ಸುಶಾಂತ್ ಸಿಂಗ್ ರಾಜಪೂತ್ ಅವರನ್ನು ಕ್ರಿಕೆಟರ್ ಎಂದು ಸಂಬೋಧಿಸಿದ್ದಾರೆ ಎಂದು ಈಗ ಅಮಿತ್ ಶಾ ಅವರ ಟ್ವೀಟ್ ತಿರುಚಲಾಗಿದೆ

ಅಮಿತ್ ಶಾ ತಮ್ಮ ಟ್ವೀಟ್ ನಲ್ಲಿ ಸುಶಾಂತ್ ಸಿಂಗ್ ರಾಜಪೂತ್ ಅವರನ್ನು ಪ್ರತಿಭಾವಂತ ಕ್ರಿಕೆಟರ್ ಎಂದು ಕರೆದಿದ್ದಾರೆ ಎಂದು ಪ್ರತಿಪಾದಿಸುವ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್ ನಲ್ಲಿ ಹಂಚಲಾಗುತ್ತಿರುವ ಟ್ವೀಟ್, ರಾಹುಲ್ ಗಾಂಧಿ ಅವರ ಅಧಿಕೃತ ಖಾತೆಯ ಒಂದು ಟ್ವೀಟ್ ಅನ್ನು ತಿರುಚಿ, ಅದನ್ನು ಎಡಿಟ್ ಮಾಡಿ ಅಮಿತ್ ಶಾ ಅವರಿಗೆ ಆರೋಪಿಸಲಾಗುತ್ತಿದೆ ಎಂದು ಫ್ಯಾಕ್ಟ್ಲಿ ಪತ್ತೆಹಚ್ಚಿದೆ. ಸುಶಾಂತ್ ಸಿಂಗ್ ಅವರ ಅಕಾಲಿಕ ಸಾವಿಗೆ ಅಮಿತ್ ಶಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ದುಃಖ ವ್ಯಕ್ತಪಡಿಸಿದ್ದರು. ಅಮಿತ್ ಶಾ ತಮ್ಮ ಟ್ವೀಟ್ ನಲ್ಲಿ, ಸುಶಾಂತ್ ಸಿಂಗ್ ರಾಜಪೂತ್ ಅವರು ಬಹಳ ಪ್ರತಿಭಾವಂತ ನಟ ಆಗಿದ್ದರು ಎಂದು ಹೇಳಿ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಕೊಡುಗೆಗೆ ಅವರು ಸದಾ ನೆನನಪಿನಲ್ಲಿ ಉಳಿಯಲಿದ್ದಾರೆ ಎಂದಿದ್ದರು.  ಅಮಿತ್ ಶಾ ತಮ್ಮ ಟ್ವೀಟ್ ನಲ್ಲಿ ಸುಶಾಂತ್ ಅವರನ್ನು ಕ್ರಿಕೆಟರ್ ಎಂದು ಕರೆದಿಲ್ಲ. ಪೋಸ್ಟ್‌ ನಲ್ಲಿ ಕಾಣುವ ಟ್ವೀಟ್, ಸುಶಾಂತ್ ಸಾವಿನ ಬಗ್ಗೆ ರಾಹುಲ್ ಗಾಂಧಿ ಅವರ ಒಂದು ಟ್ವೀಟ್ ಅನ್ನು ತಿರುಚಿ, ಅದನ್ನು ಎಡಿಟ್ ಮಾಡಿ ಅಮಿತ್ ಶಾ ಅವರಿಗೆ ಆರೋಪಿಸಲಾಗಿದೆ. ರಾಹುಲ್ ಗಾಂಧಿ ಟ್ವೀಟ್ ಬಗ್ಗೆಯೂ ಮಾಡಿದ್ದ ಸುಳ್ಳು ಆಪಾದನೆಯನ್ನು ಫ್ಯಾಕ್ಟ್ಲಿ ಬಯಲು ಮಾಡಿತ್ತು.

ಮೂಲಗಳು:
ಪ್ರತಿಪಾದನೆ 
1. ಫೇಸ್ಬುಕ್ ಪೋಸ್ಟ್ (ಆರ್ಕೈವ್)
ನಿಜಾಂಶ 
1. ಅಮಿತ್ ಶಾ ಟ್ವೀಟ್  –
https://twitter.com/AmitShah/status/1272129046831382531
“ಯುವ ಮತ್ತು ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ದುಃಖಕರ ಮತ್ತು ಅಕಾಲಿಕ ಮರಣದ ಬಗ್ಗೆ ತಿಳಿದು ಅತೀವ ನೋವಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗೆ ಅವರು ಸದಾ ನೆನಪಿನಲ್ಲಿ ಉಳಿಯಲಿದ್ದಾರೆ. ಅವರ ಕುಟುಂಬ, ಗೆಳೆಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು” (ಟ್ವಿಟರ್ ಪಠ್ಯ)
2. ರಾಹುಲ್ ಗಾಂಧಿ ಟ್ವೀಟ್  – https://twitter.com/RahulGandhi/status/1272167327459508224
“ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುದ್ದಿ ವಿಷಾದನೀಯ. ಯುವ ಪ್ರತಿಭಾನ್ವಿತ ನಟ ಇಷ್ಟು ಬೇಗ ನಿರ್ಗಮಿಸಿದ್ದಾರೆ. ಅವರ ಕುಟುಂಬ, ಸ್ನೇಹಿತರು ಮತ್ತು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ನನ್ನ ಸಂತಾಪಗಳು” (ಟ್ವಿಟರ್ ಪಠ್ಯ)