AIMIM ನಾಯಕ ಅಸಾದುದ್ದೀನ್ ಓವೈಸಿ ಅವರು ಹನುಮಾನ್ ದೇವಸ್ಥಾನದಲ್ಲಿ ಆರತಿ ಮಾಡುತ್ತಿರುವ ಈ ವೈರಲ್ ವಿಡಿಯೋ AI ಆಗಿದೆ

AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಹನುಮಾನ್ ದೇವಸ್ಥಾನದಲ್ಲಿ ಆರತಿ ಮಾಡುತ್ತಿರುವ ವಿಡಿಯೋ (ಇಲ್ಲಿ) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಯೂಸರ್ಸ್ ಇದನ್ನು ನಿಜವಾದ ಘಟನೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಈ ಪೋಸ್ಟ್ ಅಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ವಿಡಿಯೋ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹನುಮಾನ್ ದೇವಸ್ಥಾನದಲ್ಲಿ ಆರತಿ ಮಾಡುತ್ತಿರುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ಈ ವಿಡಿಯೋ ನಿಜವಾದ ಘಟನೆಯನ್ನು ಚಿತ್ರಿಸುವುದಿಲ್ಲ. ಇದು Hive ಮತ್ತು Google SynthID ನಂತಹ AI-ಪತ್ತೆ ಸಾಧನಗಳಿಂದ ದೃಢೀಕರಿಸಲ್ಪಟ್ಟಿರುವಂತೆ AI ಜನರೇಟೆಡ್ ಆಗಿದೆ. ಇದರ ಜೊತೆಗೆ, ಅಸಾದುದ್ದೀನ್ ಓವೈಸಿ ಅವರು ಹನುಮಾನ್ ದೇವಸ್ಥಾನದಲ್ಲಿ ಆರತಿ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ವರದಿಗಳು ಅಥವಾ ಪುರಾವೆಗಳಿಲ್ಲ. ಆದ್ದರಿಂದ ಈ ಕ್ಲೇಮ್ ಸುಳ್ಳು.

ಇದನ್ನು ಕಂಡುಹಿಡಿಯಲು, ನಾವು ಕ್ಲೇಮ್ ನಲ್ಲಿ ನಮೂದಿಸಲಾದ ಪದಗಳನ್ನು ಬಳಸಿ ಗೂಗಲ್ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದೆವು, ಆದರೆ ಅದನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಸಿಕ್ಕಿಲ್ಲ.

ನಂತರ, ನಾವು ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕೆಳಗಿನ-ಬಲ ಮೂಲೆಯಲ್ಲಿ ಜೆಮಿನಿ ಲೋಗೋ ಇರುವುದನ್ನು ಗಮನಿಸಿದ್ದೇವೆ. ಈ ಲೋಗೋ ಸಾಮಾನ್ಯವಾಗಿ ಗೂಗಲ್ ಜೆಮಿನಿ ಬಳಸಿ ರಚಿಸಲಾದ AI-ಸೃಷ್ಟಿಯ ವಿಡಿಯೋಗಳಲ್ಲಿ ಕಂಡುಬರುತ್ತದೆ, ಆದ್ದರಿಂದ ಈ ವಿಡಿಯೋ AI-ಸೃಷ್ಟಿಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ಈ ವಿಡಿಯೋ AI- ಜನರೇಟೆಡ್ ಎಂಬುದನ್ನು ಪರಿಶೀಲಿಸಲು, ನಾವು Hive ಮತ್ತು Google SynthID ನಂತಹ AI ಪತ್ತೆ ಸಾಧನಗಳ ಮೂಲಕ ಅದನ್ನು ಓಡಿಸಿದೆವು. ಎರಡೂ ಸಾಧನಗಳು ವಿಡಿಯೋ AI ಎಂಬುದನ್ನು ಖಚಿತಪಡಿಸಿವೆ. ಹಾಗಾಗಿ ಈ ವೈರಲ್ ಕ್ಲಿಪ್ ನಿಜವಲ್ಲ ಮತ್ತು ಈ ಕ್ಲೈಮ್ ಸುಳ್ಳು ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, AIMIM ನಾಯಕ ಅಸಾದುದ್ದೀನ್ ಓವೈಸಿ  ಹನುಮಾನ್ ದೇವಸ್ಥಾನದಲ್ಲಿ ಆರತಿ ಮಾಡುತ್ತಿರುವುದನ್ನು ತೋರಿಸುತ್ತದೆ ಎನ್ನುವ ಈ ವೈರಲ್ ವಿಡಿಯೋ AI ಜನರೇಟ್ ಆಗಿದೆ