ಕಾಶ್ಮೀರದಲ್ಲಿ ಕಲ್ಲು ತೂರಿದವರನ್ನು ಹೊಡೆದುರಳಿಸಿದ ಸೇನೆ ಎಂದು ಬೊಲಿವಿಯಾದ ವಿಡಿಯೋ ತಪ್ಪಾಗಿ ಹಂಚಿಕೆ

ಸೇನಾ ಬೆಂಗಾವಲು ವಾಹನದ ಮೇಲೆ ಕಾಶ್ಮೀರಿದಲ್ಲಿ ಕಲ್ಲು ತೂರಾಟ ನಡೆಸಿದವರನ್ನು, ಭಾರತೀಯ ಸೇನೆಯು ಸ್ಥಳದಲ್ಲೇ ಹೊಡೆದುರುಳಿಸಿದೆ ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರಸ್ತೆಯಲ್ಲಿ ನಿಂತ ಜನರ ಗುಂಪು ಕಲ್ಲು ತೂರಾಟ ನಡೆಸುತ್ತಿದ್ದಾಗ ಸೇನಾ ಪಡೆ ದಾಳಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಕಾಶ್ಮೀರದಲ್ಲಿ ಕಲ್ಲು ತೂರಾಟ ಮಾಡುತ್ತಿರುವವರನ್ನು ಭಾರತೀಯ ಸೇನೆ ಹೊಡೆದುರುಳಿಸಿದ ದೃಶ್ಯಗಳು.

ನಿಜಾಂಶ : ವೀಡಿಯೊದಲ್ಲಿನ ಘಟನೆಯು ಆಗಸ್ಟ್ 2022 ರ ಮೊದಲ ವಾರದಲ್ಲಿ ಬೊಲಿವಿಯಾದ ಲಾ ಪಾಜ್‌ನಲ್ಲಿ ನಡೆದಿದೆ. ಪ್ಯಾರ್ಲಲ್ ಕೋಕಾ ಮಾರುಕಟ್ಟೆಯನ್ನು ವಿರೋಧಿಸಿ ಕೋಕಾ ಬೆಳೆಯುವ ರೈತರು ಪ್ರತಿಭಟಿಸುತ್ತಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ, 30 ವರ್ಷ ವಯಸ್ಸಿನ ಪ್ರತಿಭಟನಾಕಾರನ ಕೈಯಲ್ಲಿದ್ದ, ಡೈನಮೈಟ್ ಸ್ಫೋಟಗೊಂಡಿತು. ಅವರು ಗಂಭೀರವಾಗಿ ಗಾಯಗೊಂಡು ಎಡಗೈಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಬೊಲಿವಿಯನ್ ಪತ್ರಿಕೆಯು ತನ್ನ ವೆಬ್‌ಸೈಟ್‌ನಲ್ಲಿ ಘಟನೆಯನ್ನು ವರದಿ ಮಾಡುವಾಗ ಈ ದೃಶ್ಯಗಳನ್ನು ಪ್ರಕಟಿಸಿದೆ.

ಇದರಿಂದ ಕ್ಲೂ ತೆಗೆದುಕೊಂಡು, ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದಾಗ , ಈ ವಿಷಯದ ಕುರಿತು ಹಲವು ಮಾಧ್ಯಮ ವರದಿಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ವರದಿಗಳ ಪ್ರಕಾರ, ಕೋಕಾ ಉತ್ಪಾದಕರ (ಅಡೆಪ್ಕೋಕಾ) ಸಂಘದ ಸದಸ್ಯರು ಸರ್ಕಾರದ ಬೆಂಬಲಿತ ಸಮಾನಾಂತರ ಕೋಕಾ ಮಾರುಕಟ್ಟೆಯನ್ನು ಪ್ರತಿಭಟಿಸಿ, ಸಂಘರ್ಷಕ್ಕೆ ಇಳಿದ ಸಂದರ್ಭ ಎಂದು ವರದಿಯಾಗಿದೆ. ಆಗಸ್ಟ್ 2022 ರ ಮೊದಲ ವಾರದಲ್ಲಿ, ಬೊಲಿವಿಯಾದ ಲಾ ಪಾಜ್‌ನಲ್ಲಿ ರೈತರು ಸಮಾನಾಂತರ ಮಾರುಕಟ್ಟೆಯನ್ನು ಮುಚ್ಚಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಕೋಕಾ ರೈತರ ಗುಂಪನ್ನು ಹಿಮ್ಮೆಟ್ಟಿಸಲು ಪೊಲೀಸರು ಅಶ್ರುವಾಯು ಶೆಲ್‍ನ ದಾಳಿ ನಡೆಸಿದ್ದಾರೆ. ಈ ವೇಳೆ 30 ವರ್ಷ ವಯಸ್ಸಿನ ಪ್ರತಿಭಟನಾಕಾರನ ಕೈಯಲ್ಲಿದ್ದ, ಡೈನಮೈಟ್ ಸ್ಫೋಟಗೊಂಡಿತು. ಅವರು ಗಂಭೀರವಾಗಿ ಗಾಯಗೊಂಡು ಎಡಗೈಯನ್ನು ಕಳೆದುಕೊಂಡಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಡೈನಮೈಟ್ ಸ್ಫೋಟದಿಂದಾಗಿ ಬೊಲಿವಿಯಾದ ಪ್ರತಿಭಟನಾಕಾರನೊಬ್ಬ ಗಾಯಗೊಂಡಿರುವ ವೀಡಿಯೊವನ್ನು ಭಾರತೀಯ ಸೇನೆಯು ಹೊಡೆದುರುಳಿಸಿದ ಕಾಶ್ಮೀರಿ ಭಯೋತ್ಪಾದಕನ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.