ಬಾರಾಮುಲ್ಲಾದ (ಜಮ್ಮು ಮತ್ತು ಕಾಶ್ಮೀರ) ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವ ವಿಡಿಯೋ ಇದು, ಮುಂಬೈನದ್ದಲ್ಲ

ಕೆಲವು ಜನ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುತ್ತಿದ್ದರೆ ಇನ್ನು ಕೆಲವರು ಅಲ್ಲೇ ಪಕ್ಕದಲ್ಲಿ ಹಾಸಿಗೆಗಳ ಮೇಲೆ ಮಲಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದೆ ಈ ಘಟನೆ ಮುಂಬೈನ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ ಎಂದು ಪ್ರತಿಪಾದಿಸಲಾಗಿದೆ. ಪೋಸ್ಟ್ ಪ್ರತಿಪಾಸಿರುವ ಸಂಗತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಮುಂಬೈನ ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವ ವಿಡಿಯೋ.

ನಿಜಾಂಶ: ಬಾರಾಮುಲ್ಲಾದ (ಜಮ್ಮು ಮತ್ತು ಕಾಶ್ಮೀರ) ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವುದನ್ನು ವಿಡಿಯೋ ತೋರಿಸುತ್ತಿದ್ದು, ಮುಂಬೈನಲ್ಲಿ ನಡೆದ ಘಟನೆ ಇದಲ್ಲ. ಆದುದರಿಂದ ಪೋಸ್ಟ್ ಪ್ರತಿಪಾದಿಸಿರುವುದು ಸುಳ್ಳು.

ಕೀ ವರ್ಡ್ ಗಳ ಜೊತೆಗೆ ಗೂಗಲ್ ನಲ್ಲಿ ಈ ವಿಡಿಯೋ ಬಗ್ಗೆ ಹುಡುಕಿದಾಗ, ಇದೇ ವಿಡಿಯೋವನ್ನು ಒಳಗೊಂಡಿರುವ ಒಂದು ‘ಟೈಮ್ಸ್ ಅಫ್ ಇಂಡಿಯ’ ಲೇಖನ ಸಿಕ್ಕಿತು. ಆ ವರದಿಯ ಪ್ರಕಾರ, ಬಾರಾಮುಲ್ಲಾದ (ಜಮ್ಮು ಮತ್ತು ಕಾಶ್ಮೀರ) ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವುದನ್ನು ವಿಡಿಯೋ ತೋರಿಸುತ್ತಿದೆ. ಕಾಶ್ಮೀರಿ ಪತ್ರಕರ್ತ ‘ರಿಫಾತ್ ಅಬ್ದುಲ್ಲ’ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಇದು ಬಾರಾಮುಲ್ಲಾ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಲ್ಲಿ ನಡೆದ ಘಟನೆ ಎಂದು ಹೇಳಿದ್ದಾರೆ.

ಏಪ್ರಿಲ್ 2020 ರಲ್ಲಿ, ಬಾರಾಮುಲ್ಲಾದ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್-19 ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಿದ್ದನ್ನ ‘ರಿಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಈಗ ಅದನ್ನೇ ಮುಂಬೈನ ಕ್ವಾರಂಟೈನ್ ಕೇಂದ್ರ ಎಂದು ಪೋಸ್ಟ್ ಪ್ರತಿಪಾದಿಸಿದೆ.

ಒಟ್ಟಾರೆಯಾಗಿ, ಬಾರಾಮುಲ್ಲಾದ (ಜಮ್ಮು ಮತ್ತು ಕಾಶ್ಮೀರ) ಕ್ವಾರಂಟೈನ್ ಕೇಂದ್ರದಲ್ಲಿ ಜನ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಮುಂಬೈನ ಕ್ರೀಡಾಂಗಣದ್ದು ಎಂದು ಹೇಳಿ ಹಂಚಿಕೊಳ್ಳಲಾಗಿದೆ.