2025 ರ ಮಹಾ ಕುಂಭಮೇಳದಲ್ಲಿ ಸಿನೆಮಾ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದರು ಎಂದು ಎಐ ರಚಿತವಾದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ

2025 ರ ಮಹಾ ಕುಂಭಮೇಳವು 2025ರ ಜನವರಿ 13  ರಂದು, ಪುಷ್ಯ ಹುಣ್ಣಿಮೆಯಂದು  ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಪ್ರಾರಂಭವಾಯಿತು. ಈ ಉತ್ಸವವು ಫೆಬ್ರವರಿ 26, 2025 ರಂದು ಶಿವರಾತ್ರಿಯ ವರೆಗೆ ನಡೆಯಲಿದೆ. ಉದ್ಯಮಿ ಗೌತಮ್ ಅದಾನಿ, ಚಲನಚಿತ್ರ ನಟ ಅನುಪಮ್ ಖೇರ್, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ, ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮತ್ತು ಆಪಲ್ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಅವರಂತಹ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಈ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೆ (ಇಲ್ಲಿ). ಈ ಸಂದರ್ಭದಲ್ಲಿ, “ಪ್ರಸಿದ್ಧ ಚಲನಚಿತ್ರ/ಸಿನೆಮಾ ನಟ ಪ್ರಕಾಶ್ ರಾಜ್ ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ” (ಇಲ್ಲಿ) ಎಂದು ಹೇಳುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಪ್ರಸಿದ್ಧ ಸಿನೆಮಾ  ನಟ ಪ್ರಕಾಶ್ ರಾಜ್ ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು,,  ಅದಕ್ಕೆ ಸಂಬಂಧಿಸಿದ ಫೋಟೋ.

ಫ್ಯಾಕ್ಟ್: ಈಫ್ಯಾಕ್ಟ್ ಚೆಕ್ ಆರ್ಟಿಕಲ್ ಅನ್ನು ಬರೆಯುವ ಸಮಯದಲ್ಲಿ, ಚಲನಚಿತ್ರ ನಟ ಪ್ರಕಾಶ್ ರಾಜ್ 2025 ರ ಕುಂಭಮೇಳದಲ್ಲಿ ಭಾಗವಹಿಸಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು/ಸುದ್ದಿ ವರದಿಗಳಿಲ್ಲ. ಈ ವೈರಲ್ ಫೋಟೋಗೆ ನಟ ಪ್ರಕಾಶ್ ರಾಜ್ ತಮ್ಮ ಅಫೀಷಿಯಲ್ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರತಿಕ್ರಿಯಿಸಿದ್ದು, ಈ ಫೋಟೋ ನಕಲಿ/ಫೇಕ್ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ವೈರಲ್ ಆಗುತ್ತಿರುವ ಈ ಫೋಟೋವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ. ಆದ್ದರಿಂದ, ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪು.

ಈ ವೈರಲ್ ಪೋಸ್ಟ್‌ನಲ್ಲಿ ಮೊದಲೇ ಹೇಳಿದಂತೆ, ಪ್ರಸ್ತುತ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025 ರ ಮಹಾ ಕುಂಭಮೇಳದಲ್ಲಿ ಪ್ರಸಿದ್ಧ ಚಲನಚಿತ್ರ ನಟ ಪ್ರಕಾಶ್ ರಾಜ್ ಭಾಗವಹಿಸಿದ್ದರೇ? ನಾವು ಸೂಕ್ತ ಕೀವರ್ಡ್‌ಗಳನ್ನು ಬಳಸಿ ಇಂಟರ್ನೆಟ್ ನಲ್ಲಿ ಹುಡುಕಿದಾಗ, 2025 ರ ಕುಂಭಮೇಳದಲ್ಲಿ ಅವರು ಭಾಗಿಯಾಗಿದ್ದರು ಎನ್ನುವುದಕ್ಕೆ ಯಾವುದೇ ನ್ಯೂಸ್ ಆರ್ಟಿಕಲ್ಸ್/ರಿಪೋರ್ಟ್ಸ ನಮಗೆ ಸಿಗಲಿಲ್ಲ.

ಮುಂದೆ, ನಾವು ಪ್ರಕಾಶ್ ರಾಜ್ ಅವರ ಅಫೀಷಿಯಲ್ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಸಹ ಪರಿಶೀಲಿಸಿದ್ದೇವೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). 2025 ರ ಕುಂಭಮೇಳದಲ್ಲಿ ಅವರು ಭಾಗವಹಿಸಿದ ಬಗ್ಗೆ ನಮಗೆ ಅಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೆ, ವೈರಲ್ ಆಗುತ್ತಿರುವ ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ ಬಳಸಿ ಹುಡುಕಿದಾಗ, ಈ ಫೋಟೋಗಳೊಂದಿಗೆ ಯಾವುದೇ ವಿಶ್ವಾಸಾರ್ಹ ಸುದ್ದಿ ಲೇಖನಗಳು ನಮಗೆ ಸಿಗಲಿಲ್ಲ.

ಈಗ, ಈ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ಎಐ ರಚಿಸಲ್ಪಟ್ಟಿದೆ ಎಂದು ಇಂಟರ್ನೆಟ್ ನಲ್ಲಿ “ಈ ವೈರಲ್ ಫೋಟೋ AI- ರಚಿತವಾಗಿದೆಯೇ?” ಇಲ್ಲವೇ? ಎಂದು ಇದನ್ನು ದೃಢಪಡಿಸಲು, ಈ ವೈರಲ್ ಫೋಟೋವನ್ನು  Hive, wasitAI, Sightengine  ನಂತಹ ಹಲವಾರು AI- ರಚಿತ ಚಿತ್ರ ಪತ್ತೆ ಸಾಧನಗಳನ್ನು ಬಳಸಿಕೊಂಡು ಪರೀಕ್ಷಿಸಲಾಯಿತು. ಈ ವೈರಲ್ ಫೋಟೋ 99.9% ರಷ್ಟು AI- ರಚಿತ ಫೋಟೋ ಆಗಿರುವ ಸಾಧ್ಯತೆ ಇದೆ ಎಂದು ಹೈವ್ ಫಲಿತಾಂಶವನ್ನು ನೀಡಿದರೆ, ಸೈಟ್ ಎಂಜಿನ್ ಈ ಫೋಟೋ 99% ರಷ್ಟು AI- ರಚಿತ ಫೋಟೋ ಆಗಿರುವ ಸಾಧ್ಯತೆ ಇದೆ ಎಂದು ರಿಸಲ್ಟ್ ನೀಡಿದೆ. ಅಲ್ಲದೆ, ಇದು AI- ರಚಿತವಾದ ಫೋಟೋ ಎಂಬ ರಿಸಲ್ಟ್ ಅನ್ನು wasitAI ಸಹ ನೀಡಿದೆ.

ಈ ವೈರಲ್ ಫೋಟೋ ಬಗ್ಗೆ ಏಷ್ಯಾನೆಟ್ ನ್ಯೂಸ್ ಕನ್ನಡ, ಪ್ರಕಾಶ್ ರಾಜ್ ಅವರ ಲೀಗಲ್ ಟೀಮ್ ಅನ್ನು ಸಂಪರ್ಕಿಸಿದಾಗ, ಈ ವೈರಲ್ ಫೋಟೋ ನಕಲಿ ಎಂದು ಅವರು ಹೇಳಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ 2025 ರ ಜನವರಿ 27 ರಂದು ಪ್ರಕಟಿಸಿದ ಆರ್ಟಿಕಲ್ ನಲ್ಲಿ ತಿಳಿಸಿದೆ

ಈ ವೈರಲ್ ಫೋಟೋಗೆ ನಟ ಪ್ರಕಾಶ್ ರಾಜ್ ತಮ್ಮ ಅಧಿಕೃತ/ಅಫೀಷಿಯಲ್ Xಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರತಿಕ್ರಿಯಿಸಿ, “ಈ ಫೋಟೋ ನಕಲಿ ಮತ್ತು ನಾನು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ” ಎಂದು ಹೇಳಿದ್ದಾರೆ.

ಈ ಹಿಂದೆ, 2025 ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮತ್ತು ರಾಮ್ ಚರಣ್ ನಂತಹ ಸೆಲೆಬ್ರಿಟಿಗಳೆಂದು ಹೇಳಿಕೊಳ್ಳುವ ಹಲವಾರು AI- ರಚಿತ ಫೋಟೋಗಳು ವೈರಲ್ ಆಗಿದ್ದವು, ಆದರೆ ಅವುಗಳೆಲ್ಲವವನ್ನು ಫ್ಯಾಕ್ಟ್ಲಿ ಬರೆದ ಫ್ಯಾಕ್ಟ್-ಚೆಕ್ ಆರ್ಟಿಕಲ್ಸ್ ಅನ್ನು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2025 ರ ಮಹಾ ಕುಂಭಮೇಳದಲ್ಲಿ ಚಲನಚಿತ್ರ ನಟ ಪ್ರಕಾಶ್ ರಾಜ್  ಭಾಗವಹಿಸಿದ್ದರು ಎಂದು ಹೇಳಿಕೊಂಡು  AI-  ರಚಿಸಲಾದ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ.