ನಟ ವಿಜಯ್ ಅವರ ಕಚೇರಿಯನ್ನು ಅತಿಕ್ರಮಣವಾಗಿ ಕೆಡವುತ್ತಿರುವ ವೀಡಿಯೊವನ್ನು ಇಫ್ತಾರ್ ಪಾರ್ಟಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ರಂಜಾನ್ ತಿಂಗಳು ಮಾರ್ಚ್ 02, 2025 ರಂದು ಶುರುವಾಗಿತ್ತು. ತಮಿಳು ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ದಳಪತಿ ವಿಜಯ್ ಮಾರ್ಚ್ 07, 2025 ರಂದು ಚೆನ್ನೈನಲ್ಲಿ ಇಫ್ತಾರ್ ಪಾರ್ಟಿಯನ್ನು ಆಯೋಜಿಸಿದ್ದರು, ಅಲ್ಲಿ ಅವರು ಮುಸ್ಲಿಮರೊಂದಿಗೆ ನಮಾಜ್‌ನಲ್ಲಿಯೂ ಭಾಗವಹಿಸಿದ್ದರು. ಇದರ ನಡುವೆ, ಟಿವಿಕೆ ಪಕ್ಷದ ಧ್ವಜದ ಬಣ್ಣಗಳನ್ನು ಹೋಲುವ ವಿಜಯ್ ಅವರ ಚಿತ್ರವನ್ನು ಒಳಗೊಂಡ ಗೋಡೆಯ ಧ್ವಂಸ ಮಾಡುತ್ತಿರುವ ವಿಡಿಯೋ  ಫೋಟೋ (ಇಲ್ಲಿ)  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹೇಳಿಕೆಯು ವಿಜಯ್ ಅವರು ಇಫ್ತಾರ್ ಆಯೋಜಿಸಿದ ನಂತರ ಅವರ ಕಚೇರಿಯನ್ನು ಕೆಡವಲಾಯಿತು ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ವೈರಲ್ ವೀಡಿಯೊದಲ್ಲಿ ನಟ ವಿಜಯ್ ಚೆನ್ನೈನಲ್ಲಿ ಇಫ್ತಾರ್ ಪಾರ್ಟಿ ಆಯೋಜಿಸಿದ್ದಕ್ಕಾಗಿ ಅವರ ಕಚೇರಿಯನ್ನು ಕೆಡವಲಾಗಿದೆ ಎಂದು ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್: ವೈರಲ್ ವೀಡಿಯೊಗೂ ಇಫ್ತಾರ್‌ಗೆ ಸಂಬಂಧಿಸಿಲ್ಲ. ಈ ದೃಶ್ಯಗಳು ಫೆಬ್ರವರಿ 18, 2025 ರಂದು ತಿರುವಲ್ಲೂರಿನಲ್ಲಿ ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿದ್ದಕ್ಕಾಗಿ ಅಧಿಕಾರಿಗಳು ಟಿವಿಕೆ ಯುವ ಘಟಕದ ಕಚೇರಿಯನ್ನು ಕೆಡವಿದಾಗಿದೆ. ರಂಜಾನ್ ಪ್ರಾರಂಭವಾಗುವ ಮೊದಲು ಈ ಘಟನೆ ನಡೆದಿದ್ದು, ಈ ಕ್ಲೇಮ್ ತಪ್ಪಾಗಿದೆ. 

ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ.  ಅದು ರಂಜಾನ್ ಗಿಂತಲೂ ಮೊದಲಿದಾಗಿದೆ.  ಫೆಬ್ರವರಿ 19, 2025 ರಂದು ತಲಪತಿ ಟಿವಿಕೆ 0622 ಅಕೌಂಟ್ ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೊವು ಭದ್ರತೆಗಾಗಿ ಪೊಲೀಸರೊಂದಿಗೆ ಕಚೇರಿಯನ್ನು ಕೆಡವುವುದನ್ನು ತೋರಿಸುತ್ತದೆ, ಇದು ವಿಜಯ್ ಅವರ ಇಫ್ತಾರ್ ಪಾರ್ಟಿಗೂ  ಮೊದಲು ಈ ಘಟನೆ ನಡೆದಿದೆ ಎಂದು ತಿಳಿಸಿದೆ. 

ಫೆಬ್ರವರಿ 18, 2025 ರಂದು ನ್ಯೂಸ್ ತಮಿಳು 24×7 ಅಪ್‌ಲೋಡ್ ಮಾಡಿದ ಅದೇ ಘಟನೆಯ ಲಾಂಗರ್ ವರ್ಷನ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ:  “TVK office | Tiruvallur | TVK office Demolish.” ಸುದ್ದಿ ವರದಿಯಲ್ಲಿ, ತಿರುವಲ್ಲೂರಿನಲ್ಲಿ ಅತಿಕ್ರಮಣಗಳ ವಿರುದ್ಧ ಧ್ವಂಸ ಕಾರ್ಯಾಚರಣೆ ಪ್ರಾರಂಭವಾಯಿತು, ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಮನೆಗಳು ಮತ್ತು ಅಂಗಡಿಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿಗಾರ ಹೇಳಿದ್ದಾರೆ. ತಿರುವಲ್ಲೂರು ಹೆದ್ದಾರಿಯ ಉದ್ದಕ್ಕೂ ಸಾರ್ವಜನಿಕ ಭೂಮಿಯಲ್ಲಿ ನಿರ್ಮಿಸಲಾಗಿರುವುದರಿಂದ ವಿಜಯ್ ಅವರ ಟಿವಿಕೆ ಕಚೇರಿಯನ್ನು ಸಹ ಕೆಡವಲಾಯಿತು. ಈ ಧ್ವಂಸವು ಅತಿಕ್ರಮಣದಿಂದಾಗಿ ನಡೆದಿದ್ದು ಇದಕ್ಕೂ ಇಫ್ತಾರ್ ಪಾರ್ಟಿಗೂ ಸಂಬಂಧಿಸಿಲ್ಲ ಎಂದು ತಿಳಿಸಿದೆ. 

ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿದಾಗ, ನಟ ವಿಜಯ್ ಫೆಬ್ರವರಿ 02, 2024 ರಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಪ್ರಾರಂಭಿಸಿದ್ದರು. ಇದಲ್ಲದೆ 2026 ರ ವಿಧಾನಸಭಾ ಚುನಾವಣೆಗೆ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೃಢಪಡಿಸುವ ಹಲವಾರು ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಮಗೆ ದೊರೆತಿವೆ. ಫೆಬ್ರವರಿ 18, 2025 ರಂದು, ಚೆನ್ನೈ-ತಿರುಪತಿ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಸಾರ್ವಜನಿಕ ಭೂಮಿಯನ್ನು ಅತಿಕ್ರಮಿಸಿದ್ದಕ್ಕಾಗಿ ಅಧಿಕಾರಿಗಳು ತಿರುವಲ್ಲೂರಿನಲ್ಲಿರುವ ಟಿವಿಕೆ ಯುವ ಘಟಕದ ಕಚೇರಿಯನ್ನು ಕೆಡವಿದರು. ಹೆದ್ದಾರಿ ಇಲಾಖೆಯು ಮೊದಲೇ ನೋಟಿಸ್ ನೀಡಿತ್ತು, ಮಾತ್ರವಲ್ಲದೆ ಕಟ್ಟಡವನ್ನು ತೆಗೆದುಹಾಕಲು ಜೆಸಿಬಿಯನ್ನು ಬಳಸಲಾಯಿತು, ಟಿವಿಕೆ ಸದಸ್ಯರು ಸ್ಥಳದಲ್ಲಿ ಜಮಾಯಿಸಿದ್ದರಿಂದ ತಾತ್ಕಾಲಿಕ ಗದ್ದಲ ಉಂಟಾಯಿತು.

ಇದರ ಜೊತೆಗೆ, ತಮಿಳು ನಟ ಮತ್ತು ಟಿವಿಕೆ ನಾಯಕ ವಿಜಯ್ ಅವರು ಮಾರ್ಚ್ 07, 2025 ರಂದು ಚೆನ್ನೈನಲ್ಲಿ ಇಫ್ತಾರ್ ಪಾರ್ಟಿಯನ್ನು  ಆಯೋಜಿಸಿದ್ದರು, ಅಲ್ಲಿ ಅವರು ಪ್ರಾರ್ಥನೆಗಳಲ್ಲಿ ಭಾಗವಹಿಸಿದ್ದು, ಅಲ್ಲಿದವರೊಂದಿಗೆ ಉಪವಾಸ ಮುರಿದರು. ಇನ್ನೂ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಆದರೆ ಕಚೇರಿ ಧ್ವಂಸದ ವೈರಲ್ ವೀಡಿಯೊ ಇಫ್ತಾರ್‌ಗೆ ಸಂಬಂಧಿಸಿಲ್ಲ, ಏಕೆಂದರೆ ಈ ಘಟನೆ ಫೆಬ್ರವರಿ 2025 ರಲ್ಲಿ ರಂಜಾನ್ ತಿಂಗಳಿಗೂ ಆರಂಭಕ್ಕೆ ಬಹಳ ಮೊದಲು ಸಂಭವಿಸಿದಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ, ಹೆದ್ದಾರಿ ಅತಿಕ್ರಮಣದಿಂದಾಗಿ ನಟ ಮತ್ತು ಟಿವಿಕೆ ನಾಯಕ ವಿಜಯ್ ಅವರ ಕಚೇರಿಯನ್ನು ಕೆಡವಲಾಗಿದೆ ಎಂಬ ವೀಡಿಯೊವನ್ನು ಅವರು ಇಫ್ತಾರ್ ಪಾರ್ಟಿ ಯನ್ನು ಆಯೋಜಿಸಿದ್ದಕ್ಕಾಗಿ ತಪ್ಪಾಗಿ ಹಂಚಿಕೊಳ್ಳಲಾಗಿದೆ.