ಚೀನಾದಲ್ಲಿ ಎಲಿವೇಟರ್‌ನಲ್ಲಿ ವಿದ್ಯುತ್ ಬ್ಯಾಟರಿ ಸ್ಫೋಟ ಉಂಟಾಗಿದ್ದು ಮ್ಯಾಗ್ನೆಟಿಕ್ ಫೀಲ್ಡ್‌ನಿಂದಾಗಿ ಅಲ್ಲ

ಎಲಿವೇಟರ್‌ನೊಳಗೆ EV ಬ್ಯಾಟರಿಗೆ ಬೆಂಕಿ ಹಚ್ಚಿ ಉಳಿಯುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ಅದನ್ನು ಹಿಡಿದಿರುವ ವ್ಯಕ್ತಿಗೆ ತೀವ್ರವಾಗಿ ಗಾಯವಾಗಿದೆ ಎಂದು ಹೇಳಿಕೊಳ್ಳಲಾಗಿದೆ. ಬ್ಯಾಟರಿಯು ಪ್ರಮ್ಯಾಗ್ನೆಟಿಕ್ ಫೀಲ್ಡ್ ಆಗಿ ಪರಿವರ್ತನೆಗೊಂಡು ಸ್ಫೋಟಕ್ಕೆ ಕಾರಣವಾಯಿತು ಎಂಬ ಹೇಳಿಕೆಗಳೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, ಕೆಲವು ಪೋಸ್ಟ್‌ಗಳು ಈ  ಘಟನೆಯು ಸಿಂಗಾಪುರದಲ್ಲಿ ಸಂಭವಿಸಿದೆ ಮತ್ತು ಸ್ಫೋಟವು ಓವರ್ ಚಾರ್ಜಿಂಗ್ ನಿಂದಾಗಿ  ಉಂಟಾಗಿದೆ ಎಂದು ಆರೋಪಿಸಿದೆ. ಈ ಲೇಖನಡಾ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಎಲಿವೇಟರ್‌ನಲ್ಲಿ EV ಬ್ಯಾಟರಿ ಸ್ಫೋಟವನ್ನು ತೋರಿಸುವ ವೀಡಿಯೊ, ಬ್ಯಾಟರಿಯು ಮ್ಯಾಗ್ನೆಟಿಕ್ ಎನರ್ಜಿಯಿಂದಾಗಿ  ಉಂಟಾಗಿದೆ ಎಂದು ಹೇಳಲಾಗಿದೆ. 

ಫ್ಯಾಕ್ಟ್: ವೈರಲ್ ವೀಡಿಯೊ ಮೂಲತಃ 2021 ರಲ್ಲಿ ಚೀನಾದಲ್ಲಿ ವರದಿ ಮಾಡಲಾಗಿದೆ. ಸ್ಫೋಟವು ಮ್ಯಾಗ್ನೆಟಿಕ್ ಫೀಲ್ಡ್ ನಿಂದಾಗಿ ಉಂಟಾಗಿಲ್ಲ, ಏಕೆಂದರೆ ಬ್ಯಾಟರಿಯಿಂದ ಉತ್ಪತ್ತಿಯಾಗುವ ಮ್ಯಾಗ್ನೆಟಿಕ್ ಫೀಲ್ಡ್ ಸ್ಫೋಟವನ್ನು ಪ್ರಚೋದಿಸಲು ತುಂಬಾ ದುರ್ಬಲವಾಗಿವೆ. ಹೆಚ್ಚುವರಿಯಾಗಿ, ಬ್ಯಾಟರಿಯು ವಿದ್ಯುತ್ ಮೂಲಕ್ಕೆ ಸಂಪರ್ಕ ಹೊಂದಿಲ್ಲ, ಮತ್ತು ಬ್ಯಾಟರಿಗಳು ಮ್ಯಾಗ್ನೆಟಿಕ್ ಫೀಲ್ಡ್ ಅನ್ನು ಉತ್ಪಾದಿಸುವುದಿಲ್ಲ. ಚಾರ್ಜಿಂಗ್ ಅಥವಾ ಡಿಸ್ಚಾರ್ಜ್ ಮಾಡುವಾಗ ಮಾತ್ರ ಮ್ಯಾಗ್ನೆಟಿಕ್ ಫೀಲ್ಡ್ ಉತ್ಪತ್ತಿಯಾಗುತ್ತವೆ. ಬ್ಯಾಟರಿ ಮಾರ್ಪಾಡು ಅಥವಾ ಮಿತಿಮೀರಿದಂತಹ ಅಂಶಗಳಿಗೆ ಸ್ಫೋಟವು ಹೆಚ್ಚಾಗಿ ಕಾರಣವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಚೀನಾದಲ್ಲಿ ವರದಿಯಾದ ಘಟನೆ:

ವೈರಲ್ ವೀಡಿಯೊವು ಮೂಲತಃ 2021 ರಲ್ಲಿ ಚೀನಾದಲ್ಲಿ ವರದಿಯಾದ ಘಟನೆಯಾಗಿದೆ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಹುಡುಕಾಟವು ನಮ್ಮನ್ನು 2021 ರಿಂದ ಒಂದೇ ರೀತಿಯ ತುಣುಕನ್ನು ಒಳಗೊಂಡಿರುವ ಹಲವಾರು ಚೀನೀ ಸುದ್ದಿ ವರದಿಗಳನ್ನು ತೋರಿಸಿದೆ.  ಆದಾಗ್ಯೂ, ಈ ವರದಿಗಳು  (ಇಲ್ಲಿ, ಇಲ್ಲಿ & ಇಲ್ಲಿ) ಸ್ಫೋಟದ ಸ್ಥಳ ಅಥವಾ ಕಾರಣವನ್ನು ನಿರ್ದಿಷ್ಟಪಡಿಸಿಲ್ಲ. 

ಹೆಚ್ಚಿನ ಸಂಶೋಧನೆಯು ಅದೇ ಫೂಟೇಜ್ ಅನ್ನು ಒಳಗೊಂಡ ಇತ್ತೀಚಿನ ವರದಿಗಳನ್ನು ಬಹಿರಂಗಪಡಿಸಿದೆ. ಈ ವರದಿಗಳ ಪ್ರಕಾರ, ವೈರಲ್ ವೀಡಿಯೊದಲ್ಲಿನ ಘಟನೆಯು 2021 ರಲ್ಲಿ ಚೀನಾದ ಗುವಾಂಗ್‌ಝೌ ಜಿಲ್ಲೆಯ ಹೈಜು ಜಿಲ್ಲೆಯಲ್ಲಿ ಸಂಭವಿಸಿದೆ (ಇಲ್ಲಿ, ಇಲ್ಲಿ, ಮತ್ತು ಇಲ್ಲಿ). ಈ ಯಾವುದೇ ವರದಿಗಳು ಬ್ಯಾಟರಿಯ ಮ್ಯಾಗ್ನೆಟಿಕ್ ಫೀಲ್ಡ್ ಸ್ಫೋಟಕ್ಕೆ ಕಾರಣವೆಂದು ಉಲ್ಲೇಖಿಸಿಲ್ಲ.

ಹೆಚ್ಚುವರಿಯಾಗಿ, ಶಾಂಘೈ ಅಧಿಕಾರಿಗಳು ಎಲೆಕ್ಟ್ರಿಕ್ ಬೈಸಿಕಲ್‌ಗಳು ಅಥವಾ ಅವುಗಳ ಬ್ಯಾಟರಿಗಳನ್ನು ಇಂಡೋರ್  ಅಥವಾ ಎಲಿವೇಟರ್‌ಗಳಿಗೆ ತರುವುದನ್ನು ನಿಷೇಧಿಸುವ ನಿಯಮಗಳನ್ನು ಪರಿಷ್ಕರಿಸಿದ ನಂತರ, ಹಳೆಯ ಘಟನೆಯ ವೀಡಿಯೊವನ್ನು ಉಲ್ಲೇಖ ಮತ್ತು ಜಾಗೃತಿ ಉದ್ದೇಶಗಳಿಗಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಈ ವರದಿಗಳು ತೋರಿಸಿವೆ. 

ಹಿಂದೆ, ಶಾಂಘೈ ಅಧಿಕಾರಿಗಳು ಇ-ಬೈಕ್ ಬ್ಯಾಟರಿಗಳನ್ನು ಮನೆಯೊಳಗೆ ತರುವುದನ್ನು ನಿಷೇಧಿಸಿದ್ದರು. ಇ-ಬೈಕ್‌ಗಳ ಜೋಡಣೆ, ಸೇರ್ಪಡೆ ಅಥವಾ ಮಾರ್ಪಾಡುಗಳಿಗೆ ಸಂಬಂಧಿಸಿದ ಕಮರ್ಷಿಯಲ್ ಆಕ್ಟಿವಿಟೀಸ್ ಅನ್ನು ಸಹ  ನಿಷೇಧಿಸಿದರು (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಸರ್ಕಾರದ ಈ ಕ್ರಮವು ಹಲವಾರು ಬ್ಯಾಟರಿ ಸ್ಫೋಟ ಮತ್ತು ಓವರ್ ಹೀಟ್ಯಿಂಗ್  ನಿಂದಾಗಿ ಸ್ಫೋಟ (ಇಲ್ಲಿ) ಆಗುವುದನ್ನು ತಡೆಯಲು ಆ ನಂತರ ತಂದ ಕಾನೂನಾಗಿದೆ.

ಸಿಂಗಾಪುರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ:

2021 ರಲ್ಲಿ ಸಿಂಗಾಪುರದಲ್ಲಿ ಎಲಿವೇಟರ್‌ನಲ್ಲಿ EV ಬ್ಯಾಟರಿ ಸ್ಫೋಟವನ್ನು ಒಳಗೊಂಡ ಇದೇ ರೀತಿಯ ಘಟನೆ ವರದಿಯಾಗಿದೆ. ತನಿಖೆಯ ಪ್ರಕಾರ, ಸ್ಫೋಟಕ್ಕೆ ಬ್ಯಾಟರಿ ಮಾಡಿಫಿಕೇಷನ್ ಕಾರಣ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಅದೇ ವೈರಲ್ ವೀಡಿಯೊ ಸಿಂಗಾಪುರದಲ್ಲಿ ಸಂಭವಿಸಿದ್ದು ಎಂದು ತಿಳಿಸಿದೆ. ಆದರೆ ಇದು ನಿಜವಾಗಿಯೂ ಸಿಂಗಾಪುರದಲ್ಲಿ ಸಂಬಂಧಿಸಿಲ್ಲ. ಸಾಂದರ್ಭಿಕ ಪುರಾವೆಗಳು ಇದನ್ನು ಬೆಂಬಲಿಸುತ್ತವೆ, ಏಕೆಂದರೆ ಸಿಂಗಾಪುರದ ಘಟನೆಯ ವರದಿಗಳು ವೈರಲ್ ವೀಡಿಯೊದಿಂದ ಭಿನ್ನವಾಗಿರುವ ದೃಶ್ಯಗಳನ್ನು ಒಳಗೊಂಡಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಿಂಗಾಪುರದ ಘಟನೆಯಲ್ಲಿ ಎಲಿವೇಟರ್ ಪಕ್ಕದ ಗೋಡೆಯ ಮೇಲಿನ ಪೈಂಟಿಂಗ್ಸ್ ವೈರಲ್ ವೀಡಿಯೊದಲ್ಲಿ (ಇಲ್ಲಿ ಮತ್ತು ಇಲ್ಲಿ) ವಿಭಿನ್ನವಾಗಿವೆ.

ಹೆಚ್ಚುವರಿಯಾಗಿ, ಸಿಂಗಾಪುರದ ಘಟನೆಗೆ ಸಂಬಂಧಿಸಿದಂತೆ, ಈ ವರದಿಗಳು ಸ್ಕ್ರೀಮ್ಸ್ ಕೇಳಿದ ನಂತರ, ಕೆಳಗಿನ ಮಹಡಿಯಲ್ಲಿರುವ ಫ್ಲಾಟ್‌ಗಳ ಜನರು ಸ್ಥಳಕ್ಕೆ ಧಾವಿಸಿ ಬಕೆಟ್ ನೀರಿನಿಂದ ಲಿಫ್ಟ್ ಬೆಂಕಿಯನ್ನು ನಂದಿಸಿದರು ಎಂದು ಹೈಲೈಟ್ ಮಾಡಿದೆ. ಇದಕ್ಕೆ ವ್ಯತಿರಿಕ್ತವಾಗಿ, ವೈರಲ್ ವೀಡಿಯೊದಲ್ಲಿ ದಂಪತಿಗಳು ಲಿಫ್ಟ್‌ಗಾಗಿ ಕಾಯುತ್ತಿರುವುದನ್ನು ತೋರಿಸುತ್ತದೆ, ಬೆಂಕಿಯನ್ನು ಗಮನಿಸಿದ ಅವರು ಅದನ್ನು ನಂದಿಸುವ ಸಾಧನಗಳನ್ನು (ಇಲ್ಲಿ ಮತ್ತು ಇಲ್ಲಿ) ಬಳಸಿ ನಂದಿಸಲು ಪ್ರಯತ್ನಿಸುತ್ತಿದೆ. ವೈರಲ್ ವೀಡಿಯೊ ಸಿಂಗಾಪುರದಲ್ಲಿ ವರದಿಯಾದ ಘಟನೆಗೆ ಸಂಬಂಧಿಸಿಲ್ಲ ಎಂದು ಈ ವ್ಯತ್ಯಾಸಗಳು ತಿಳಿಸುತ್ತದೆ. 

ಮ್ಯಾಗ್ನೆಟಿಕ್ ಫೈರ್  ಬೆಂಕಿಗೆ ಕಾರಣವಾಗಲಿಲ್ಲ:

ವಾಹಕದ ಒಳಗಿನ ಎಲೆಕ್ಟ್ರಿಕ್ ಫೀಲ್ಡ್ ಕಂಡಕ್ಟರ್ ಚರ್ಗೆಗೆ ಒಳಪಡಿಸಿದಾಗ ಜೀರೋ ಆಗಿತ್ತು. ಐಡಿಯಲ್ ಸ್ಥಿತಿಯಲ್ಲಿ, ಬ್ಯಾಟರಿಗಳು ಮ್ಯಾಗ್ನೆಟಿಕ್ ಫೀಲ್ಡ್ ಅನ್ನು ಉತ್ಪಾದಿಸುವುದಿಲ್ಲ. ಬ್ಯಾಟರಿಯ ಚಾರ್ಜ್ ಅಥವಾ ಡಿಸ್ಚಾರ್ಜ್ ಸಮಯದಲ್ಲಿ ಮಾತ್ರ ಮ್ಯಾಗ್ನೆಟಿಕ್ ಫೀಲ್ಡ್ ಉತ್ಪತ್ತಿಯಾಗುತ್ತವೆ. ಆದಾಗ್ಯೂ, ಈ ಮ್ಯಾಗ್ನೆಟಿಕ್ ಫೀಲ್ಡ್ ವೀಕ್ ಆಗಿದ್ದು, (ಇಲ್ಲಿ) ಸ್ಫೋಟವನ್ನು ಉಂಟುಮಾಡುವಷ್ಟು ಬಲವಾಗಿರುವುದಿಲ್ಲ.  

ವೈರಲ್ ವೀಡಿಯೊ ಬ್ಯಾಟರಿಯು ಯಾವುದೇ ವಿದ್ಯುತ್ ಮೂಲಗಳಿಗೆ ಸಂಪರ್ಕ ಹೊಂದಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಎಕ್ಸ್ಟರ್ನಲ್ ಮ್ಯಾಗ್ನೆಟಿಕ್ ಫೀಲ್ಡ್ ಬ್ಯಾಟರಿಗಳ ಮೇಲೆ ಪರಿಣಾಮ ಬೀರಬಹುದಾದರೂ, ಅವುಗಳ ಪ್ರಭಾವವು ಕಡಿಮೆಯಿರುತ್ತದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಇದಲ್ಲದೆ, ಎಲಿವೇಟರ್ನ ಲೋಹದ ಮೇಲ್ಮೈ ಗಮನಾರ್ಹವಾದ ಮ್ಯಾಗ್ನೆಟಿಕ್ ಫೀಲ್ಡ್ ಅನ್ನು ಉಂಟುಮಾಡುವುದಿಲ್ಲ, ಚಾರ್ಜ್ ನಲ್ಲಿ ಇದು ಕೆಲಸ ನಿರ್ವಹಿಸುವುದಿಲ್ಲ. ಆದ್ದರಿಂದ, ಎಲಿವೇಟರ್ ಮೇಲ್ಮೈ ಮ್ಯಾಗ್ನೆಟಿಕ್ ಫೀಲ್ಡ್ (ಇಲ್ಲಿ) ಮೂಲಕ ಬ್ಯಾಟರಿಯ ಮೇಲೆ ಪ್ರಭಾವ ಬೀರುವುದಿಲ್ಲ. ಹಾಗಾಗಿ ಈ ಪರಿಣಾಮದಿಂದಾಗಿ, ವೈರಲ್ ಘಟನೆಯಲ್ಲಿ ಮ್ಯಾಗ್ನೆಟಿಕ್ ಫಿಎಲ್ಡ್ನಿಂದಾಗಿ  ಬೆಂಕಿಗೆ ಕಾರಣವಾಗಿವೆ ಎಂಬ ಹೇಳಿಕೆಯನ್ನು ಒಪ್ಪಿಕೊಳ್ಳಲಾಗುವುದಿಲ್ಲ. 

ಲಿ-ಐಯಾನ್ ಬ್ಯಾಟರಿಗಳಳ್ಳಿ ಬೆಂಕಿ ಹೊತ್ತಿಕೊಳ್ಳುತ್ತದೆ:

ಲೈಟ್ ಎಲೆಕ್ಟ್ರಿಕ್ ವೆಹಿಕಲ್ಸ್ (LEVs) ನಲ್ಲಿ ಬಳಸುವ ಲಿಥಿಯಂ-ಐಯಾನ್ ಬ್ಯಾಟರಿಗಳು ಥರ್ಮಲ್ ರನ್‌ವೇ ಕಾರಣದಿಂದಾಗಿ ಬೆಂಕಿಯನ್ನು ಹಿಡಿಯಬಹುದು. ಬೇಸಿಕಲಿ, ಬ್ಯಾಟರಿಯೊಳಗೆ ಪ್ರಾಬ್ಲಮ್ ಅರ್ರಿಸ್ ಆದಾಗ -ಸಾಮಾನ್ಯವಾಗಿ ಉತ್ಪಾದನಾ ದೋಷಗಳು, ಮಿತಿಮೀರಿದ, ದುರುಪಯೋಗ, ಅಥವಾ ಎಕ್ಸ್ಟರ್ನಲ್ ಡ್ಯಾಮೇಜ್ – ಬ್ಯಾಟರಿ ಸೆಲ್ ಹೆಚ್ಚಿನ ಹೀಟ್ ಅನ್ನು ಉತ್ಪಾದಿಸಿ  ಶಾರ್ಟ್ ಸರ್ಕ್ಯೂಟ್ಗೆ ಕಾರಣವಾಗುತ್ತದೆ.  ಈ ಶಾಖವು ಇನ್ನೂ ಹೆಚ್ಚಿನ ಶಾಖವನ್ನು ಉತ್ಪಾದಿಸುವ ಕೆಮಿಕಲ್ ರೆಅಕ್ಷನ್ಸ್ ಅನ್ನು ಪ್ರಚೋದಿಸುತ್ತದೆ. ಇದು ಸೆಲ್ ಕ್ರಿಯೇಷನ್ ಕುಸಿತಕ್ಕೆ ಮತ್ತು ಮತ್ತಷ್ಟು ಶಾಖ ಉತ್ಪಾದನೆಗೆ ಕಾರಣವಾಗುತ್ತದೆ. ಈ ಸರಣಿ ಕ್ರಿಯೆಯು ಇತರ ಸೆಲ್ ಗಳಿಗೆ ಹರಡಬಹುದು. ಈ ಕಡಿಮೆ ಸಮಯದಲ್ಲಿ ಇದು ಹೆಚ್ಚಿನ ಪ್ರಮಾಣದ ಎನರ್ಜಿ ಮತ್ತು ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುತ್ತದೆ.

ವೈರಲ್ ವೀಡಿಯೊದಲ್ಲಿ ಚಿತ್ರಿಸಲಾದ ಸ್ಫೋಟವು ಬ್ಯಾಟರಿಯ ನಿರ್ದಿಷ್ಟ ಸಮಸ್ಯೆಯಿಂದಾಗಿ ಸಂಭವಿಸಿರಬಹುದು. ಈ ಸಮಸ್ಯೆಯು ಬಹುಶಃ ಸೆಲ್ ನಿಂದಾಗಿ ಸಂಬಂಧಿಸಿದೆ, ಇದರ ಪರಿಣಾಮವಾಗಿ ಅಧಿಕ ಬಿಸಿಯಾಗುವಿಕೆ ಅಥವಾ ಹೊಂದಾಣಿಕೆಯಾಗದ ಚಾರ್ಜಿಂಗ್ ಸಾಧನಗಳ ಬಳಕೆಯಿಂದ ಉಷ್ಣಾಂಶ ಹೆಚ್ಚಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಎಲಿವೇಟರ್‌ಗಳಂತಹ ಇಂಟರ್ನಲ್ ಸ್ಥಳಗಳಲ್ಲಿ ಇ-ಬೈಕ್ ಬ್ಯಾಟರಿಗಳನ್ನು ತರುವುದನ್ನು ಚೀನಾ ಸರ್ಕಾರ ನಿಷೇಧಿಸಲು ಕಾರಣವಾಗಿದೆ. ವೈರಲ್ ಘಟನೆಯು ಮ್ಯಾಗ್ನೆಟಿಕ್ ಫೀಲ್ಡ್ ನಲ್ಲಿ ಹೆಚ್ಚಾಗಿ ಈ ಅಂಶಗಳಿಂದ ಉಂಟಾಗಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಇಂತಹ ಘಟನೆಗಳು ಕಮ್ಮಿಯಾಗಿದ್ದು, EV ಬ್ಯಾಟರಿಗಳ ಒಟ್ಟಾರೆ ಸುರಕ್ಷತಾ ದಾಖಲೆಯನ್ನು ಪ್ರತಿಬಿಂಬಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. 

ಸಂಕ್ಷಿಪ್ತವಾಗಿ ಹೇಳುವುದಾದರೆ, ಎಲಿವೇಟರ್‌ನಲ್ಲಿ ವಿದ್ಯುತ್ ಬ್ಯಾಟರಿ ಸ್ಫೋಟವನ್ನು ಒಳಗೊಂಡ ಈ ಘಟನೆಯು ಚೀನಾದಲ್ಲಿ ಸಂಭವಿಸಿದ್ದು, ಮ್ಯಾಗನೆಟಿಕ್ ಫೀಲ್ಡ್ ಗೆ ಸಂಬಂಧಿಸಿದ್ದಲ್ಲ.