ಯಮುನಾ ಆರತಿಯನ್ನು ಫೆಬ್ರವರಿ 2025 ರಂದು ಮೊದಲ ಸಲ ನಡೆಸಿದಲ್ಲ; ಇದನ್ನು ಮೊದಲು ನವೆಂಬರ್ 2015 ರಲ್ಲಿ ನಡೆಸಲಾಗಿತ್ತು

2025 ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು, 27 ವರ್ಷಗಳ ನಂತರ ರಾಜಧಾನಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ. ಇದರ ನಡುವೆ, ದೆಹಲಿಯ ಘಾಟ್‌ಗಳಲ್ಲಿ ಮೊದಲ ಬಾರಿಗೆ ಯಮುನಾ ಆರತಿಯನ್ನು ನಡೆಸಲಾಯಿತು ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ (ಇಲ್ಲಿ).  ಇದು ನಗರವು ಇಂದ್ರಪ್ರಸ್ಥವಾಗಿ ರೂಪಾಂತರಗೊಳ್ಳುವ ಭರವಸೆಯೊಂದಿಗೆ ಹೊಸ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಫೆಬ್ರವರಿ 2025 ರಲ್ಲಿ ಮೊದಲ ಬಾರಿಗೆ ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿಯನ್ನು ಪ್ರದರ್ಶಿಸುತ್ತಿರುವುದನ್ನು ತೋರಿಸುವ ವೀಡಿಯೊ.

ಫ್ಯಾಕ್ಟ್: ಯಮುನಾ ಆರತಿ ಇದೆ ಮೊದಲು ನಡೆದದ್ದಲ್ಲ. ದೆಹಲಿ ಸರ್ಕಾರವು ನವೆಂಬರ್ 13, 2015 ರಂದು ಕುಡೇಸಿಯಾ ಘಾಟ್‌ನಲ್ಲಿ ಮೊದಲ ಆರತಿಯನ್ನು ನಡೆಸಿತು. ವೈರಲ್ ವೀಡಿಯೊವನ್ನು ಐಎಸ್‌ಬಿಟಿ ಕಾಶ್ಮೀರಿ ಗೇಟ್ ಬಳಿಯ ವಾಸುದೇವ್ ಘಾಟ್‌ನಲ್ಲಿ ಚಿತ್ರೀಕರಿಸಲಾಗಿದೆ, ಇದನ್ನು ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ಅಭಿವೃದ್ದಿಪಡಿಸಿ  ಮಾರ್ಚ್ 12, 2024 ರಂದು ಉದ್ಘಾಟಿಸಲಾಯಿತು. ಪ್ರತಿ ಭಾನುವಾರ ಮತ್ತು ಮಂಗಳವಾರ ಇಲ್ಲಿ ಆರತಿಯನ್ನು ನಡೆಸಲಾಗುತ್ತದೆ. ಹೆಚ್ಚುವರಿಯಾಗಿ, ವಾಸುದೇವ್ ಘಾಟ್‌ನಲ್ಲಿ ಆರತಿಯ ಹಲವಾರು ಹಳೆಯ ವೀಡಿಯೊಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಮೊದಲ ಬಾರಿಗೆ ದೆಹಲಿಯ ಘಾಟ್‌ಗಳಲ್ಲಿ ಯಮುನಾ ಆರತಿಯ ಕುರಿತು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ನವೆಂಬರ್ 2015 ರ ಹಲವಾರು ಸುದ್ದಿ ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ದೊರಕಿವೆ. ಈ ವರದಿಗಳು ದೆಹಲಿ ಸರ್ಕಾರವು ನದಿ ಶುದ್ಧೀಕರಣ ಮತ್ತು ಪ್ರವಾಸೋದ್ಯಮ ಪ್ರಚಾರ ಪ್ರಯತ್ನಗಳ ಭಾಗವಾಗಿ 2015 ರ ನವೆಂಬರ್ 13 ರಂದು ಕುಡೇಸಿಯಾ ಘಾಟ್‌ನಲ್ಲಿ ಮೊದಲ ಯಮುನಾ ಆರತಿಯನ್ನು ಆಯೋಜಿಸಿತ್ತು ಎಂದು ಹೇಳಿವೆ. ವಾರಣಾಸಿ ಮತ್ತು ಋಷಿಕೇಶದಲ್ಲಿ ನಡೆದ ಗಂಗಾ ಆರತಿಯಿಂದ ಪ್ರೇರಿತರಾಗಿ, ಈ ಕಾರ್ಯಕ್ರಮವನ್ನು ಅಂದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಯೋಜಿಸಿದ್ದರು, ಅವರು ಗೀತಾ ಘಾಟ್‌ನಲ್ಲಿ ಮೊದಲ ಯಮುನಾ ಆರತಿಯನ್ನು ಸಹ ಮುನ್ನಡೆಸಿದ್ದರು ಎಂದು ತಿಳಿದು ಬಂದಿದೆ. 

ಆ ಸ್ಥಳವು ಕಾಶ್ಮೀರಿ ಗೇಟ್ ಎಂದುವೀಡಿಯೊಗಳಲ್ಲಿ ಒಂದರಿಂದ ನಾವು ಸುಳಿವನ್ನು ಪಡೆದುಕೊಂಡು ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಸ್ಥಳವನ್ನು ಪರಿಶೀಲಿಸಿದೆವು. ವಿಡಿಯೋದಲ್ಲಿರುವ  ಮಾಹಿತಿಯ ಆಧಾರದ ಮೇಲೆ, ನಾವು ಆನ್‌ಲೈನ್‌ನಲ್ಲಿ ಹುಡುಕಿದಾಗ ಅದೇ ಸ್ಥಳದಲ್ಲಿ ನಡೆಯುತ್ತಿರುವ ಯಮುನಾ ಆರತಿಯ ಹಲವಾರು ಹಳೆಯ ವೀಡಿಯೊಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ. ಈ ಸ್ಥಳವನ್ನು ದೆಹಲಿಯ ISBT ಕಾಶ್ಮೀರಿ ಗೇಟ್ ಬಳಿ ಇರುವ ವಾಸುದೇವ್ ಘಾಟ್ ಎಂದು ಗುರುತಿಸಲಾಗಿದೆ. ವಾಸುದೇವ್ ಘಾಟ್‌ನಲ್ಲಿರುವ ಹಳೆಯ ಯಮುನಾ ಆರತಿ ವೀಡಿಯೊಗಳು, ಸ್ಕ್ರೀನ್‌ಶಾಟ್‌ಗಳು ಮತ್ತು ವೈರಲ್ ವೀಡಿಯೊ ಹೋಲಿಕೆಯನ್ನು ಕೆಳಗೆ ನೋಡಬಹುದು.

ವರದಿಗಳ ಪ್ರಕಾರ (ಇಲ್ಲಿ ಮತ್ತು ಇಲ್ಲಿ), ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ಅಡಿಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ವಾಸುದೇವ್ ಘಾಟ್ ಅನ್ನು ನಿರ್ಮಿಸಿದೆ. ಈ ಘಾಟ್ ಅನ್ನು ಮಾರ್ಚ್ 12, 2024 ರಂದು ಉದ್ಘಾಟಿಸಲಾಯಿತು. ಪ್ರತಿ ಭಾನುವಾರ ಮತ್ತು ಮಂಗಳವಾರ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿ ನಡೆಯುತ್ತದೆ.

ಈ ವೀಡಿಯೊವನ್ನು ರೆಕಾರ್ಡ್ ಮಾಡಿದ ನಿಖರವಾದ ದಿನಾಂಕವನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಲಭ್ಯವಿರುವ ಪುರಾವೆಗಳ ಆಧಾರದ ಮೇಲೆ, 2025 ಕ್ಕಿಂತ ಮೊದಲೇ ದೆಹಲಿಯಲ್ಲಿ ಯಮುನಾ ಆರತಿಯನ್ನು ಪ್ರದರ್ಶಿಸಲಾಗಿತ್ತು ಎಂದು ತೀರ್ಮಾನಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಯಮುನಾ ಆರತಿಯನ್ನು ಮೊದಲ ಬಾರಿಗೆ ಫೆಬ್ರವರಿ 2025 ರಲ್ಲಿ ನಡೆದದ್ದಲ್ಲ; ಬದಲಾಗಿ ಇದಕ್ಕೂ ಮುನ್ನ  ನವೆಂಬರ್ 2015 ರಲ್ಲಿ ನಡೆಸಲಾಗಿದೆ.