ಎನ್‌ಜಿಒ ಕಾರ್ಯಕರ್ತೆಗೆ ಶುಭಾಶಯ ಕೋರುತ್ತಿರುವ ಪ್ರಧಾನಿ ಮೋದಿಯ ಚಿತ್ರವನ್ನು ಅದಾನಿ ಪತ್ನಿಗೆ ನಮಿಸುತ್ತಿದ್ದಾರೆ ಎಂದು ಹಂಚಿಕೊಳ್ಳಲಾಗಿದೆ

ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಪತ್ನಿ ಪ್ರೀತಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ವಿದೇಯನಾಗಿ ನಮಸ್ಕರಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ

ಪ್ರತಿಪಾದನೆ: ಗೌತಮ್ ಅದಾನಿಯವರ ಪತ್ನಿ ಪ್ರೀತಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ವಿದೇಯನಾಗಿ ನಮಸ್ಕರಿಸುವ ಚಿತ್ರ.

ಸತ್ಯಾಂಶ: ಈ ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ದಿವ್ಯಾ ಜ್ಯೋತಿ ಕಲ್ಚರಲ್ ಆರ್ಗನೈಸೇಶನ್ ಅಂಡ್ ವೆಲ್ಫೇರ್ ಸೊಸೈಟಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ದೀಪಿಕಾ ಮೊಂಡೋಲ್ ಅವರನ್ನು ಸ್ವಾಗತಿಸುತ್ತಿದ್ದಾರೆ. ಚಿತ್ರದಲ್ಲಿರುವುದು ಗೌತಮ್ ಅದಾನಿಯವರ ಪತ್ನಿ ಪ್ರೀತಿ ಅದಾನಿಯನ್ನಲ್ಲ. ಈ ಫೋಟೋವನ್ನು ಏಪ್ರಿಲ್ 2015 ರ ಘಟನೆಯೊಂದರಲ್ಲಿ ಕ್ಲಿಕ್ಕಿಸಲಾಗಿದೆ ಎಂದು ವರದಿಯಾಗಿದೆ. ಆದ್ದರಿಂದ,  ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ಪೋಸ್ಟ್‌ನಲ್ಲಿ ಹಂಚಲಾದ ಫೋಟೋವನ್ನು ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ಹುಡುಕಿದಾಗ, ‘ದಿವ್ಯಾ ಮರಾಠಿ’ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ದಿವ್ಯಾ ಜ್ಯೋತಿ ಕಲ್ಚರಲ್ ಆರ್ಗನೈಸೇಶನ್ ಅಂಡ್ ವೆಲ್ಫೇರ್ ಸೊಸೈಟಿ’ (ಡಿಸಿಒಎಸ್ಡಬ್ಲ್ಯೂಎಸ್) ಮುಖ್ಯ ಕಾರ್ಯಕಾರಿ ಅಧಿಕಾರಿ ದೀಪಿಕಾ ಮೊಂಡೋಲ್ ಅವರನ್ನು ಸ್ವಾಗತಿಸುವ ಫೋಟೋ ಎಂದು ಉಲ್ಲೇಖಿಸಲಾಗಿದೆ. ಈ ಫೋಟೋವನ್ನು ಏಪ್ರಿಲ್ 2015 ರ ಘಟನೆಯೊಂದರಲ್ಲಿ ತೆಗೆಯಲಾಗಿದೆ ಎಂದು ವರದಿಯಾಗಿದೆ. ಅಮರ್ ಉಜಲಾ ಅವರು ‘12 ಏಪ್ರಿಲ್ 2018 ’ರಂದು ಪ್ರಕಟವಾದ ಲೇಖನದಲ್ಲಿ ಇದನ್ನು ವರದಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಸ್ವತಃ ದೀಪಿಕಾ ಮೊಂಡೋಲ್, ಪ್ರಧಾನಿ ಮೋದಿ ತಮ್ಮ ಸಾಮಾಜಿಕ ಕಾರ್ಯಗಳ ಬಗ್ಗೆ ಗೌರವ ಸೂಚಕವಾಗಿ ನಮಸ್ಕರಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಇದನ್ನು ವೀಡಿಯೊದ 2.47 ನಿಮಿಷದಲ್ಲಿ ಅದೇ ದೃಶ್ಯವನ್ನು ನೋಡಬಹುದು.

ದೀಪಿಕಾ ಮೊಂಡೋಲ್ ಅವರು ‘‘ದಿವ್ಯಾ ಜ್ಯೋತಿ ಕಲ್ಚರಲ್ ಆರ್ಗನೈಸೇಶನ್ ಅಂಡ್ ವೆಲ್ಫೇರ್ ಸೊಸೈಟಿಯ ಮುಖ್ಯ ಕಾರ್ಯಕಾರಿ ಅಧಿಕಾರಿ. ಈ ಸಂಸ್ಥೆಯು ಭಾರತೀಯ ಸಂಸ್ಕೃತಿ, ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಬುಡಕಟ್ಟು ಕಲ್ಯಾಣವನ್ನು ಉತ್ತೇಜಿಸುವ ಕೆಲಸ ಮಾಡುತ್ತಾರೆ. ಈ ಎನ್‌ಜಿಒ ದ ಮುಖ್ಯ ಉದ್ದೇಶ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದು. ಗೌತಮ್ ಅದಾನಿಯ ಪತ್ನಿ ಪ್ರೀತಿ ಅದಾನಿ ಮತ್ತು ದೀಪಿಕಾ ಮೊಂಡೋಲ್ ಅವರಿಗೂ ಇರುವ ಹೋಲಿಕೆಯನ್ನು ಕೆಳಗಿನ ಚಿತ್ರದಲ್ಲಿ ನೋಡಬಹುದು.

ಗೌತಮ್ ಅದಾನಿ ಪತ್ನಿ ಪ್ರೀತಿ ಅದಾನಿ ಅವರ ಮುಂದೆ ನರೇಂದ್ರ ಮೋದಿ ತಲೆಬಾಗುತ್ತಿದ್ದಾರೆ ಎಂಬ ಇದೇ ರೀತಿಯ ಹೇಳಿಕೆಯೊಂದಿಗೆ ತಪ್ಪು ಹರಡಿದ್ದ ಬೇರೊಂದು ಚಿತ್ರವನ್ನು ಫ್ಯಾಕ್ಟ್‌ಲಿ ಈ ಹಿಂದೆ ಫ್ಯಾಕ್ಟ್‌ ಚೆಕ್ ಮಾಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯ ಹಳೆಯ ಚಿತ್ರವು ದೀಪಿಕಾ ಮೊಂಡೋಲ್ ಅವರಿಗೆ ನಮಸ್ಕರಿಸುವ ಚಿತ್ರವಾಗಿದೆಯೆ ಹೊರತು ಗೌತಮ್ ಅದಾನಿಯ ಪತ್ನಿ ಪ್ರೀತಿ ಅದಾನಿಗೆ ನಮಸ್ಕರಿಸುತ್ತಿರುವ ಚಿತ್ರವಲ್ಲ.