ಮುಂಬೈನ ಸಿದ್ಧಿವಿನಾಯಕ ದೇವಾಲಯದ ಭೂಮಿಯಲ್ಲಿ ವಕ್ಫ್ ಮಂಡಳಿಯು ಕಬಳಿಸಿದೆ ಎನ್ನುವ ಪೋಸ್ಟ್ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 2024 ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಂಚಿಕೆ ಮಾಡಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಮುಂಬೈನ ಸಿದ್ಧಿವಿನಾಯಕ ದೇವಾಲಯದ ಭೂಮಿ ನಮ್ಮದು – ವಕ್ಫ್ ಮಂಡಳಿ
ಫ್ಯಾಕ್ಟ್: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ಇರುವ ಭೂಮಿಯಲ್ಲಿ ವಕ್ಫ್ ಬೋರ್ಡು ಕಬಳಿಸಿದೆ ಎಂದು ಹೇಳುತ್ತಿರುವ ಮಾತು ನಿಜವಿಲ್ಲ. ಇದು ಫೆಕ್ ಸುದ್ದಿ. ದೇವಸ್ಥಾನದ ಕೋಶಾಧಿಕಾರಿ ಪವನ್ ಕುಮಾರ್ ತ್ರಿಪಾಠಿ, ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಪಾಟಿಲ್ ಇದನ್ನುಖಂಡಿಸಿದ್ದಾರೆ. ಜೊತೆಗೆ, ಮರಾಠಿ ದಿನಪತ್ರಿಕೆ ಸಕಲ್ ಇನ್ಸ್ಟಾಗ್ರಾಮ್‌ನಲ್ಲಿ ಅವರಿಗೆ ಆಪಾದಿಸಲಾದ ಗ್ರಾಫಿಕ್ ನಕಲಿ ಎಂದು, ಅವರು ಅಂತಹ ಕಥೆಯನ್ನು ಪ್ರಕಟಿಸಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ಹುಡುಕಿದಾಗ, ಈ ಕ್ಲೇಮ್ ಅನ್ನು ಪರಿಶೀಲಿಸಲು ನಮಗೆ ಯಾವುದೇ ನ್ಯೂಸ್ ಆರ್ಟಿಕಲ್ಸ್ ಅಥವಾ ಅಫೀಷಿಯಲ್ ದಾಖಲೆಗಳು ಕಂಡುಬಂದಿಲ್ಲ.
ಗೂಗಲ್ ನಲ್ಲಿ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಡಿದಾಗ, 18 ನವೆಂಬರ್ 2024 ರಂದು X ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಕಂಡುಬಂದಿದೆ (ಆರ್ಕೈವ್ ಲಿಂಕ್). ಸಿದ್ಧಿವಿನಾಯಕ ದೇವಸ್ಥಾನದ ಖಜಾಂಚಿ ಪವನ್ ಕುಮಾರ್ ತ್ರಿಪಾಠಿ ಅವರ ವಿಡಿಯೋ ಇದೆ. ಆ ವೀಡಿಯೋದಲ್ಲಿ, ಯಾವುದೇ ದೇವಸ್ಥಾನವನ್ನು ಮಂಡಳಿಯು ಕ್ಲೈಮ್ ಮಾಡಿಲ್ಲ, ಅದು ಹಿಂದೂಗಳಿಗೆ ಸೇರಿದ್ದು ಮತ್ತು ಅವರ ಮಾಲೀಕತ್ವದಲ್ಲಿ ಉಳಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾವು ಪವನ್ ಕುಮಾರ್ ತ್ರಿಪಾಠಿ ಅವರನ್ನು ಸಂಪರ್ಕಿಸಿದಾಗ, ಅವರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕ್ಲೇಮ್ ಸುಳ್ಳಾಗಿದ್ದು, ಅವರಿಗೆ ಯಾವುದೇ ಅಧಿಕೃತ ಸೂಚನೆಗಳು ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ನಾವು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಪಾಟೀಲ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ಸಹ ಈ ಕ್ಲೇಮ್ ಅನ್ನು ನಿರಾಕರಿಸಿ, ಪವನ್ ಕುಮಾರ್ ತ್ರಿಪಾಠಿಯ ವೀಡಿಯೊವನ್ನು ನಮ್ಮೊಂದಿಗೆ ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಕ್ಲೇಮ್ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಸಂಶೋಧನೆಯಲ್ಲಿ, ಮರಾಠಿ ದೈನಿಕ ಸಕಲ್ (ಆರ್ಕೈವ್ ಲಿಂಕ್) ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನಾವು ಪೋಸ್ಟ್ ಅನ್ನು ಕಂಡುಕೊಂಡಿದ್ದೇವೆ. ಅಲ್ಲಿ ನೀಡಲಾದ ಗ್ರಾಫಿಕ್ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ಸಿದ್ಧಿವಿನಾಯಕ ದೇವಸ್ಥಾನದ ಮಾಲೀಕತ್ವವನ್ನು ವಕ್ಫ್ ಬೋರ್ಡ್ ಕುರಿತು ತಾವು ಯಾವುದೇ ಲೇಖನವನ್ನು ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.
ವೈರಲ್ ಪೋಸ್ಟ್‌ನಲ್ಲಿ Creately.in, Creately Media ವಾಟರ್‌ಮಾರ್ಕ್‌ಗಳನ್ನು ನಾವು ಗಮನಿಸಿದ್ದೇವೆ. ಇವುಗಳನ್ನು ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಹುಡುಕಿದಾಗ, ಈ ಪೇಜ್ಗಳು ಸಾಮಾನ್ಯವಾಗಿ ಆಧಾರರಹಿತವಾದ ಕ್ಲೇಮ್ಗಳನ್ನು ಪೋಸ್ಟ್ ಮಾಡುವುದನ್ನು ನಾವು ಕಂಡುಕೊಂಡಿದ್ದೇವೆ. ಗೇಟ್‌ವೇ ಆಫ್ ಇಂಡಿಯಾ, ತಾಜ್ ಹೋಟೆಲ್ ಮತ್ತು ಪುಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಮಾಲೀಕತ್ವವನ್ನು ವಕ್ಫ್ ಮಂಡಳಿಯು ಕ್ಲೇಮ್ ಸಾಧಿಸಿದ ಮೂರು ಇತರ ಗ್ರಾಫಿಕ್ಸ್ ಅನ್ನು ಸಹ ರಚಿಸಲಾಗಿದೆ. ಈ ಗ್ರಾಫಿಕ್ಸ್‌ಗೆ ಯಾವುದೇ ಮೂಲವನ್ನು ಉಲ್ಲೇಖಿಸಲಾಗಿಲ್ಲ.
ಈ ಕ್ಲೇಮ್ ಕುರಿತು ಪರಿಶೀಲಿಸಿದಾಗ, 19 ನವೆಂಬರ್ 2024 ರಂದು X ಪ್ಲಾಟ್‌ಫಾರ್ಮ್‌ನಲ್ಲಿ (ಆರ್ಕೈವ್ ಲಿಂಕ್) ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ (UBT) ಅವರ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಅದು ವೈರಲ್ ಕ್ಲೈಮ್ಸ್ ನಕಲಿ ಎಂದು ಸ್ಪಷ್ಟಪಡಿಸಿದೆ. ಆ ಪೋಸ್ಟ್‌ನಲ್ಲಿ, ನಕಲಿ ಸುದ್ದಿಗಳ ಬಗ್ಗೆ ಎಚ್ಚರದಿಂದಿರಿ ಎಂದು X ಜನರನ್ನು ಕೇಳಿಕೊಂಡಿದ್ದಾರೆ.
ಕೊನೆಯದಾಗಿ ಹೇಳುವುದಾದರೆ, ಮುಂಬೈನಲ್ಲಿ ಸಿದ್ಧಿವಿನಾಯಕ ದೇವಸ್ಥಾನ ಇರುವ ಜಾಗ ನಮ್ಮದು ಎಂದು ವಕ್ಫ್ ಬೋರ್ಡ್ ಹೇಳಿಲ್ಲ, ಇದು ಸುಳ್ಳು ಸುದ್ದಿ.