ಅಗ್ನಿಗಾಹುತಿಯಾದ ಕಟ್ಟಡಗಳ ಮೂರು ವಿಭಿನ್ನ ಕ್ಲಿಪ್‌ಗಳನ್ನು ಒಳಗೊಂಡಿರುವ ಒಂದು ವಿಡಿಯೋ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ದುರ್ಗಾ ವಿಸರ್ಜನಾ ಮೆರವಣಿಗೆಯ ಮೇಲಿನ ದಾಳಿಯ ನಂತರ ನೇಪಾಳ ಸರ್ಕಾರವು ಕೆಡವಿದ ‘ಅಕ್ರಮ ಇಸ್ಲಾಮಿಸ್ಟ್ ಕಟ್ಟಡಗಳನ್ನು’ ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ‘ಪ್ರತ್ಯೇಕ ಘಟನೆಯಲ್ಲಿ, ಕೋಪಗೊಂಡ Gen Z ಯುವಕರು ಸೇಡು ತೀರಿಸಿಕೊಳ್ಳಲು ಒಂದು ಮಸೀದಿಗೆ ಬೆಂಕಿ ಹಚ್ಚಿದ್ದಾರೆ’ ಎಂದೂ ಹೇಳಲಾಗುತ್ತಿದೆ.
ಈ ವರ್ಷದ ದುರ್ಗಾ ವಿಸರ್ಜನೆ (ಅಕ್ಟೋಬರ್ 2025) ಸಂದರ್ಭದಲ್ಲಿ, ನೇಪಾಳದ ಮಧೇಶ್ ಪ್ರಾಂತ್ಯದ ಜನಕ್ಪುರದಲ್ಲಿ ದುರ್ಗಾ ವಿಸರ್ಜನಾ ಮೆರವಣಿಗೆಯ ಮೇಲೆ ಜನರು ಕಲ್ಲು ಮತ್ತು ಬಾಟಲಿಗಳನ್ನು ಎಸೆದ ಸಂದರ್ಭದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಅಕ್ಟೋಬರ್ 2025 ರ ಆರಂಭದ ವರದಿಗಳ ಪ್ರಕಾರ, ಇದು ತೆಲಿಯಾ ತಲಾಬ್ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಯಿತು (ಇಲ್ಲಿ). ಈ ಲೇಖನದ ಮೂಲಕ ನಾವು ಈ ಕ್ಲೇಮ್ ನ ಸತ್ಯಾಂಶವನ್ನು ಪರಿಶೀಲಿಸುತ್ತೇವೆ.
ಕ್ಲೇಮ್: ಅಕ್ಟೋಬರ್ 2025 ರಲ್ಲಿ ದುರ್ಗಾ ವಿಸರ್ಜನಾ ಮೆರವಣಿಗೆಯ ಮೇಲಿನ ದಾಳಿಯ ನಂತರ, ನೇಪಾಳದ ಜನಕ್ಪುರದಲ್ಲಿ ನಡೆದ ಕೋಮು ಗಲಭೆಗಳ ನಂತರ ನೇಪಾಳ ಸರ್ಕಾರವು ಕೆಡವಿದ ಅಕ್ರಮ ಇಸ್ಲಾಮಿಸ್ಟ್ ಕಟ್ಟಡಗಳನ್ನು ವೈರಲ್ ವಿಡಿಯೋ ತೋರಿಸುತ್ತದೆ. ದಾಳಿಗೆ ಪ್ರತೀಕಾರವಾಗಿ Gen Z ಯುವಕರು ಒಂದು ಮಸೀದಿಗೆ ಬೆಂಕಿ ಹಚ್ಚಿರುವುದನ್ನೂ ಇದು ತೋರಿಸುತ್ತದೆ.
ಫ್ಯಾಕ್ಟ್: ಈ ವೈರಲ್ ವಿಡಿಯೋವು ಅಕ್ಟೋಬರ್ 2025 ರಲ್ಲಿ ನಡೆದ ಜನಕ್ಪುರ ಕಲ್ಲು ತೂರಾಟದ ಘಟನೆಗಿಂತ ಬಹಳ ಹಿಂದೆಯೇ, ಅಂದರೆ ಸೆಪ್ಟೆಂಬರ್ 10, 2025 ರಿಂದ ಇಂಟರ್ನೆಟ್ನಲ್ಲಿ ಲಭ್ಯವಿದೆ. ವಿಡಿಯೋ ಕ್ಲಿಪ್‌ಗಳು ಬಿರ್‌ಗಂಜ್ ಮೇಯರ್ ಅವರ ಮನೆ ಮತ್ತು ಬಿರ್‌ಗಂಜ್ ಮೆಟ್ರೋಪಾಲಿಟನ್ ಸಿಟಿ ಕಚೇರಿ ಕಟ್ಟಡದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ತೋರಿಸುತ್ತವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಸುಳ್ಳು.
ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಜನಕ್ಪುರದಲ್ಲಿ ದುರ್ಗಾ ವಿಸರ್ಜನಾ ಆಚರಣೆಗಳ ನಂತರ ನೇಪಾಳ ಸರ್ಕಾರವು ಅಕ್ರಮ ಇಸ್ಲಾಮಿಸ್ಟ್ ಕಟ್ಟಡಗಳನ್ನು ಕೆಡವಿದೆಯೇ ಎಂದು ತಿಳಿಯಲು ನಾವು ಇಂಟರ್ನೆಟ್ ಕೀವರ್ಡ್ ಸರ್ಚ್ ಅನ್ನು ನಡೆಸಿದೆವು. ಆದರೆ, ಈ ಕ್ಲೈಮ್ನ್ನು ಬೆಂಬಲಿಸುವ ಯಾವುದೇ ಸಂಬಂಧಿತ ಸುದ್ದಿ ವರದಿಗಳು ನಮಗೆ ಕಂಡುಬರಲಿಲ್ಲ. ಬದಲಿಗೆ, ಕಲ್ಲು ತೂರಾಟದ ಘಟನೆಯ ನಂತರ ನಡೆದ ಎರಡೂ ಸಮುದಾಯಗಳ ನಡುವಿನ ಘರ್ಷಣೆಗಳು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕೈಗೊಂಡ ಕ್ರಮಗಳ ಕುರಿತಾದ ವರದಿಗಳು ಮಾತ್ರ ಲಭ್ಯವಿವೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಇದರ ಹೊರತಾಗಿ, ಪ್ರತೀಕಾರವಾಗಿ Gen-Z ಮಸೀದಿಯನ್ನು ಸುಟ್ಟಿರುವ ಬಗ್ಗೆ ಸಂಬಂಧಿಸಿದ ಸುದ್ದಿ ವರದಿಗಳಿಗಾಗಿ ನಾವು ಹುಡುಕಿದೆವು, ಅದರಿಂದಲೂ ಯಾವುದೇ ಸಂಬಂಧಿತ ಮಾಹಿತಿ ಸಿಗಲಿಲ್ಲ.
ವೈರಲ್ ಕ್ಲೈಮ್ ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು, ನಾವು ವೈರಲ್ ವಿಡಿಯೋದಿಂದ ಕೆಲವು ಪ್ರಮುಖ ಫ್ರೇಮ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಅನ್ನು ಉಪಯೋಗಿಸಿದ್ದೇನೆ. ಈ ಹುಡುಕಾಟವ ನಮ್ಮನ್ನು ಸೆಪ್ಟೆಂಬರ್ 10, 2025 ರ ಟಿಕ್‌ಟಾಕ್ (TikTok) ಪೋಸ್ಟ್‌ಗೆ ಕರೆದೊಯ್ಯಿತು, ಅದು ಇದೇ ವಿಡಿಯೋವನ್ನು ಒಳಗೊಂಡಿತ್ತು. ವೈರಲ್ ವಿಡಿಯೋದಲ್ಲಿ ಕಂಡುಬರುವ ಅದೇ ಕ್ಲಿಪ್‌ಗಳನ್ನು ಹೊಂದಿರುವ ಈ ವಿಡಿಯೋವನ್ನು ‘ಬಿರ್‌ಗಂಜ್ ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ, ಬಿರ್‌ಗಂಜ್ ನಗರ’ ಎಂದು ಅನುವಾದಿಸುವ ನೇಪಾಳಿ ಭಾಷೆಯ ಶೀರ್ಷಿಕೆಯೊಂದಿಗೆ ಸೆಪ್ಟೆಂಬರ್ 10, 2025 ರಂದು ಹಂಚಿಕೊಳ್ಳಲಾಗಿತ್ತು.
ಈ ವಿಷಯವು ನೇಪಾಳದ ಜನಕ್ಪುರದಲ್ಲಿ ಅಕ್ಟೋಬರ್ 2025 ರ ದುರ್ಗಾ ವಿಸರ್ಜನಾ ಕಲ್ಲು ತೂರಾಟ ಮತ್ತು ಘರ್ಷಣೆಯ ಘಟನೆಯಲ್ಲಿ ಚಿತ್ರೀಕರಿಸಲ್ಪಟ್ಟಿದೆ ಎಂಬ ಕ್ಲೈಮ್ನ್ನು ಇದು ಸ್ಪಷ್ಟವಾಗಿ ನಿರಾಕರಿಸುತ್ತದೆ.
ಕ್ಲಿಪ್ 1
ಈ ಕ್ಲಿಪ್‌ನಿಂದ ಕೆಲವು ಪ್ರಮುಖ ಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ವೈರಲ್ ವಿಡಿಯೋದಲ್ಲಿ ಕಂಡುಬರುವ ಅದೇ ಕಟ್ಟಡವನ್ನು ತೋರಿಸುವ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಸೆಪ್ಟೆಂಬರ್ 2025 ರದ್ದು) ನಮಗೆ ದೊರೆತವು (ಇಲ್ಲಿ, ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಈ ಪೋಸ್ಟ್‌ಗಳ ಪ್ರಕಾರ, ಈ ದೃಶ್ಯಗಳು ಸೆಪ್ಟೆಂಬರ್ 2025 ರಲ್ಲಿ ನಡೆದ Gen-Z ಪ್ರತಿಭಟನೆಗಳ ಸಮಯದಲ್ಲಿ ಬಿರ್‌ಗಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಅವರ ಮನೆಯಲ್ಲಿ ನಡೆದ ಬೆಂಕಿ ಹಚ್ಚುವಿಕೆಯನ್ನು ತೋರಿಸುತ್ತವೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ).ಸೆಪ್ಟೆಂಬರ್ 2025 ರಲ್ಲಿ, India Today ಮತ್ತು PTI ವರದಿಗಳು (ಇಲ್ಲಿ ಮತ್ತು ಇಲ್ಲಿ) Gen-Z ಪ್ರತಿಭಟನೆಗಳ ಸಂದರ್ಭದಲ್ಲಿ ರಾಜೇಶ್ ಮನ್ ಸಿಂಗ್ ಅವರ ಮನೆಯಲ್ಲಿ
ನಡೆದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆಯ ಬಗ್ಗೆ ವರದಿ ಮಾಡಿದ್ದವು. ವೈರಲ್ ವಿಡಿಯೋದಲ್ಲಿ ಚಿತ್ರಿಸಲಾದ ಕಟ್ಟಡವು ಈ ವರದಿಗಳಲ್ಲಿ ವಿವರಿಸಲಾದ ಕಟ್ಟಡಕ್ಕೆ ಹೊಂದಿಕೆಯಾಗುತ್ತದೆ.
ಕ್ಲಿಪ್ 2
ರಿವರ್ಸ್ ಇಮೇಜ್ ಸರ್ಚ್ ಮೂಲಕ, ವೈರಲ್ ಕ್ಲಿಪ್‌ನಲ್ಲಿ ಕಂಡುಬಂದ ಅದೇ ಕಟ್ಟಡದ ದೃಶ್ಯಗಳನ್ನು ಹೊಂದಿದ್ದ ‘Nepal Post Daily’ Birgunj ಮಾಡಿದ ಒಂದು ಟಿಕ್‌ಟಾಕ್ ಪೋಸ್ಟ್ ನಮಗೆ ದೊರಕಿತು. ಈ ಪೋಸ್ಟ್‌ನ ಶೀರ್ಷಿಕೆಯ ಪ್ರಕಾರ, ವಿಡಿಯೋ ನೇಪಾಳದ Gen-Z ಪ್ರತಿಭಟನೆಗಳ ಸಮಯದಲ್ಲಿ ಬೆಂಕಿಗೆ ಆಹುತಿಯಾದ ‘Birgunj Mahanagarpalika’ ಕಟ್ಟಡವನ್ನು (ಬಿರ್‌ಗಂಜ್ ಮಹಾನಗರ ಪಾಲಿಕೆ ಕಚೇರಿ ಕಟ್ಟಡ) ತೋರಿಸುತ್ತದೆ. ಅಲ್ಲದೆ, ‘Birgunj sanjal’ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಅದೇ ಕಟ್ಟಡದ ಮತ್ತೊಂದು ವಿಡಿಯೋ ನಮಗೆ ಸಿಕ್ಕಿತು. ಅದರ ವಿವರಣೆಯಲ್ಲಿ ‘Today’s situation after the abuse, fire, and looting done at Birgunj Municipal Office ….’ ಎಂದು ಬರೆಯಲಾಗಿದೆ. ಈ ಎರಡೂ ಪುಟಗಳು ಸ್ಥಳೀಯ ಮಾಧ್ಯಮ ಸಂಸ್ಥೆಗಳಾಗಿವೆ.
ಈ ಪೋಸ್ಟ್‌ಗಳಲ್ಲಿ ನೀಡಲಾದ ಮಾಹಿತಿಯನ್ನು ಪರಿಶೀಲಿಸಲು, ನಾವು Google Maps ನಲ್ಲಿ ಬಿರ್‌ಗಂಜ್ ಮೆಟ್ರೋಪಾಲಿಟನ್ ಸಿಟಿ ಕಚೇರಿ ಕಟ್ಟಡಕ್ಕಾಗಿ ಹುಡುಕಿದೆವು. ಈ ಹುಡುಕಾಟದಲ್ಲಿ ನಮಗೆ, ಆ ವಿಡಿಯೋಗಳು ಮತ್ತು ವೈರಲ್ ವಿಡಿಯೋದಲ್ಲಿ ಕಂಡುಬರುವ ದೃಶ್ಯಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಒಂದು ಫೋಟೋ ಲಭ್ಯವಾಯಿತು.
ಕ್ಲಿಪ್ 3
ರಿವರ್ಸ್ ಇಮೇಜ್ ಸರ್ಚ್ ಮೂಲಕ, Gen-Z ಪ್ರತಿಭಟನಾಕಾರರು ಬೆಂಕಿ ಹಚ್ಚಿದ ಬಿರ್‌ಗಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಅವರ ಮನೆಯ ವಿಡಿಯೋಗಳನ್ನು ಒಳಗೊಂಡಿರುವ ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು (ಇಲ್ಲಿ ಮತ್ತು ಇಲ್ಲಿ) ನಮಗೆ ದೊರೆತವು. ಈ ವಿಡಿಯೋಗಳನ್ನು ವಿಭಿನ್ನ ಕೋನಗಳಿಂದ ಚಿತ್ರೀಕರಿಸಲಾಗಿದೆ.
ಈ ವಿಡಿಯೋಗಳಿಂದ ದೊರೆತ ದೃಶ್ಯಗಳು, ವೈರಲ್ ವಿಡಿಯೋದ ಮೂರನೇ ಕ್ಲಿಪ್ ಸೆಪ್ಟೆಂಬರ್ 2025 ರ Gen-Z ಪ್ರತಿಭಟನೆಗಳ ಸಮಯದಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆಯ ನಂತರದ ರಾಜೇಶ್ ಮನ್ ಸಿಂಗ್ ಅವರ ಮನೆಯ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ದೃಢಪಡಿಸಿವೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ನೇಪಾಳದ ಮಧೇಶ್ ಪ್ರಾಂತ್ಯದಲ್ಲಿ ಅಕ್ಟೋಬರ್ 2025 ರ ಜನಕ್ಪುರ ಕೋಮು ಗಲಭೆಗಳಿಗಿಂತ ಮುಂಚಿನ ವಿಡಿಯೋಗಳನ್ನು, ನೇಪಾಳಿ ಯುವಕರು ಮಸೀದಿಯನ್ನು ಸುಡುತ್ತಿರುವುದಾಗಿ ಮತ್ತು ಅಕ್ರಮ ಇಸ್ಲಾಮಿಕ್ ಕಟ್ಟಡಗಳ ಮೇಲೆ ಸರ್ಕಾರವು ಕ್ರಮ ಕೈಗೊಳ್ಳುತ್ತಿರುವುದಾಗಿ ಬಿಂಬಿಸಿ ಸುಳ್ಳಾಗಿ ಹಂಚಿಕೊಳ್ಳಲಾಗುತ್ತಿದೆ.