ಇಂಡೋನೇಷ್ಯಾದ ಬಾಲಿಯ ಸಮುದ್ರದಲ್ಲಿ 5,000 ವರ್ಷಗಳಷ್ಟು ಹಳೆಯದಾದ ಶ್ರೀ ಮಹಾ ವಿಷ್ಣು ದೇವಾಲಯವನ್ನು ಸ್ಕೂಬಾ ಡೈವರ್ಗಳು ನೀರಿನ ಅಡಿಯಲ್ಲಿ ಪರಿಶೀಲಿಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ವೈರಲ್ ವೀಡಿಯೊದಲ್ಲಿ ಇಂಡೋನೇಷ್ಯಾದ ಬಾಲಿಯ ಸಮುದ್ರದಲ್ಲಿ ಸ್ಕೂಬಾ ಡೈವರ್ಗಳು 5,000 ವರ್ಷಗಳಷ್ಟು ಹಳೆಯದಾದ ಶ್ರೀ ಮಹಾ ವಿಷ್ಣು ದೇವಾಲಯವನ್ನು ಕಂಡುಹಿಡಿದಿದ್ದಾರೆ.
ಫ್ಯಾಕ್ಟ್: ಈ ವೀಡಿಯೊವನ್ನು AI-ರಚಿತವಾಗಿದ್ದು, ಇದನ್ನು ಮೂಲತಃ @mbaiarts ಎಂಬ ಕಲಾವಿದರ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಮಾಡಲಾಗಿದೆ. ಬಾಲಿ ಸಮುದ್ರದಲ್ಲಿ ಅಂತಹ ಪ್ರಾಚೀನ ದೇವಾಲಯದ ಕಂಡುಬಂದಿರುವ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿಲ್ಲ. ಆದ್ದರಿಂದ, ಈ ಕ್ಲೇಮ್ ತಪ್ಪು.
ಈ ಕ್ಲೇಮ್ ಅನ್ನು ಪರಿಶೀಲಿಸಲು, ನಾವು ವೀಡಿಯೊದಿಂದ ಕೀಫ್ರೇಮ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. @mbaiarts ಪೇಜ್ನಲ್ಲಿ 09 ಏಪ್ರಿಲ್ 2025 ರಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಅದೇ ಕ್ಲಿಪ್ ಅನ್ನು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೊವು ಈ ಯೂಸೆರ್ ನೇಮ್ ಅನ್ನು ವಾಟರ್ಮಾರ್ಕ್ ಆಗಿ ನೀಡಲಾಗಿದೆ. ಕ್ಯಾಪ್ಶನ್ ಪ್ರಕಾರ, ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ.
ಕಲಾವಿದ ಎಂದು ಗುರುತಿಸಿಕೊಳ್ಳುವ Mb AI ಆರ್ಟ್ಸ್ ಅಕೌಂಟ್ ಹಲವಾರು ಇತರ AI-ರಚಿತ ವೀಡಿಯೊಗಳನ್ನು ಒಳಗೊಂಡಿದೆ. ಅದರ ಪ್ರೊಫೈಲ್ ಬಯೋ “Divine Creations in Pixels, Exploring the beauty of Hindu gods through AI art,” ಎಂದಿದೆ. ಇದು ವಿಷಯವನ್ನು ಕಲಾತ್ಮಕ ಅಭಿವ್ಯಕ್ತಿಗಾಗಿ ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ಸೂಚಿಸುತ್ತದೆ.
ವೀಡಿಯೊ AI- ರಚಿತವಾಗಿದೆಯೇ ಎಂದು ಪರಿಶೀಲಿಸಲು, ನಾವು ಹೈವ್ ಅಪ್ಲಿಕೇಶನ್ ಅನ್ನು ಬಳಸಿ, ವೀಡಿಯೊವನ್ನು ರನ್ ಮಾಡಿದ್ದೇವೆ. ಈ ಮೂಲಕ ಅದು AI- ರಚಿತವಾಗಿರುವ 99% ಸಾಧ್ಯತೆಯಿದೆ ಎಂದು ತಿಳಿಸಿದೆ. ಹಾಗಾಗಿ ಇದು ನಿಜವಾದ ವಿಡಿಯೋವಲ್ಲ ಎಂಬುದು ದೃಢಪಡಿಸುತ್ತದೆ.
ವೈರಲ್ ವೀಡಿಯೊಗೆ ಸಂಬಂಧಿಸಿದ ಕ್ಲೇಮ್ ಬಗ್ಗೆ ಹೇಳುವುದಾದರೆ, ಇಂಡೋನೇಷ್ಯಾದ ಬಾಲಿ ಸಮುದ್ರದಲ್ಲಿ 5,000 ವರ್ಷಗಳಷ್ಟು ಹಳೆಯದಾದ ಶ್ರೀ ಮಹಾ ವಿಷ್ಣು ದೇವಾಲಯದ ಅಸ್ತಿತ್ವವನ್ನು ಪರಿಶೀಲಿಸಲು ನಾವು ಸಂಬಂಧಿತ ಕೀವರ್ಡ್ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಹುಡುಕಿದೆವು. ಆದರೆ ಈ ಕ್ಲೇಮ್ ಗೆ ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ.
ವಾಸ್ತವವಾಗಿ, ಇದೇ ರೀತಿಯ ವೀಡಿಯೊವೊಂದು ಈ ಹಿಂದೆ ಕೂಡ ವೈರಲ್ ಆಗಿತ್ತು. ಇದರಲ್ಲಿ ಸ್ಕೂಬಾ ಡೈವರ್ ಪೆಮುಟೆರಾನ್ ಸಮುದ್ರದಲ್ಲಿ 5,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ಕಂಡುಹಿಡಿದಿದ್ದಾನೆ ಎಂದು ಹೇಳಲಾಗಿತ್ತು. ನಾವು ಆ ವೀಡಿಯೊವನ್ನು ಸಹ ಫ್ಯಾಕ್ಟ್ ಚೆಕ್ ಮಾಡಿದ್ದೇವೆ, ಇದು ನಿಜವಾಗಿಯೂ ಅಂಡರ್ ವಾಟರ್ ಟೆಂಪಲ್ ಗಾರ್ಡನ ಪ್ರತಿಮೆಗಳನ್ನು ತೋರಿಸುತ್ತದೆ ಎಂದು ದೃಢಪಡಿಸಿದೆ. ಈ ಸೈಟ್ ಅನ್ನು 2005 ರಲ್ಲಿ ‘ರೀಫ್ ಗಾರ್ಡನರ್ಸ್’ ಎಂಬ ಸಮುದಾಯ ಯೋಜನೆಯ ಭಾಗವಾಗಿ ಕೃತಕವಾಗಿ ರಚಿಸಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಂಡೋನೇಷ್ಯಾದ ಬಾಲಿಯ ಸಮುದ್ರದಲ್ಲಿರುವ 5,000 ವರ್ಷಗಳಷ್ಟು ಹಳೆಯದಾದ ಶ್ರೀ ಮಹಾ ವಿಷ್ಣು ದೇವಾಲಯದ ವಿಡಿಯೋವನ್ನು AI- ರಚಿತವಾದ ವೀಡಿಯೊವಾಗಿದ್ದು, ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.