ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಭಾಗಿಯಾಗಿಲ್ಲ ಎಂದು ಹೇಳುವ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಶೇರ್ ಹಂಚಿಕೊಳ್ಳಲಾಗಿದೆ

ನೆಹರೂ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯನ್ನು ವಿರೋಧಿಸಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಇದರಲ್ಲಿ “ನಾನು ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಭಾಗಿಯಾಗಿಲ್ಲ; ಬದಲಾಗಿ ಅದನ್ನು ವಿರೋಧಿಸಿದೆ’ ಎನ್ನುವ ಮಾತುಗಳನ್ನು ಕೇಳಬಹುದಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರೂ ಭಾಗಿಯಾಗಿಲ್ಲ ಎಂದು ಹೇಳಿಕೊಳ್ಳುತ್ತಿರುವ  ದೃಶ್ಯಗಳು.

ಫ್ಯಾಕ್ಟ್: ನೆಹರು ಅವರ ಮೂಲ ಸಂದರ್ಶನದ ವಿಡಿಯೋ ತುಣುಕನ್ನು ಎಡಿಟ್ ಮಾಡಿ  ಅವರು ಸ್ವಾತಂತ್ಯ ಸಮರದಲ್ಲಿ ಭಾಗಿಯಾಗಿಲ್ಲ ಎನ್ನುವ ತಪ್ಪು ಮಾಹಿತಿಯನ್ನು ಹಬ್ಬಿಸುವ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ. ಈ ಮೂಲಕ ವೈರಲ್ ವಿಡಿಯೋ ಎಡಿಟೆಡ್ ಮಾಡಲಾಗಿದೆ. ”ಮಿಸ್ಟರ್. ಜಿನ್ನಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಬದಲಾಗಿ ಅವರು ಅದನ್ನು ವಿರೋದಿಸಿದರು” ಎನ್ನುವುದು ಮೂಲ ವಿಡಿಯೋದಲ್ಲಿ ಅವರು ಹೇಳಿರುವಂತದ್ದು, ಆದ್ದರಿಂದ ಈ ಪೋಸ್ಟ್ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ವೀಡಿಯೊವನ್ನು ಪರಿಶೀಲಿಸಲು ನಾವು ವಿಡಿಯೋದಲ್ಲಿರುವ ಕೀ ಫ್ರೇಮ್ ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ನಡೆಸಿದೆವು. ಈ ಮೂಲಕ ಮೇ 14, 2019 ರಂದು ‘ಪ್ರಸಾರ ಭಾರತಿ’  (ಭಾರತದ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಪ್ರಸಾರ ಸಂಸ್ಥೆ)ಯ ಯುಟ್ಯೂಬ್ ಚಾನೆಲ್ನಲ್ಲಿ ”ಜವಾಹರಲಾಲ್ ನೆಹರು ಅವರ ಕೊನೆಯ ಟಿವಿ ಸಂದರ್ಶನ – ಮೇ 1964″ ಎಂಬ ಟೈಟಲ್ ನಲ್ಲಿರುವ  ವಿಡಿಯೋವನ್ನು ಕಂಡುಕೊಂಡೆವು. ಇಲ್ಲಿ ಹೇಳಿರುವ ಪ್ರಕಾರ, ಅಮೆರಿಕೆನ್ ಟಿವಿ ನಿರೂಪಕ ಅರ್ನಾಲ್ಡ್ ಮಿಚ್ ಆಯೋಜಿಸಿದ ನೆಹರೂರವರ ಕೊನೆಯ ಮಹತ್ವಹ ಸಂದರ್ಶನವಾಗಿದೆ.

ಪೂರ್ತಿ ವೀಡಿಯೊವನ್ನು ಪರಿಶೀಲಿಸಿದಾಗ, ಈ  ವೈರಲ್ ಕ್ಲಿಪ್ 14:50 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗಿ 15:45 ಕ್ಕೆ ಕೊನೆಗೊಳ್ಳುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ಇಲ್ಲಿ ನೆಹರೂ ಅವರು ತಮ್ಮ ಹೇಳಿಕೆಯನ್ನು ನೀಡುವಾಗ ಮುಸ್ಲಿಂ ಲೀಗ್‌ನ ಪ್ರಮುಖ ನಾಯಕ ಮಹಮ್ಮದ್ ಅಲಿ ಜಿನ್ನಾ ಅವರನ್ನು ಉಲ್ಲೇಖಿಸಿರುವುದನ್ನು ನೋಡಬಹುದು.

ಸಂದರ್ಶನದಲ್ಲಿ ಹೇಳಿರುವ ಪ್ರಕಾರ ಟೈಮ್‌ಸ್ಟ್ಯಾಂಪ್ 14:35 ರಲ್ಲಿ, ನೆಹರು, “ನಾನು, ಗಾಂಧಿ ಮತ್ತು ಜಿನ್ನಾ. ನಾವೆಲ್ಲರೂ ಭಾರತದ ಮೇಲಿನ ಬ್ರಿಟಿಷರ ದಬ್ಬಾಳಿಕೆಯನ್ನು ಕೊನೆಗೊಳಿಸಿ  ಹೋರಾಡಿ ಮೊದಲು ಸ್ವಾತಂತ್ರ್ಯ ಪಡೆದು ನಂತರ ಭಾರತ ವಿಭಜನೆ ಎಂಬ ನಿಲುವಿನಲ್ಲಿ  ನಿರ್ಧರಿತರಾಗಿದ್ದೆವು…. ಆದರೆ ಜಿನ್ನಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬದಲಾಗಿ ಅವರು ಅದನ್ನು ವಿರೋಧಿಸಿದರು. ನನ್ನ ಪ್ರಕಾರ, ಬ್ರಿಟಿಷರ ಪ್ರೋತ್ಸಹ, ಪಿತೂರಿಯಿಂದ ವಿವಿಧ ಬಣಗಳು ಸೃಷ್ಟಿಯಾಗಿ  1911 ರಲ್ಲಿ ಮುಸ್ಲಿಂ ಲೀಗ್  ಪ್ರಾರಂಭವಾಯಿತು. ಈ ಮೂಲಕ ಕೊನೆಯದಾಗಿ ಭಾರತ ವಿಭಜನೆಗೊಂಡಿತು”. ಇಲ್ಲಿರುವ ವಿಡಿಯೋ ಕ್ಲಿಪ್ ಅನ್ನು ಎಡಿಟ್ ಮಾಡಿ  ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರೂ ಭಾಗಿಯಾಗಿಲ್ಲ ಎಂಬ ತಪ್ಪು ಮಾಹಿತಿಯನ್ನು ಹಂಚಲಾಗಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗಿದೆ.

ಫಾಕ್ಟ್ಲಿ, ಈ ಹಿಂದೆಯೂ ಇದೇ ಸಂದರ್ಶನದ ವೀಡಿಯೊದ ಮತ್ತೊಂದು ಕ್ಲಿಪ್ ಅನ್ನುತಳ್ಳಿಹಾಕಿತ್ತು.  ನೆಹರೂ ಅವರು ಸಂದರ್ಶನವೊಂದರಲ್ಲಿ ಭಾರತದ ವಿಭಜನೆಯ ಬಗ್ಗೆ ತಾವೇ ನಿರ್ಧರಿಸಿದ್ದಾರೆ ಎಂದು ಹೆಮ್ಮೆಪಡುತ್ತಾರೆ ಇನ್ನು ವಿಡಿಯೋವನ್ನು ಶೇರ್ ಮಾಡಲಾಗಿತ್ತು. ಅದನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ನೆಹರೂ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ತಪ್ಪಾಗಿ ಎಡಿಟ್ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.