ಗುಜರಾತ್ ಸೋಮನಾಥ ದೇವಾಲಯದ ದೃಶ್ಯಗಳನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಪುನರ್ನಿರ್ಮಾಣದ ನಂತರದ ವಿಡಿಯೊ ಎಂದು ಹಂಚಿಕೊಳ್ಳಲಾಗುತ್ತಿದೆ

ಕಾಶಿ ಶ್ರೀ ವಿಶ್ವನಾಥ ದೇವಸ್ಥಾನ ಪುನರ್ನಿರ್ಮಾಣದ ನಂತರದ ಮೊದಲ ದೃಶ್ಯಗಳು ಎಂದು ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಆ ವಿಡಿಯೋ ಎಷ್ಟು ಸತ್ಯ ಎಂಬುದನ್ನು ಈ ಲೇಖನದಲ್ಲಿ ಪರಿಶೀಲಿಸೋಣ

ಪ್ರತಿಪಾದನೆ: ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಪುನರ್ ನಿರ್ಮಾಣದ ನಂತರ ತೆಗೆದ ವಿಡಿಯೋ.

ನಿಜಾಂಶ: ಈ ವಿಡಿಯೋದಲ್ಲಿ ಕಾಣುತ್ತಿರುವುದು ಗುಜರಾತ್ ರಾಜ್ಯದ ಸೋಮನಾಥ ದೇವಾಲಯ. ವಾರಣಾಸಿಯ ಶ್ರೀ ಕಾಶಿ ವಿಶ್ವನಾಥ ದೇವಾಲಯವಲ್ಲ. ಈ ವಿಡಿಯೊವನ್ನು ಮಾರ್ಚ್ 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದ ಸ್ಕ್ರೀನ್ ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟವುದಲ್ಲಿ ‘ಭಾರತ್‌ಮೋತಿವಾರಸ್’ ಎಂಬ Instagram ಬಳಕೆದಾರರು 11 ಮಾರ್ಚ್ 2021 ರಂದು ಇದೇ ರೀತಿಯ ದೃಶ್ಯಗಳಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ ಎಂಬುದು ಕಂಡುಬಂದಿದೆ. ಈ ವಿಡಿಯೋದಲ್ಲಿ ಕಾಣುತ್ತಿರುವುದು ಸೋಮನಾಥ ದೇವಾಲಯ ಎಂದು ಈ ಬಳಕೆದಾರರ ವಿವರಣೆ ಸ್ಪಷ್ಟವಾಗಿ ಹೇಳುತ್ತದೆ.

ಈ ವೀಡಿಯೊದಲ್ಲಿ ಕಂಡುಬರುವ ಅದೇ ದೇವಾಲಯದ ಫೋಟೋವನ್ನು ಟೈಮ್ಸ್ ಆಫ್ ಇಂಡಿಯಾ 11 ನವೆಂಬರ್ 2021 ರಂದು ಪ್ರಕಟಿಸಿದ ಲೇಖನದಲ್ಲಿ ಹಂಚಿಕೊಂಡಿದೆ. ಈ ಫೋಟೋದಲ್ಲಿ ಗುಜರಾತ್ ರಾಜ್ಯದ ಶ್ರೀ ಸೋಮನಾಥ ಮಂದಿರವನ್ನು ನೋಡಬಹುದು ಎಂದು ಈ ಲೇಖನದಲ್ಲಿ ವರದಿಯಾಗಿದೆ. ಪೋಸ್ಟ್‌ನಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಶ್ರೀ ಸೋಮನಾಥ ಮಂದಿರದಲ್ಲಿ ದೀಪಾವಳಿ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ದೇವಾಲಯದ ಸಂಸ್ಥೆ ಹಂಚಿಕೊಂಡ ವಿಡಿಯೊದಲ್ಲಿಯೂ ನೋಡಬಹುದು.

ಶ್ರೀ ಕಾಶಿ ವಿಶ್ವನಾಥ ಕಾರಿಡಾರ್‌ನ ಪುನರ್ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಕಟವಾದ ಸುದ್ದಿ ಲೇಖನಗಳು ಮತ್ತು ವೀಡಿಯೊಗಳನ್ನು ನೀವು ಇಲ್ಲಿ ಕಾಣಬಹುದು. ಶ್ರೀ ಕಾಶಿ ವಿಶ್ವನಾಥ ಕಾರಿಡಾರ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು 2021 ರ ಡಿಸೆಂಬರ್ 13 ರಂದು ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ.

ಒಟ್ಟಾರೆ ಗುಜರಾತಿನ ಸೋಮನಾಥ ದೇವಾಲಯದ ದೃಶ್ಯಗಳನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಪುನರ್ ನಿರ್ಮಾಣ ಕಾರ್ಯದ ನಂತರ ತೆಗೆದ ದೃಶ್ಯಗಳು ಎಂದು ಹಂಚಿಕೊಳ್ಳಲಾಗುತ್ತಿದೆ.