ಗಾಯಗೊಂಡ ಮಹಿಳೆಯ ಹಳೆಯ ಚಿತ್ರಗಳನ್ನು ಸಂಬಂಧವಿಲ್ಲದ ಸ್ವೀಡನ್ ಗಲಭೆಯೆಗೆ ಆರೋಪಿಸಿ ಹಂಚಿಕೊಳ್ಳಲಾಗಿದೆ

ಮಹಿಳೆಯೊಬ್ಬರ ಮುಖಕ್ಕೆ ತೀವ್ರ ಗಾಯಗಳಾಗಿರುವ ಫೋಟೊ ಕೊಲಾಜ್ ಅನ್ನು ಒಳಗೊಂಡ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿದೆ. ಇದು ಇತ್ತೀಚಿನ ಸ್ವೀಡನ್ ಗಲಭೆಯಲ್ಲಿ ಜಿಹಾದಿಗಳು ನಡೆಸಿದ ದಾಳಿ ಎಂದು ಪ್ರತಿಪಾದಿಸಲಾಗಿದೆ. ಇದು ಸತ್ಯವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಇತ್ತೀಚಿನ ಸ್ವೀಡನ್ ಗಲಭೆಯಲ್ಲಿ ಜಿಹಾದಿಗಳು ನಡೆಸಿದ ದಾಳಿಯಿಂದ ಮಹಿಳೆಯ ಮುಖಕ್ಕೆ ತೀವ್ರ ಹಲ್ಲೆಯಾಗಿರುವ ಫೋಟೊ ಕೊಲಾಜ್.

ನಿಜಾಂಶ: ಈ ಪೋಸ್ಟ್‌ ನಲ್ಲಿರುವ ಚಿತ್ರಗಳು ಈ ಹಿಂದೆಯೇ ಬೇರೆ ಪ್ರತಿಪಾದನೆಯೊಂದಿಗೆ ಜರ್ಮನಿಯಲ್ಲಿ ವೈರಲ್ ಆಗಿದ್ದವು. 2017ರಲ್ಲಿಯೇ MIMAKAMA ಎಂಬ ಪತ್ರಿಕೆಯು ಇದನ್ನೂ ಬಯಲುಗೊಳಿಸಿತ್ತು. ಹಾಗಾಗಿ ಈ ಚಿತ್ರಗಳು ತುಂಬಾ ಹಳೆಯದಾಗಿದ್ದು, ಇತ್ತೀಚಿನ ಸ್ವೀಡನ್ ಗಲಭೆಗೆ ಸಬಂಧಿಸಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ ನಲ್ಲಿರುವ ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ ಫ್ಯಾಕ್ಟ್‌ ಚೆಕ್ ಲೇಖನವೊಂದು (ಆರ್ಕೈವ್) ಕಾಣುತ್ತದೆ. ಈ ಪೋಸ್ಟ್‌ ನಲ್ಲಿರುವ ಚಿತ್ರಗಳು ಈ ಹಿಂದೆಯೇ ಬೇರೆ ಪ್ರತಿಪಾದನೆಯೊಂದಿಗೆ ಜರ್ಮನಿಯಲ್ಲಿ ವೈರಲ್ ಆಗಿದ್ದವು. 2017ರಲ್ಲಿಯೇ MIMAKAMA ಎಂಬ ಪತ್ರಿಕೆಯು ಇದನ್ನು ಬಯಲುಗೊಳಿಸಿತ್ತು. ಹಾಗಾಗಿ ನಾವು ಇವು ಹಳೆಯ ಚಿತ್ರಗಳು ಎಂದು ಹೇಳಬಹುದು.

ಲೇಖನದ ಪ್ರಕಾರ ಫೋಟೋದಲ್ಲಿ ಕೊಲಾಜ್ ಮಾಡಲಾಗಿರುವ ಬಿಡಿಬಿಡಿ ಫೋಟೊಗಳು ವಿಶ್ವದಾದ್ಯಂತ ಬೇರೆಬೇರೆ ದೇಶಗಳ ಸಂತ್ರಸ್ತ ಮಹಿಳೆಯರದ್ದಾಗಿವೆ. ಕೊಲಾಜ್‌ ನಲ್ಲಿರುವ ಚಿತ್ರಗಳ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ ಅಲ್ಲಿರುವ ಯಾವುವು ಸ್ವೀಡನ್ ಗಲಭೆಯ ಮಹಿಳೆಯರದ್ದಲ್ಲ. ಕೆಲ ಚಿತ್ರಗಳ ಮೂಲಗಳನ್ನು ತಿಳಿಯೋಣ.

1ನೇ ಚಿತ್ರ:

4ನೇ ಚಿತ್ರ:

15ನೇ ಚಿತ್ರ:

ಬಲಪಂಥೀಯ ರಾಜಕಾರಣಿ ರಾಸ್ಮಸ್ ಪಾಲುದಾನ್‌ ಕುರಾನ್ ಪ್ರತಿ ಸುಡುವ ವಿಡಿಯೋ ಹರಿದಾಡಿದಾಗ ಇತ್ತೀಚೆಗೆ ಸ್ವೀಡನ್ ನಗರ ಮಾಲ್ಮೊದಲ್ಲಿ ಹಿಂಸಾತ್ಮಕ ಗಲಭೆ ನಡೆದಿತ್ತು. ನೂರಾರು ಮುಸ್ಲಿಮರು ಪ್ರತಿಭಟನೆ ನಡೆಸಿ, ಟೈರ್‌ ಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆಗೆ ಕಲ್ಲು ತೂರಿದ್ದರು. ಆದರೆ ಗಲಭೆಯಲ್ಲಿ ಯಾವುದೇ ಸಾವುನೋವು ದಾಖಲಾದ ವರದಿಗಳಿಲ್ಲ.

ಒಟ್ಟಿನಲ್ಲಿ ಗಾಯಗೊಂಡ ಮಹಿಳೆಯ ಹಳೆಯ ಚಿತ್ರಗಳನ್ನು ಸಬಂಧವಿಲ್ಲದ ಸ್ವೀಡನ್ ಗಲಭೆಗೆ ಆರೋಪಿಸಿ ಹಂಚಿಕೊಳ್ಳಲಾಗಿದೆ.