ಏಪ್ರಿಲ್ ಮೊದಲ ವಾರದಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ 2025 ಜಾರಿಗೆ ಬಂದ ನಂತರ, ಪಶ್ಚಿಮ ಬಂಗಾಳ ಸೇರಿದಂತೆ ದೇಶಾದ್ಯಂತ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮುಸ್ಲಿಮರು ಹೊಸದಾಗಿ ಜಾರಿಗೆ ತಂದ ಕಾನೂನನ್ನು ವಿರೋಧಿಸುತ್ತಿದ್ದಾರೆ. ನ್ಯೂಸ್ ರಿಪೋರ್ಟ್ ಪ್ರಕಾರ (ಇಲ್ಲಿ, ಇಲ್ಲಿ), ಏಪ್ರಿಲ್ 11, 2025 ರಂದು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟವು, ಇದರ ಪರಿಣಾಮವಾಗಿ ಹಿಂಸಾಚಾರ ಮತ್ತು ಗಲಭೆಗಳು ನಡೆದವು. ವರದಿಗಳು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಹಿಂಸಾಚಾರದಲ್ಲಿ ಮೂರು ಜನರು ಪ್ರಾಣ ಕಳೆದುಕೊಂಡಿದ್ದು, ಇಬ್ಬರು ಹಿಂದೂಗಳು, ಚಂದನ್ ದಾಸ್ ಮತ್ತು ಹರ್ಗೋಬಿಂದ್ ದಾಸ್ ಗುಂಪು ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದು, ಒಬ್ಬ ಮುಸ್ಲಿಂ ವ್ಯಕ್ತಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು. ವರದಿಗಳ ಪ್ರಕಾರ, ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಿಂದ ಪ್ರಭಾವಿತರಾದ ನೂರಾರು ಜನರು (ಹೆಚ್ಚಾಗಿ ಹಿಂದೂಗಳು) ಭಾಗೀರಥಿ ನದಿಯನ್ನು ದಾಟಿ ಪಕ್ಕದ ಮಾಲ್ಡಾ ಜಿಲ್ಲೆಯಲ್ಲಿ ಆಶ್ರಯ ಪಡೆದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಏಪ್ರಿಲ್ 12, 2025 ರಂದು, ಕಲ್ಕತ್ತಾ ಹೈಕೋರ್ಟ್ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕೇಂದ್ರ ಪಡೆಗಳನ್ನು ನಿಯೋಜಿಸಲು ಆದೇಶಿಸಿತು (ಇಲ್ಲಿ, ಇಲ್ಲಿ).
ಈ ಸಂದರ್ಭದಲ್ಲಿ, ಗುಂಪೊಂದು ಬಾಲಕನನ್ನು ಕ್ರೂರವಾಗಿ ಥಳಿಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ಆ ಹುಡುಗನನ್ನು ಅವನ ತಂದೆಯ ಮುಂದೆಯೇ ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಈ ದೃಶ್ಯಗಳು ಏಪ್ರಿಲ್ 2025 ರಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದ ಧಾರ್ಮಿಕ ಹಿಂಸಾಚಾರದ ಸಮಯದಲ್ಲಿ ಗುಂಪೊಂದು ಮಗುವನ್ನು ಅವನ ತಂದೆಯ ಮುಂದೆಯೇ ಥಳಿಸಿ ಕೊಂದಿರುವುದನ್ನು ತೋರಿಸುತ್ತವೆ.
ಫ್ಯಾಕ್ಟ್: ಈ ವೀಡಿಯೊ ಪಶ್ಚಿಮ ಬಂಗಾಳಕ್ಕೆ ಅಲ್ಲ, ಬದಲಾಗಿ ಮಾರ್ಚ್ 2025 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಖಿಲ್ಖೇತ್ ಢಾಕಾದಲ್ಲಿ ಮಗುವಿನ ಮೇಲೆ ಹದಿಹರೆಯದವರ ಅತ್ಯಾಚಾರ ಎಸಗಿದ ಆರೋಪಿ ಮೇಲೆ ಗುಂಪೊಂದು ದಾಳಿ ಮಾಡುವುದನ್ನು ಇದು ತೋರಿಸುತ್ತದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಅದರ ಕೆಲವು ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ಮಾರ್ಚ್ 2025 ರ ವೈರಲ್ ವೀಡಿಯೊ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ (ಇಲ್ಲಿ ಮತ್ತು ಇಲ್ಲಿ) ನಮ್ಮನ್ನು ಕರೆದೊಯ್ಯಿತು, ಅಂದರೆ ವೀಡಿಯೊದಲ್ಲಿನ ಘಟನೆಯು ವೈರಲ್ ವೀಡಿಯೊಗಿಂತ ಹಿಂದಿನದು ಎಂದು ತಿಳಿಯುತ್ತದೆ.
ಈ ಪೋಸ್ಟ್‌ಗಳಲ್ಲಿ ಕೆಲವು ಈ ವೀಡಿಯೊವನ್ನು ಬಾಂಗ್ಲಾದೇಶಕ್ಕೆ ಲಿಂಕ್ ಮಾಡಿವೆ. ಇದನ್ನು ಸುಳಿವಾಗಿ ತೆಗೆದುಕೊಂಡು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ವೈರಲ್ ವೀಡಿಯೊದಲ್ಲಿ ಕಂಡುಬರುವಂತೆಯೇ ದೃಶ್ಯಗಳನ್ನು ಒಳಗೊಂಡಿರುವ ಸುದ್ದಿ ವರದಿಗಳು (ಇಲ್ಲಿ ಮತ್ತು ಇಲ್ಲಿ) ಕಂಡುಬಂದಿವೆ.
ವರದಿಯಾಗಿರುವಂತೆ, ಈ ಘಟನೆ ಬಾಂಗ್ಲಾದೇಶದ ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ಕುರಿತು ಇನ್ನೂ ಕೆಲವು ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಈ ವರದಿಗಳ ಪ್ರಕಾರ, ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಹದಿಹರೆಯದ ವ್ಯಕ್ತಿಯೊಬ್ಬನನ್ನು ಮಾರ್ಚ್ 18, 2025 ರಂದು ಢಾಕಾದಲ್ಲಿ ಕೋಪಗೊಂಡ ಗುಂಪೊಂದು ಥಳಿಸಿತ್ತು. ಪೊಲೀಸ್ ವಾಹನವನ್ನು ಧ್ವಂಸಗೊಳಿಸಿದ ನಂತರ (ಇಲ್ಲಿ ಮತ್ತು ಇಲ್ಲಿ) ಆತನನ್ನು ಹೊರಗೆಳೆದರು. ನಂತರ ಆತನನ್ನು ಗಂಭೀರ ಸ್ಥಿತಿಯಲ್ಲಿ ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಕೆಲವು ವರದಿಗಳ ಪ್ರಕಾರ, ಆರೋಪಿ ಹದಿಹರೆಯದವನಾಗಿದ್ದು, ಆತನ ಹೆಸರು ಜಾನ್ ಮಿಯಾ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಖಿಲ್ಖೇತ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ (ಒಸಿ) ಮೊಹಮ್ಮದ್ ಕಮಲ್ ಹೊಸೈನ್ ಮಾಧ್ಯಮಗಳಿಗೆ (ಇಲ್ಲಿ, ಇಲ್ಲಿ) ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೂ ದಾಳಿ ನಡೆಸಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು. ಪೊಲೀಸರ ಮೇಲೆ ಈ ದಾಳಿ ನಡೆಸಿದ್ದಕ್ಕಾಗಿ 100 ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಒಂದೇ ದಿನ ಇಬ್ಬರನ್ನು ಬಂಧಿಸಲಾಗಿದೆ. ವೈರಲ್ ಆಗಿರುವ ವೀಡಿಯೊಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಖಿಲ್ಖೇತ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರದ ನಡೆಸಿದ ಹದಿಹರೆಯದ ಆರೋಪಿಯ ಮೇಲೆ ಗುಂಪೊಂದು ದಾಳಿ ಮಾಡಿದ ವೀಡಿಯೊವನ್ನು ಏಪ್ರಿಲ್ 2025 ರ ಪಶ್ಚಿಮ ಬಂಗಾಳದ ಕೋಮು ಹಿಂಸಾಚಾರಕ್ಕೆ ತಪ್ಪಾಗಿ ಲಿಂಕ್ ಮಾಡಲಾಗಿದೆ.