ಪಾಕಿಸ್ತಾನದ ಸಂಸತ್ತಿಗೆ ಕತ್ತೆ ಪ್ರವೇಶಿಸುವ ಈ ವೀಡಿಯೊ AI-ಜನರೇಟೆಡ್

ಸಂಸತ್ ಭವನದೊಳಗೆ ಕತ್ತೆಯೊಂದು ಪ್ರವೇಶಿಸುತ್ತಿರುವ ವೀಡಿಯೊ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನು ಪಾಕಿಸ್ತಾನದ ಸಂಸತ್ತಿನಲ್ಲಿ ಚಿತ್ರೀಕರಿಸಲಾಗಿದೆ ಎಂಬ ಕ್ಲೈಮ್ಗಳನ್ನು ಮಾಡಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮನ್ನು ಪರಿಶೀಲಿಸೋಣ.

ಕ್ಲೇಮ್: ವೈರಲ್ ವೀಡಿಯೊ ಪಾಕಿಸ್ತಾನದ ಸಂಸತ್ತಿಗೆ ಕತ್ತೆಯೊಂದು ಪ್ರವೇಶಿಸುವುದನ್ನು ತೋರಿಸುತ್ತದೆ.

ಫ್ಯಾಕ್ಟ್: ವೈರಲ್ ವೀಡಿಯೊ AI-ಜನರೇಟೆಡ್ ಆಗಿದೆ. ವೀಡಿಯೊದಲ್ಲಿನ ದೃಶ್ಯ  ಅಸಂಗತಿಗಳು AI ಸೂಚಿಸುತ್ತವೆ. ಇದಲ್ಲದೆ, TikTok ಈ ಕ್ಲಿಪ್ ಅನ್ನು AI-ಜನರೇಟೆಡ್ ಎಂದು ಲೇಬಲ್ ಮಾಡಿದೆ ಮತ್ತು Hive ಮತ್ತು Deepfake-o-meter ನಂತಹ AI ಪತ್ತೆ ಸಾಧನಗಳು ಸಹ ಇದನ್ನು ಸಿಂಥೆಟಿಕ್ ಎಂದು ಗುರುತಿಸಿವೆ. ಹೆಚ್ಚುವರಿಯಾಗಿ, ಪಾಕಿಸ್ತಾನದ ಸಂಸತ್ತಿನಲ್ಲಿ ಅಂತಹ ಯಾವುದೇ ಘಟನೆ ನಡೆದ ಬಗ್ಗೆ ವಿಶ್ವಾಸಾರ್ಹ ವರದಿಗಳಿಲ್ಲ. ಆದ್ದರಿಂದ ಕ್ಲೇಮ್ ಸುಳ್ಳು

ಸತ್ಯಾಂಶವನ್ನು ಕಂಡುಹಿಡಿಯಲು, ನಾವು ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ ಮತ್ತು ಹಲವಾರು ಅಸಂಗತಿಗಳನ್ನು ಗಮನಿಸಿದ್ದೇವೆ. ಉದಾಹರಣೆಗೆ, ಜನರ ಮುಖಗಳು ಅಸ್ವಾಭಾವಿಕವಾಗಿ ಕಾಣುತ್ತವೆ, ಕೆಲವು ವ್ಯಕ್ತಿಗಳು ಒಂದು ಫ್ರೇಮ್‌ನಲ್ಲಿ ಕಾಣಿಸಿಕೊಂಡು ಮತ್ತೊಂದರಲ್ಲಿ ಮಾಯವಾಗುತ್ತಾರೆ, ಮತ್ತು ಒಂದು ಹಂತದಲ್ಲಿ, ಒಂದು ಕುರ್ಚಿ ಗಾಳಿಯಲ್ಲಿ ತೇಲುತ್ತಿರುವುದು ಕಂಡುಬರುತ್ತದೆ. ಇಂತಹ ದೃಶ್ಯ ವಿರೂಪಗಳು AI-ಜನರೇಟೆಡ್ ವೀಡಿಯೊಗಳಲ್ಲಿ ಸಾಮಾನ್ಯವಾಗಿದೆ, ಇದು ಈ ಕ್ಲಿಪ್ ಅನ್ನು AI ರಚಿಸಲಾಗಿದೆ ಎಂದು ಸೂಚಿಸುತ್ತದೆ.

ಇದಲ್ಲದೆ, ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ, ಇದು sarabianspeed1 ಎಂಬ ಟಿಕ್ ಟಾಕ್ ನಲ್ಲಿ ಅಪ್ಲೋಡ್ ಮಾಡಿದ ಮಾಡಲಾದ ಅದೇ ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ವೈರಲ್ ವೀಡಿಯೊ ನೈಜವಲ್ಲ. ಟಿಕ್ ಟಾಕ್ ಸ್ವತಃ ಈ ಕ್ಲಿಪ್ ಅನ್ನು AI-ಜನರೇಟೆಡ್ ಮೀಡಿಯಾವನ್ನು ಒಳಗೊಂಡಿದೆ ಎಂದು ಲೇಬಲ್ ಮಾಡಿದೆ.

ವೀಡಿಯೊ AI-ಜನರೇಟೆಡ್ ಆಗಿದೆಯೇ ಎಂದು ಮತ್ತಷ್ಟು ಪರಿಶೀಲಿಸಲು, ನಾವು ಅದನ್ನು Hive ಮತ್ತು Deepfake-o-meter ನಂತಹ AI ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದ್ದೇವೆ. ಎರಡೂ ಸಾಧನಗಳು ವೀಡಿಯೊವನ್ನು AI-ಜನರೇಟೆಡ್ ಎಂದು ಗುರುತಿಸಿವೆ. ಹೆಚ್ಚುವರಿಯಾಗಿ, ಪಾಕಿಸ್ತಾನದ ಸಂಸತ್ತಿನಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿದೆಯೇ ಎಂದು ನಾವು ಹುಡುಕಿದ್ದೇವೆ. ಆದರೆ ಈ ಕ್ಲೈಮನ್ನು ಬೆಂಬಲಿಸುವಂತಹ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಇದು ವೀಡಿಯೊ AI-ಜನರೇಟೆಡ್ ಆಗಿದ್ದು ಈ ಕ್ಲೇಮ್ ಸುಳ್ಳಾಗಿದೆ.

ಕೊನೆಯದಾಗಿ ಹೇಳುವುದಾದರೆ, ಪಾಕಿಸ್ತಾನದ ಸಂಸತ್ತಿಗೆ ಕತ್ತೆಯೊಂದು ಪ್ರವೇಶಿಸುವ ವೀಡಿಯೊ AI-ಜನರೇಟೆಡ್,  ಇದು ನಿಜವಾದ ಘಟನೆಯಲ್ಲ.