ಮಧ್ಯಪ್ರದೇಶದ ಪೆಂಚ್ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹುಲಿಯನ್ನು ಮುದ್ದಿಸುತ್ತಿರುವ ಈ ವೀಡಿಯೊ AI- ರಚಿತವಾಗಿದ್ದು, ಇದು ನಿಜವಾದ ಘಟನೆಯಲ್ಲ

ರಸ್ತೆಯ ಮಧ್ಯದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹುಲಿಯನ್ನು ನಿರ್ಭಯವಾಗಿ ಮುದ್ದಿಸುತ್ತಿರುವ ವಿಡಿಯೋ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹುಲಿ ಅಭಯಾರಣ್ಯಕ್ಕೆ ಹೆಸರುವಾಸಿಯಾದ ಮಧ್ಯಪ್ರದೇಶದ ಪೆಂಚ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಜು ಪಟೇಲ್ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ ಮದ್ಯದ ಅಮಲಿನಲ್ಲಿ ಹುಲಿಯನ್ನು ಬೆಕ್ಕಿನೆಂದು ತಪ್ಪಾಗಿ ಭಾವಿಸಿದ್ದಾನೆ ಎಂಬ ಕ್ಲೇಮ್ ನೊಂದಿಗೆ  ಈ ಕ್ಲಿಪ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ ಇರುವ ಕ್ಯಾಪ್ಶನ್ ನಲ್ಲಿ  ಹುಲಿಗೆ ಯಾವುದೇ ಹಾನಿಯಾಗದಂತೆ ನಡೆದುಕೊಂಡು ಹೋಗುವ ಮೊದಲು ಮದ್ಯಪಾನ ಮಾಡಲು ಪ್ರಯತ್ನಿಸಿದ್ದಾನೆ ಎಂದು ಹೇಳುತ್ತದೆ. ಹಾಗಾದ್ರೆ ಈ ಪೋಸ್ಟ್ ನಾಲ್ ಮಾಡಲಾದ  ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಮಧ್ಯಪ್ರದೇಶದ ಪೆಂಚ್ ಪ್ರದೇಶದ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹುಲಿಯನ್ನು ಮುದ್ದಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಈ ವೀಡಿಯೊ AI-ರಚಿತವಾಗಿದ್ದು, ನಿಜವಲ್ಲ. ಪೆಂಚ್ ಟೈಗರ್ ರಿಸರ್ವ್‌ನ ಉಪ ನಿರ್ದೇಶಕರು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ದೃಢಪಡಿಸಿದ್ದಾರೆ.  AI ಪತ್ತೆ ಸಾಧನ (ಹೈವ್) ವೀಡಿಯೊ 99.9% ರಷ್ಟು AI-ರಚಿತವಾಗಿದೆ ಎಂದು ಕಂಡುಹಿಡಿದಿದೆ. ಆದ್ದರಿಂದ, ಈ ಕ್ಲೇಮ್ ಸುಳ್ಳು.

ಈ ಕ್ಲೇಮ್ ಅನ್ನು ಪರಿಶೀಲಿಸಲು ನಾವು,  ಮಧ್ಯಪ್ರದೇಶದ ಪೆಂಚ್ ಪ್ರದೇಶದಲ್ಲಿ ಅಂತಹ ಯಾವುದೇ ಘಟನೆ ನಡೆದಿದೆಯೇ ಎಂದು ಪರಿಶೀಲಿಸಲು ಗೂಗಲ್ ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆದರೆ ಅದು ಯಾವುದೇ ಫಲಿತಾಂಶಗಳನ್ನು ನೀಡಿಲ್ಲ. ಹುಡುಕಾಟದ ಸಮಯದಲ್ಲಿ, ಭಾಸ್ಕರ್ ಇಂಗ್ಲಿಷ್ ಅವರ ವರದಿಯನ್ನು ನಾವು ನೋಡಿದ್ದೇವೆ, ಇದು ಪೆಂಚ್ ಟೈಗರ್ ರಿಸರ್ವ್ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿದೆ, ವೀಡಿಯೊ ನಕಲಿ ಎಂದು ಹೇಳುತ್ತದೆ.

ಹೆಚ್ಚಿನ ಪರಿಶೀಲನೆಗಾಗಿ, ಫ್ಯಾಕ್ಟ್ಲಿ ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ್‌ನ ಉಪನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ವೀಡಿಯೊ ನಕಲಿ ಎಂದು ದೃಢಪಡಿಸಿದರು ಮತ್ತು ಇತ್ತೀಚೆಗೆ ಹುಲಿಗೆ ಸಂಬಂಧಿಸಿದ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ವೀಡಿಯೊವನ್ನು ಮತ್ತಷ್ಟು ಪರಿಶೀಲಿಸಲು, ನಾವು ವೈರಲ್ ಪೋಸ್ಟ್ ಅನ್ನು ಪರಿಶೀಲಿಸಿದ್ದೇವೆ ಮತ್ತು ಕ್ಲಿಪ್ AI- ರಚಿತವಾಗಿದೆ ಎಂದು ಹಲವಾರು ಯೂಸೆರ್ಸ್ ಕಾಮೆಂಟ್ ಮಾಡುತ್ತಿರುವುದು ಕಂಡುಬಂದಿದೆ. ಈ ಸುಳಿವನ್ನು ಬಳಸಿಕೊಂಡು, ನಾವು AI ಪತ್ತೆ ಸಾಧನ ಹೈವ್ ಮಾಡರೇಶನ್‌ನೊಂದಿಗೆ ವೀಡಿಯೊವನ್ನು ವಿಶ್ಲೇಷಿಸಿದ್ದೇವೆ. ಇದು AI- ರಚಿತವಾಗಿರುವ 99.9% ಸಾಧ್ಯತೆಯನ್ನು ಸೂಚಿಸುತ್ತದೆ, ಇದು ವೈರಲ್ ಕ್ಲಿಪ್ ನಿಜವಲ್ಲ ಎಂದು ಸೂಚಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಪ್ರದೇಶದ ಪೆಂಚ್ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹುಲಿಯನ್ನು ಮುದ್ದಿಸುತ್ತಿರುವ ಈ ವೀಡಿಯೊ AI- ರಚಿತವಾಗಿದ್ದು, ನಿಜವಾದ ಘಟನೆಯನ್ನು ತೋರಿಸುತ್ತಿಲ್ಲ.