“ನರೇಂದ್ರ ಮೋದಿ ಜಿಂದಾಬಾದ್” ಎಂದು ಜನರು ಘೋಷಣೆ ಕೂಗುತ್ತಿರುವ ಈ ವಿಡಿಯೋ ನೇಪಾಳದದ್ದಲ್ಲ, ಮಾಲ್ಡೀವ್ಸ್‌ನದ್ದು

ಸೆಪ್ಟೆಂಬರ್ 04, 2025 ರಂದು, ನೇಪಾಳ ಸರ್ಕಾರವು 26 ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟಫಾರ್ಮ್ ಅನ್ನು ನಿಷೇಧಿಸಿತು.  ಇದು ದೇಶಾದ್ಯಂತ ಯುವ ನೇತೃತ್ವದ ಪ್ರತಿಭಟನೆಗಳಿಗೆ ಕಾರಣವಾಯಿತು ಸೆಪ್ಟೆಂಬರ್ 08, 2025 ರಿಂದ ಹಿಂಸಾತ್ಮಕ ರೂಪತಾಳಿ, ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿ ಅಧ್ಯಕ್ಷರ ನಿವಾಸ ಸೇರಿದಂತೆ ಸರ್ಕಾರಿ ಆಸ್ತಿಗಳನ್ನು ಗುರಿಯಾಗಿಸಿಕೊಂಡರು. ಕನಿಷ್ಠ 72 ಜನರು ಸಾವನ್ನಪ್ಪಿದ್ದು,  2,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸೆಪ್ಟೆಂಬರ್ 09, 2025 ರಂದು ನಿಷೇಧವನ್ನು ತೆಗೆದುಹಾಕಿದರೂ, ಭ್ರಷ್ಟಾಚಾರ ಮತ್ತು ಅಸಮಾನತೆಯ ಕಾರಣ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯನ್ನು ಪ್ರತಿಭಟನಾಕಾರರು ಒತ್ತಾಯಿಸಿದರು. ಹಲವಾರು ಮಂತ್ರಿಗಳೊಂದಿಗೆ ಅದೇ ದಿನ ಓಲಿ ರಾಜೀನಾಮೆ ನೀಡಿದರು. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ನೇಮಿಸಲಾಯಿತು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ  ಕರ್ಕಿ.  ಮಾರ್ಚ್ 05, 2026 ರಂದು ಹೊಸ ಚುನಾವಣೆಗಳು ನಿಗದಿಯಾಗಿವೆ. ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಸೈನ್ಯವನ್ನು ನಿಯೋಜಿಸಲಾಯಿತು, ಆದರೆ ಮಧ್ಯಂತರ ಸರ್ಕಾರವು ಅಸುನೀಗಿದ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಮತ್ತು ಗಾಯಗೊಂಡವರಿಗೆ ಉಚಿತ ವೈದ್ಯಕೀಯ ಆರೈಕೆಯನ್ನು ಘೋಷಿಸಿದೆ. ಯುವಕರ ನೇತೃತ್ವದ ಗುಂಪುಗಳು ನೇಪಾಳದ ರಾಜಕೀಯ ನಿರ್ದೇಶನವನ್ನು ರೂಪಿಸುವುದನ್ನು ಮುಂದುವರೆಸಿವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).

ಈ ಸಂದರ್ಭದಲ್ಲಿ, ಸೆಪ್ಟೆಂಬರ್ 2025 ರ ಪ್ರತಿಭಟನೆಗಳ ನಡುವೆ ನೇಪಾಳದವರೆಂದು ವಿಡಿಯೋ ಎಂದು ಹೇಳಿಕೊಂಡು ಜನರು “ನರೇಂದ್ರ ಮೋದಿ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಹಾಗಾದರೆ ಈ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಸೆಪ್ಟೆಂಬರ್ 2025 ರಲ್ಲಿ ನೇಪಾಳದಲ್ಲಿ ಪ್ರತಿಭಟನೆಗಳ ನಡುವೆ ಜನರು “ನರೇಂದ್ರ ಮೋದಿ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ ಸೆಪ್ಟೆಂಬರ್ 2025 ರ ಪ್ರತಿಭಟನೆಗಳ ನಡುವೆ ನೇಪಾಳದಲ್ಲಿ ಜನರು “ನರೇಂದ್ರ ಮೋದಿ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಿರುವುದನ್ನು ಇದು ತೋರಿಸುವುತಿಲ್ಲ. ಜುಲೈ 2025 ರಲ್ಲಿ ಮಾಲ್ಡೀವ್ಸ್‌ನ ಮಾಲೆಯಲ್ಲಿರುವ ಧೋಶಿಮೆಯ್ನಾ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದನ್ನು ಇದು ತೋರಿಸುತ್ತದೆ. ಈ ಸಮಯದಲ್ಲಿ ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತದಿಂದ ನಿಧಿಸಂಗ್ರಹಿಸಲ್ಪಟ್ಟ ಹೊಸ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯನ್ನು ಉದ್ಘಾಟಿಸುವಾಗ, ಅಲ್ಲಿನ ಜನರು “ಮೋದಿ ಜಿಂದಾಬಾದ್” ಎಂದು ಕೂಗಿದರು. ಹಾಗಾಗಿ ಈ ವೀಡಿಯೊ ನೇಪಾಳಕ್ಕೆ ಸಂಬಂಧಿಸಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ದಾರಿ ತಪ್ಪಿಸುತ್ತಿದೆ.

ವೈರಲ್ ವೀಡಿಯೊದ ಪ್ರಮುಖ ಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು ಆಗಸ್ಟ್ 25, 2025 ರಂದು ನ್ಯೂಸ್ ಆನ್ ಏರ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ “ನರೇಂದ್ರ ಮೋದಿ ಜಿಂದಾಬಾದ್! ಎಕೋಸ್ ಅಕ್ರಾಸ್ ದಿ ಸ್ಟ್ರೀಟ್ಸ್ ಆಫ್ ಮಾಲೆ” ಎಂಬ ಕ್ಯಾಪ್ಶನ್ ನಲ್ಲಿ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇದು ಸೆಪ್ಟೆಂಬರ್ 2025 ರ ನೇಪಾಳ ಪ್ರತಿಭಟನೆಗಳಿಗಿಂತ ಹಿಂದಿನದು ಎಂದು ದೃಢಪಡಿಸುತ್ತದೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಜುಲೈ 2025 ರ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಈ ಘಟನೆಯನ್ನು ಒಳಗೊಂಡ ಹಲವಾರು ಮಾಧ್ಯಮ ವರದಿಗಳು ನಮಗೆ ದೊರಕಿವೆ. 2025 ರ ಜುಲೈ 23 ರಿಂದ 26 ರವರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವಿಯನ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರೊಂದಿಗೆ ಮಾಲೆಯಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡಕ್ಕೆ ಬಂದರು. ಅಲ್ಲೇ ತುಂಬಾ ಸಮಯದಿಂದ ಕಾಯುತ್ತಿದ್ದ ಜನರು ಮೋದಿ ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ “ಮೋದಿ ಜಿಂದಾಬಾದ್” ಎಂದು ಕೂಗಿದರು ಮತ್ತು ಹರ್ಷೋದ್ಗಾರವನ್ನು ವ್ಯಕ್ತಪಡಿಸಿದರು. 

ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮುಯಿಝು ಅವರು ಭಾರತದಿಂದ ಹಣಕಾಸು ನೆರವು ಪಡೆದ ರಕ್ಷಣಾ ಸಚಿವಾಲಯದ ಹೊಸ ಪ್ರಧಾನ ಕಚೇರಿಯಾದ ಧೋಶಿಮೆಯ್ನಾ ಕಟ್ಟಡವನ್ನು ಉದ್ಘಾಟಿಸಿದರು. ಭಾರತವು ಮಾಲ್ಡೀವ್ಸ್ ಅಭಿವೃದ್ಧಿಗಾಗಿ $565 ಮಿಲಿಯನ್ ಕ್ರೆಡಿಟ್ ಲೈನ್ ಅನ್ನು ಘೋಷಿಸಿತು ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಪ್ರಾರಂಭಿಸಿತು, ಇದು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿತು. ಮಾಲ್ಡೀವ್ಸ್‌ನ 60 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಮೋದಿ ಭಾಗವಹಿಸಿದ್ದರು.

ನಾವು ನಿಖರವಾದ ಸ್ಥಳವನ್ನು ಪತ್ತೆಹಚ್ಚಿದ್ದೇವೆ ಮತ್ತು ಅದನ್ನು ಮಾಲ್ಡೀವ್ಸ್‌ನ ಮಾಲೆಯಲ್ಲಿರುವ ಧೋಶಿಮೆಯ್ನಾ ಕಟ್ಟಡ ಎಂದು ಗುರುತಿಸಿದ್ದೇವೆ. ವೈರಲ್ ವೀಡಿಯೊದಲ್ಲಿನ ಬೀದಿ ದೀಪಗಳು, ಮರಗಳು ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳು ಆ ಸ್ಥಳಕ್ಕೆ  ಹೊಂದಿಕೆಯಾಗುತ್ತವೆ. ಹೋಲಿಕೆಯನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಜನರು “ನರೇಂದ್ರ ಮೋದಿ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಿರುವ ಈ ವಿಡಿಯೋ ನೇಪಾಳದದ್ದಲ್ಲ, ಮಾಲ್ಡೀವ್ಸ್‌ನದ್ದು.