ಸಂಬಂಧವಿಲ್ಲದ ಹಳೆಯ ವಿಡಿಯೊವನ್ನು T20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲನ್ನು ಸಂಭ್ರಮಿಸುತ್ತಿರುವ ಬಲೂಚಿಸ್ತಾನದ ಜನರು ಎಂದು ಹಂಚಿಕೊಳ್ಳಲಾಗುತ್ತಿದೆ

ಆಸ್ಟ್ರೇಲಿಯಾ ವಿರುದ್ಧದ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲನ್ನು ಬಲೂಚಿಸ್ತಾನದ ಜನರು ಸಂಭ್ರಮಿಸುತ್ತಿದ್ದಾರೆ ಎಂದು ಹೇಳುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕೆಲವರು ಸಂತಸದಿಂದ ಕುಣಿದಾಡುತ್ತಿರುವ ದೃಶ್ಯಗಳನ್ನು ನೋಡಬಹುದು. ಅನೇಕ ಪ್ರಮುಖ ಸುದ್ದಿ ಸಂಸ್ಥೆಗಳು ಈ ವೀಡಿಯೊದಲ್ಲಿ ಇದನ್ನೇ ಪ್ರತಿಪಾದಿಸಿ ಲೇಖನಗಳು ಮತ್ತು ವೀಡಿಯೊಗಳನ್ನು ಪ್ರಕಟಿಸಿವೆ. ನವೆಂಬರ್  11, 2021 ರಂದು ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಬಳಿಕ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತದೆ. ಆ ಪೋಸ್ಟ್ ನಿಜವೆ ಎಂಬುದನ್ನು ಈ ಲೇಖನದಲ್ಲಿ ಪರಿಶೀಲಿಸೋಣ.

ಪ್ರತಿಪಾದನೆ: ಆಸ್ಟ್ರೇಲಿಯಾ ವಿರುದ್ಧದ T20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲನ್ನು ಬಲೂಚಿಸ್ತಾನದ ಜನರು ಸಂಭ್ರಮಿಸಿದ್ದಾರೆ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವನ್ನು ಜೂನ್ 2020 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ನಂತರದ ವಿಡಿಯೋ ಇದಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದ ಸ್ಕ್ರೀನ್ ಶಾಟ್‌ಗಳ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಇದೇ ರೀತಿಯ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು 09 ಜೂನ್ 2020 ರಂದು ಯೂಟ್ಯೂಬ್ ಚಾನೆಲ್ ‘ಈಗಲ್ ಮೌಂಟೇನ್’   ಹಂಚಿಕೊಂಡಿದೆ ಎಂಬುದು ಕಂಡುಬಂದಿದೆ. ವಿಡಿಯೊದ ಶೀರ್ಷಿಕೆಯಲ್ಲಿ ಉರ್ದು ಲಿಪಿಯ ಅನುವಾದವು “ಪಾಕಿಸ್ತಾನ ಹುಚ್ಚು ನೃತ್ಯವಾಗಿದೆ” ಎಂದು ಓದುತ್ತದೆ. 2020 ರಲ್ಲಿ, ವೀಡಿಯೊವನ್ನು ಕೆಲವು ಯೂಟ್ಯೂಬ್ ಬಳಕೆದಾರರು ಹಂಚಿಕೊಂಡಿದ್ದು, ಇದು ಬಲೂಚಿಸ್ತಾನದ ಜನರು ನೃತ್ಯ ಮಾಡುತ್ತಿರುವ ದೃಶ್ಯವಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಇತ್ತೀಚಿನ ಟಿ 20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಸೋಲಿನ ನಂತರ ವೀಡಿಯೊವನ್ನು ಚಿತ್ರೀಕರಿಸಲಾಗಿಲ್ಲ ಎಂಬುದು ಈ ವಿವರಗಳಿಂದ ಸ್ಪಷ್ಟವಾಗಿದೆ.

ನವೆಂಬರ್ 11, 2021 ರಂದು ಆಸ್ಟ್ರೇಲಿಯಾ ವಿರುದ್ಧದ T20 ವಿಶ್ವಕಪ್ ಸೆಮಿ-ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲಿನ ನಂತರ ಬಲೂಚಿಸ್ತಾನದ ಜನರು ಬೀದಿಗಳಲ್ಲಿ ಸಂಭ್ರಮಿಸಿದರು ಎಂದು ANI ಸುದ್ದಿ ಸಂಸ್ಥೆ 12 ನವೆಂಬರ್ 2021 ರಂದು ಲೇಖನದಲ್ಲಿ ಪ್ರಕಟಿಸಿದೆ. ಆದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗೂ ಬಲೂಚಿಸ್ತಾನದ ಸಂಭ್ರಮಾಚರಣೆಗೂ ಯಾವುದೇ ಸಂಬಂಧವಿಲ್ಲ.

ಒಟ್ಟಾರೆಯಾಗಿ, ಆಸ್ಟ್ರೇಲಿಯಾ ವಿರುದ್ಧದ T20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಸೋಲನ್ನು ಬಲೂಚಿಸ್ತಾನದ ಜನರು ಸಂಭ್ರಮಿಸಿಲ್ಲ. ಸಂಬಂಧವಿಲ್ಲದ ಯಾವುದೋ ಹಳೆಯ ವೀಡಿಯೊವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.