ರಷ್ಯಾದ ಹೆದ್ದಾರಿಯಲ್ಲಿ ಟ್ರಕ್ ಒಂದು ಕಾರುಗಳ ಮೇಲೆ ನುಗ್ಗುತ್ತಿರುವ ವಿಡಿಯೋವನ್ನು ಮೈಸೂರು ರಸ್ತೆಯಲ್ಲಾದ ಅಪಘಾತ ಎಂದು ಹಂಚಿಕೊಳ್ಳಲಾಗುತ್ತಿದೆ

ಕರ್ನಾಟಕದ ರಾಜಧಾನಿ ಬೆಂಗಳೂರಿನ ಕೆಂಗೇರಿ ಬಳಿಯ ಮೈಸೂರು ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಹೆದ್ದಾರಿಯಲ್ಲಿ ಕಾರುಗಳ ಮೇಲೆ ಟ್ರಕ್‌ ಒಂದು ನುಗ್ಗುತ್ತಿದೆ ಎಂದು ಹೇಳಲಾಗುತ್ತಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ ಪ್ರತಿಪಾದಿಸಿರುವುದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಕರ್ನಾಟಕದ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದ ವಿಡಿಯೋ.

ನಿಜಾಂಶ: ವೀಡಿಯೋದಲ್ಲಿನ ಘಟನೆ ಮೈಸೂರು ರಸ್ತೆಯಲ್ಲಿ (ಕರ್ನಾಟಕ) ಸಂಭವಿಸಿದ್ದಲ್ಲ. ಅದು ರಷ್ಯಾದ ಹೆದ್ದಾರಿಯಲ್ಲಾದ ಅಪಘಾತದ ವಿಡಿಯೋ. ರಷ್ಯಾದ ಮಾಸ್ಕೋ ಮತ್ತು ಚೆಲ್ಯಾಬಿನ್ಸ್ಕ್ ನಗರಗಳನ್ನು ಸಂಪರ್ಕಿಸುವ ‘ಎಂ-5’ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಚಿತ್ರದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಹುಡುಕಾಟಕ್ಕೆ ಒಳಪಡಿಸಿದಾಗ ‘ರುಪ್ಟ್ಲಿ’ ವೀಡಿಯೊ ದೊರೆತಿದೆ. ‘ರುಪ್ಟ್ಲಿ’ ಪ್ರಕಾರ, ರಷ್ಯಾದ ಚೆಲ್ಯಾಬಿನ್ಸ್ಕ್ ನಗರದಲ್ಲಿರುವ ‘ಎಂ-5’ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ‘ಎಂ-5’ ಹೆದ್ದಾರಿ ರಷ್ಯಾದ ನಗರಗಳಾದ ಮಾಸ್ಕೋ ಮತ್ತು ಚೆಲ್ಯಾಬಿನ್ಸ್ಕ್ ನಡುವಿನ ಸಂಪರ್ಕ ರಸ್ತೆಯಾಗಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ವೀಡಿಯೊದಲ್ಲಿನ ಅಪಘಾತ ಕುರಿತ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ರಷ್ಯಾದ ಹೆದ್ದಾರಿಯಲ್ಲಿ ಟ್ರಕ್ ಒಂದು ಕಾರುಗಳ ಮೇಲೆ ನುಗ್ಗುತ್ತಿರುವ ವಿಡಿಯೋವನ್ನು ಕರ್ನಾಟಕದ ಮೈಸೂರು ರಸ್ತೆಯಲ್ಲಾದ ಅಪಘಾತವೆಂದು ಹಂಚಿಕೊಳ್ಳಲಾಗುತ್ತಿದೆ.