದು. ಆದರೆ, ವಿಡಿಯೋದಲ್ಲಿ ಕಾಣುವಂತ ಘಟನೆ ಕುರಿತು ಇತ್ತೀಚೆಗೆ ನಮಗೆ ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ.

ಇತ್ತೀಚಿನ ದಿನಗಳಲ್ಲಿ, ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂತಹ ಜಾಗೃತಿ ವೀಡಿಯೊಗಳನ್ನು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ಈ ಕೆಲವರು ವೀಡಿಯೊಗಳಲ್ಲಿನ ವಿವರಣೆಯ ಭಾಗವನ್ನು ತೆಗೆದುಹಾಕುತ್ತಾರೆ ಮತ್ತು ಅವುಗಳನ್ನು ನೈಜ ಘಟನೆಗಳಂತೆ ಹಂಚಿಕೊಳ್ಳುತ್ತಿದ್ದಾರೆ. ಅದೇ ವೀಡಿಯೊಗಳನ್ನು ಧಾರ್ಮಿಕ ಆರೋಪಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಅಂತಹ ಕೆಲವು ವೀಡಿಯೋಗಳ ಬಗ್ಗೆ FACTLY ಬರೆದಿರುವ ಫ್ಯಾಕ್ಟ್ ಚೆಕ್ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಮಾತನಾಡಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವಾಗಿ ನಡೆದ ಘಟನೆ ಅಲ್ಲ. ನಾಟಕೀಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.