ಬಾಂಗ್ಲಾದೇಶದಲ್ಲಿ ಹಿಂದೂ ದೇವತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ವರದಿಗಳ ನಡುವೆ (ಇಲ್ಲಿ ಮತ್ತು ಇಲ್ಲಿ) ಅವರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ಸೇರಿದಂತೆ, ಜನರು ಕಾಳಿ ದೇವಿಯ ವಿಗ್ರಹದ ತಲೆಯನ್ನು ತೆಗೆದಿರುವ ವೀಡಿಯೊವನ್ನು (ಇಲ್ಲಿ) ಸಾಮಾಜಿಕವಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ದೇವಿಯ ವಿಗ್ರಹವನ್ನು ಧ್ವಂಸಗೊಳಿಸುವುದನ್ನು ಇದು ಚಿತ್ರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬಾಂಗ್ಲಾದೇಶದಲ್ಲಿ ಮುಸ್ಲಿಮರು ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ.

ಫ್ಯಾಕ್ಟ್: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿರುವ ಸುಲ್ತಾನ್‌ಪುರ ಗ್ರಾಮದ ಕಾಳಿ ದೇವಸ್ಥಾನದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಇದು 26 ನವೆಂಬರ್ 2024 ರಂದು ನಡೆದ ಕಾಳಿ ದೇವಿಯ ವಿಗ್ರಹವನ್ನು ವಿಸರ್ಜಿಸುವುದಕ್ಕೆ ಭಕ್ತರು ಮುಂದಾಗಿರುವುದನ್ನು ತೋರಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ವೈರಲ್ ವೀಡಿಯೊದ ರಿವೆರ್ಸೆ ಇಮೇಜ್  ಹುಡುಕಾಟವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅದೇ ವೀಡಿಯೊದ ವಿಸ್ತೃತ ಮತ್ತು ಹಿಂದಿನ ಅಪ್‌ಲೋಡ್‌ಗಳಿಗೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಕಾರಣವಾಯಿತು. ಇದು ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ಸುಲ್ತಾನಪುರ ಗ್ರಾಮದ ಕಾಳಿ ದೇವಸ್ಥಾನದಲ್ಲಿ ಕಾಳಿ ದೇವಿಯ ವಿಗ್ರಹವನ್ನು ವಿಸರ್ಜಿಸುವ ಪ್ರಕ್ರಿಯೆಯನ್ನು ತೋರಿಸುತ್ತದೆ ಎಂದು ಉಲ್ಲೇಖಿಸುತ್ತದೆ. ಈವೆಂಟ್ ಆಯೋಜಕರಾದ ಸುಲ್ತಾನ್‌ಪುರ ಕಿರಣ್ಮೋಯಿ ಲೈಬ್ರರಿಯು ಈವೆಂಟ್‌ನ ದೃಶ್ಯಗಳನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದೆ.

ಇದರಿಂದ ಕ್ಲೂ ಆಗಿ ತೆಗೆದುಕೊಂಡು, ನಾವು ಹೆಚ್ಚಿನ ಹುಡುಕಾಟಗಳನ್ನು ನಡೆಸಿದ್ದೇವೆ. ಹಾಗೂ ಈವೆಂಟ್ ಅನ್ನು ಒಳಗೊಂಡಿರುವ ಸ್ಥಳೀಯ ಮಾಧ್ಯಮ ವರದಿಗಳನ್ನು (ಇಲ್ಲಿ ಮತ್ತು ಇಲ್ಲಿ) ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಇದು ಮೊಂಡಲ್ ಕುಟುಂಬದಿಂದ ಆಯೋಜಿಸಲಾದ ಪುರಾತನ ಆಚರಣೆಯಾಗಿದ್ದು, ಈ ದೇವಾಲಯದಲ್ಲಿ ಕಾಳಿ ದೇವಿಯ ವಿಗ್ರಹವನ್ನು ನಿಯಮಿತವಾಗಿ ಪೂಜಿಸಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ವಿಗ್ರಹವನ್ನು ವಿಸರ್ಜಿಸಲಾಗುತ್ತದೆ ತದನಂತರ ಹೊಸ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. 26 ನವೆಂಬರ್ 2024 ರಂದು, ಈ ವಿಗ್ರಹವನ್ನು ಹತ್ತಿರದ ಕೊಳದಲ್ಲಿ ವಿಸರ್ಜಿಸಲಾಯಿತು. 

ಇದಲ್ಲದೆ, ಕಾಳಿ ದೇವಾಲಯದ ಫೇಸ್‌ಬುಕ್ ವೀಡಿಯೊಗಳ ದೃಶ್ಯಗಳನ್ನು ಗೂಗಲ್ ಸ್ಟ್ರೀಟ್ ವ್ಯೂನೊಂದಿಗೆ ಹೋಲಿಸಿದಾಗ ದೇವಾಲಯವು ಪಶ್ಚಿಮ ಬಂಗಾಳದ ಸುಲ್ತಾನ್‌ಪುರದಲ್ಲಿದೆ ಮತ್ತು ಬಾಂಗ್ಲಾದೇಶದಲ್ಲಿಲ್ಲ ಎಂದು ದೃಢಪಡಿಸಿದೆ. 

ಹೆಚ್ಚಿಗೆಯಾಗಿ, ಸುಲ್ತಾನಪುರ ಕಾಳಿ ಪೂಜಾ ಸಮಿತಿಯ ಸಂಘಟನಾ ಸಂಸ್ಥೆಯ ಸದಸ್ಯ ದೇಬಾಶಿಶ್ ಮೊಂಡಲ್ ಅವರನ್ನು ನಾವು ಸಂಪರ್ಕಿಸಿದೆವು. 26 ನವೆಂಬರ್ 2024 ರಂದು ಸುಲ್ತಾನ್‌ಪುರ ಗ್ರಾಮದ ಕಾಳಿ ದೇವಸ್ಥಾನದಲ್ಲಿ ನಡೆದ ವಿಸರ್ಜನಾ  ಸಮಾರಂಭದಲ್ಲಿ ವೀಡಿಯೊವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಿಗ್ರಹದ ಗಾತ್ರ ಮತ್ತು ತೂಕವು ಒಂದೇ ತುಂಡಾಗಿ ವಿಸರ್ಜಿಸುವುದನ್ನು ತಡೆಯುತ್ತದೆ, ಅದಕ್ಕಾಗಿಯೇ ಅದನ್ನು ವಿಸರ್ಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಇದರ ಜೊತೆಗೆ ಈ ವಿಡಿಯೋದಲ್ಲಿ ಯಾವುದೇ ಕೋಮುವಾದದ ಆಯಾಮವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೊನೆಯದಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ ಎಂದು  ಹೇಳಿಕೊಂಡು ಪಶ್ಚಿಮ ಬಂಗಾಳದ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.