ಭಾರತದಲ್ಲಿ ವಕ್ಫ್ ಮಂಡಳಿಗಳ ಒಡೆತನದ ಆಸ್ತಿಯೂ ಪಾಕಿಸ್ತಾನದ ಭೂಪ್ರದೇಶಕ್ಕಿಂತ (ಇಲ್ಲಿ) ದೊಡ್ಡದಾಗಿದೆ ಎನ್ನುವ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಪಾಕಿಸ್ತಾನದ ವಿಸ್ತೀರ್ಣ 8.81 ಲಕ್ಷ ಚದರ ಕಿಮೀ, ಆದರೆ ವಕ್ಫ್ ಬೋರ್ಡ್ ಆಸ್ತಿಗಳ ವಿಸ್ತೀರ್ಣ 9.40 ಲಕ್ಷ ಚದರ ಕಿಮೀ ಎಂದು ಹೇಳಲಾಗಿದೆ. ಒಂದು ಪಾಕಿಸ್ತಾನವನ್ನು ಹೊರಗೆ ರಚಿಸಲಾಗಿದೆ, ಒಂದು ಒಳಗೆ ರಚಿಸಲಾಗಿದೆ. ಹೀಗೆ ನಿದ್ರಿಸುತ್ತಿರಿ; ಇದು ಕಾಂಗ್ರೆಸ್‌ನ ಅದ್ಭುತ ಕೆಲಸ” ಎಂದು ಪೋಸ್ಟ್‌ನಲ್ಲಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಭಾರತದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ಒಟ್ಟು ವಿಸ್ತೀರ್ಣ 9.40 ಲಕ್ಷ ಚ.ಕಿ.ಮೀ. ಇದು ಪಾಕಿಸ್ತಾನದ ಒಟ್ಟು ವಿಸ್ತೀರ್ಣ 8.81 ಲಕ್ಷ ಚ.ಕಿ.ಮೀಗಿಂತ ದೊಡ್ಡದಾಗಿದೆ.
ಫ್ಯಾಕ್ಟ್: ಸರ್ಕಾರ ಬಿಡುಗಡೆ ಮಾಡಿದ ಅಧಿಕೃತ ಮಾಹಿತಿಯ ಪ್ರಕಾರ, ಭಾರತದಲ್ಲಿ ವಕ್ಫ್ ಬೋರ್ಡ್‌ಗಳ ಒಡೆತನದ ಒಟ್ಟು ಭೂಮಿ 9.4 ಲಕ್ಷ ಎಕರೆ, ವೈರಲ್ ಕ್ಲೈಮ್‌ನಲ್ಲಿ ಉಲ್ಲೇಖಿಸಿರುವಂತೆ 9.40 ಲಕ್ಷ ಚದರ ಕಿ.ಮೀ ಅಲ್ಲ. 9.4 ಲಕ್ಷ ಎಕರೆಗಳು ಅಂದರೆ ಸರಿಸುಮಾರು 3,804 ಚ.ಕಿ.ಮೀ. ಪಾಕಿಸ್ತಾನವು ಭಾರತದ ಭೂಪ್ರದೇಶವನ್ನು ತನ್ನದೆಂದು ಹೇಳುವುದರಿಂದ ಅದರ ಒಟ್ಟು ಭೂಪ್ರದೇಶದ ನಿಖರವಾದ ಅಂಕಿ ಅಂಶವು ನಿರ್ಣಾಯಕವಾಗಿಲ್ಲ. ಭಾರತದಲ್ಲಿ ವಕ್ಫ್ ಪ್ರದೇಶವು 3,804 ಚದರ ಕಿಲೋಮೀಟರ್ ಆಗಿದ್ದು, ಪಾಕಿಸ್ತಾನದ ಒಟ್ಟು ಭೂಪ್ರದೇಶವು ಭಾರತದಲ್ಲಿ ವಕ್ಫ್ ಒಡೆತನದ ಭೂಮಿಗಿಂತ ದೊಡ್ಡದಾಗಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಭಾರತದಲ್ಲಿನ ವಕ್ಫ್ ಆಸ್ತಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲು ನಾವು ಗೂಗಲ್ ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ನಮ್ಮನ್ನು 13 ಸೆಪ್ಟೆಂಬರ್ 2024 ರಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ನ ಅಫೀಷಿಯಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಕ್ಫ್ ತಿದ್ದುಪಡಿ ಮಸೂದೆ 2024 (ಆರ್ಕೈವ್ ಮಾಡಿದ ಲಿಂಕ್)ನ್ನು ಸೂಚಿಸಿತು. FAQ ವಿಭಾಗ 6 ರಲ್ಲಿ ವಿವರಿಸಿದ ಪ್ರಕಾರ, “ಭಾರತದಾದ್ಯಂತ ವಕ್ಫ್ ಬೋರ್ಡ್‌ಗಳು ಪ್ರಸ್ತುತ 9.4 ಲಕ್ಷ ಎಕರೆಗಳಷ್ಟು ವ್ಯಾಪಿಸಿರುವ 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ಅಂದಾಜು ಮೌಲ್ಯ 1.2 ಲಕ್ಷ ಕೋಟಿ. ಭಾರತವು ವಿಶ್ವದಲ್ಲೇ ಅತಿ ದೊಡ್ಡ ವಕ್ಫ್ ಹಿಡುವಳಿಗಳನ್ನು ಹೊಂದಿದೆ. ಭಾರತದ ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ ವಕ್ಫ್ ಬೋರ್ಡ್ ಭಾರತದಲ್ಲಿನ ಅತಿದೊಡ್ಡ ಭೂಮಾಲೀಕತ್ವವನ್ನು ಪಡೆದಿದಾಗಿದೆ.’’
ವಕ್ಫ್ ಮಂಡಳಿಗಳು ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವ್ಯಾಪಿಸಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತವೆ ಎಂಬ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಮಾಹಿತಿಯಿಂದ ಭಾರತದಲ್ಲಿ ವಕ್ಫ್ ಒಡೆತನದ ಒಟ್ಟು ಜಮೀನು 9.4 ಲಕ್ಷ ಎಕರೆಯಾಗಿದ್ದು, ವೈರಲ್ ಕ್ಲೇಮ್ ನಲ್ಲಿ ಉಲ್ಲೇಖಿಸಿದಾಗೆ 9.40 ಲಕ್ಷ ಚದರ ಕಿ.ಮೀ ಅಲ್ಲ ಎಂಬುದು ಸ್ಪಷ್ಟವಾಗಿದೆ.
ನಂತರ ನಾವು 9.4 ಲಕ್ಷ ಎಕರೆಗಳನ್ನು ಚದರ ಕಿಲೋಮೀಟರ್ ಅನ್ನು 9.4 ಲಕ್ಷ ಎಕರೆ ಆಸ್ತಿಗೆ ಕನ್ವರ್ಟ್ ಮಾಡಿದಾಗ ಅದರ ಒಟ್ಟು ಸರಿಸುಮಾರು 3,804 ಚದರ ಕಿಲೋಮೀಟರ್‌ಗಳಿಗೆ ಸಮಾನ ಎಂದು ಕಂಡುಕೊಂಡಿದ್ದೇವೆ.
ನಾವು ಗೂಗಲ್ ನಲ್ಲಿ ಪಾಕಿಸ್ತಾನದ ಒಟ್ಟು ಭೂಪ್ರದೇಶವನ್ನು ಕಂಡುಹಿಡಿಯಲು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಲಾಸ್ ಏಂಜಲೀಸ್‌ನಲ್ಲಿರುವ ಪಾಕಿಸ್ತಾನದ ಕಾನ್ಸುಲೇಟ್ ಜನರಲ್‌ನ ಅಫೀಷಿಯಲ್ ವೆಬ್‌ಸೈಟ್ ಪ್ರಕಾರ, ಪಾಕಿಸ್ತಾನದ ಒಟ್ಟು ಭೂಪ್ರದೇಶವು ಸುಮಾರು 8,81,913 ಚದರ ಕಿಲೋಮೀಟರ್ ಎಂದು ತಿಳಿದುಬಂದಿದೆ. ಸ್ವೀಡನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಅಫೀಷಿಯಲ್ ವೆಬ್‌ಸೈಟ್ ಪ್ರಕಾರ, ಪಾಕಿಸ್ತಾನದ ಒಟ್ಟು ಭೂಪ್ರದೇಶವು ಸುಮಾರು 7,96,095 ಚದರ ಕಿಲೋಮೀಟರ್. ಹಾಹಾಗಿ ಪಾಕಿಸ್ತಾನದ ಒಟ್ಟು ಭೂಪ್ರದೇಶದ ಅಂಕಿ ಅಂಶವು ನಿಖರವಾಗಿಲ್ಲ, ಏಕೆಂದರೆ ಪಾಕಿಸ್ತಾನವು ಭಾರತದ ಭೂಪ್ರದೇಶವನ್ನು ತನ್ನದೆಂದು ಹೇಳಿಕೊಂಡಿದೆ. ಭಾರತದಲ್ಲಿ ವಕ್ಫ್ ಪ್ರದೇಶವು 3,804 ಚದರ ಕಿಲೋಮೀಟರ್ ಆಗಿದ್ದು, ಇದು ಪಾಕಿಸ್ತಾನದ ಒಟ್ಟು ಭೂಪ್ರದೇಶಕ್ಕಿಂತ ದೊಡ್ಡದಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
08 ಆಗಸ್ಟ್ 2024 ರಂದು, ವಕ್ಫ್ (ತಿದ್ದುಪಡಿ) ಮಸೂದೆ 2024, ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ 2024, ವಕ್ಫ್ ಮಂಡಳಿಯ ಕಾರ್ಯಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವ ಮತ್ತು ವಕ್ಫ್‌ನ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಲಾಯಿತು. ಗಂಭೀರ ಚರ್ಚೆಯ ನಂತರ, ಸದನವು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಉಲ್ಲೇಖಿಸಿತು. 31 ಸದಸ್ಯರ ಜೆಪಿಸಿಯನ್ನು ಸ್ಥಾಪಿಸಲಾಯಿತು. ಇದರಲ್ಲಿ ಹಿರಿಯ ಬಿಜೆಪಿ ಲೋಕಸಭಾ ಸದಸ್ಯ ಜಗದಾಂಬಿಕಾ ಪಾಲ್ ಅವರನ್ನು ಜೆಪಿಸಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಇದು ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಶೀಲಿಸುತ್ತದೆ. ವರದಿಗಳ ಪ್ರಕಾರ, ಜೆಪಿಸಿ ಮಂಡಿಸಲು ಯೋಜಿಸಿದ ಪ್ರಕಾರ 25 ನವೆಂಬರ್ 2024 ರಿಂದ 20 ಡಿಸೆಂಬರ್ 2024 ರ ವರೆಗೆ ನಡೆಯುವ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರದ ಅಂತ್ಯದ ವೇಳೆಗೆ ಸದನಕ್ಕೆ ಮಸೂದೆಯ ಕುರಿತು ಅದರ ವರದಿಯನ್ನುನೀಡಬೇಕು. ವಕ್ಫ್ ತಿದ್ದುಪಡಿ ಮಸೂದೆ, 2024 ರ ಜಂಟಿ ಸಂಸದೀಯ ಸಮಿತಿಯು 22 ಆಗಸ್ಟ್ 2024 ರಂದು ತನ್ನ ಮೊದಲ ಅಧಿವೇಶನದಿಂದ 25 ಸಭೆಗಳನ್ನು ನಡೆಸಿದೆ. ನವೆಂಬರ್ 2024 ರಲ್ಲಿ ಐದು ನಗರಗಳಲ್ಲಿ-ಗುವಾಹಟಿ, ಭುವನೇಶ್ವರ, ಕೋಲ್ಕತ್ತಾ, ಪಾಟ್ನಾ, ಮತ್ತು ಲಕ್ನೋದಲ್ಲಿ ಬಿಲ್ ಅನ್ನು ಪರಿಶೀಲಿಸಲು JPC 09 ನವೆಂಬರ್ 2024 ರಿಂದ 14 ರವರೆಗೆ ಅಧ್ಯಯನ ಪ್ರವಾಸವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ, ವಿರೋಧ ಪಕ್ಷದ ಸಂಸದರ (ಇಲ್ಲಿ) ಬೇಡಿಕೆಯಿಂದಾಗಿ ಪ್ರವಾಸವನ್ನು ಮುಂದೂಡಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿ ವಕ್ಫ್ ಒಡೆತನದ ಒಟ್ಟು ಭೂಮಿ 9.4 ಲಕ್ಷ ಎಕರೆ ಅಂದರೆ ಸುಮಾರು 3,804 ಚದರ ಕಿಲೋಮೀಟರ್ ಆಗಿದ್ದು, ಇದು ಪಾಕಿಸ್ತಾನದ ಒಟ್ಟು ವಿಸ್ತೀರ್ಣವನ್ನು ಮೀರಿದೆ ಎಂಬ ವೈರಲ್ ಹೇಳಿಕೆ ಸುಳ್ಳು.