ಶಿವಲಿಂಗದ ಮುಂದೆ ಭಕ್ತಿಯಿಂದ ಮಂಡಿಯೂರಿ ಕುಳಿತ ಹಸುವಿನ ನಿಜ ಜೀವನದ ದೃಶ್ಯಗಳು ಎಂದು AI ಬಳಸಿ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ

‘ಶಿವಲಿಂಗದ ಮುಂದೆ ಭಕ್ತಿಯಿಂದ ಮಂಡಿಯೂರಿದ ಗೋಮಾತೆ’ ಎಂದು ಹೇಳಿಕೊಳ್ಳುವ ವೀಡಿಯೊವನ್ನು (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ  ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಹಸುವೊಂದು ಶಿವಲಿಂಗದ ಮುಂದೆ ಭಕ್ತಿಯಿಂದ ಮಂಡಿಯೂರಿ ಕುಳಿತ ಗೋಮಾತೆ ನಿಜ ವಿಡಿಯೋ.

ಫ್ಯಾಕ್ಟ್: ಇದು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವಿಡಿಯೋವಾಗಿದ್ದು  ಇದು ನಿಜವಾದ ಘಟನೆಯಲ್ಲ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು

ಕ್ಲೇಮ್ ನ  ಹಿಂದಿನ ಸತ್ಯವನ್ನು ಕಂಡುಹಿಡಿಯಲು, ನಾವು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಹುಡುಕಿದೆವು ಮತ್ತು ಈ ಘಟನೆಗೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಸುದ್ದಿಗಳು ಕಂಡುಬಂದಿಲ್ಲ. ವೈರಲ್ ವೀಡಿಯೊವನ್ನು ನಾವು ಸರಿಯಾಗಿ ಪರಿಶೀಲಿಸಿದಾಗ, ಅದರಲ್ಲಿರುವ ಜನರು ಹೆಚ್ಚಿನ ವೀಡಿಯೊದಲ್ಲಿ ಚಲನರಹಿತರಾಗಿರುವುದನ್ನು ನಾವು ಗಮನಿಸಿದ್ದೇವೆ. ವೀಡಿಯೊದಲ್ಲಿನ ಕೆಲವು ದೀಪಗಳು ಕೆಲವು ಸ್ಥಳಗಳಲ್ಲಿ ಚಲನರಹಿತವಾಗಿರುವುದನ್ನು ನಾವು ಗಮನಿಸಿದ್ದೇವೆ.

ರಿಯಲ್ ಜೀವನದ ವೀಡಿಯೊಗಳಲ್ಲಿ, ದೀಪಗಳ ಬೆಳಕು ಗಾಳಿಯಲ್ಲಿ ತೂಗಾಡುವುದನ್ನು ನಾವು ನೋಡುತ್ತೇವೆ, ಆದರೆ ಕೆಲವು ದೀಪಗಳು ಸ್ಥಿರವಾಗಿರುತ್ತವೆ. ಸ್ವಾಭಾವಿಕವಾಗಿ, ಅಂತಹ ದೋಷಗಳು ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾದ ವೀಡಿಯೊಗಳು ಮತ್ತು ಚಿತ್ರಗಳಲ್ಲಿ ಗೋಚರಿಸುತ್ತವೆ.

ಈ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಅದರಲ್ಲಿರುವ ಕೆಲವು ಕೀಫ್ರೇಮ್‌ಗಳನ್ನು ಬಳಸಿಕೊಂಡು ಇಂಟರ್ನೆಟ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಈ ಹುಡುಕಾಟದ ಮೂಲಕ, ಲಕ್ಷ್ಮಣ್ ಜೈಸ್ವಾಲ್ ಹೆಸರಿನ ಟಿಕ್‌ಟಾಕ್ ಯೂಸರ್ ಪೇಜ್ ನಲ್ಲಿ ನಾವು ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಲಕ್ಷ್ಮಣ್ ಈ ವೀಡಿಯೊವನ್ನು 29 ಅಕ್ಟೋಬರ್ 2025 ರಂದು ಪೋಸ್ಟ್ ಮಾಡಿದ್ದಾರೆ.

ಆದರೆ, ಈ ಪೋಸ್ಟ್‌ನಲ್ಲಿ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಎಂದು ಹೇಳುವ ಟ್ಯಾಗ್ ಅನ್ನು ನಾವು ಕಂಡುಕೊಂಡಿದ್ದೇವೆ, Creator labelled as AI-generated’. ಇದರರ್ಥ ಈ ವಿಷಯವನ್ನು ಅಪ್‌ಲೋಡ್ ಮಾಡಿದವರು ವೀಡಿಯೊವನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ರಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಲಕ್ಷ್ಮಣ್ ಜೈಸ್ವಾಲ್ ಟಿಕ್‌ಟಾಕ್ ಪೇಜ್ನಲ್ಲಿ  (ಇಲ್ಲಿ, ಇಲ್ಲಿ, ಇಲ್ಲಿ) ಅಂತಹ ಅನೇಕ AI-ರಚಿತ ವೀಡಿಯೊಗಳನ್ನು ನಾವು ಕಂಡುಕೊಂಡಿದ್ದೇವೆ.

ಇದನ್ನು ಪರಿಶೀಲಿಸಲು ಹೈವ್ ಎಂಬ AI ವಿಷಯ ಪತ್ತೆ ಸಾಧನವನ್ನು ಬಳಸಿದಾಗ, ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ

ಕೊನೆಯದಾಗಿ ಹೇಳುವುದಾದರೆ, ‘ಶಿವಲಿಂಗದ ಮುಂದೆ ಭಕ್ತಿಯಿಂದ ಮಂಡಿಯೂರಿ ಗೋಮಾತೆ ‘ಯ ನಿಜ ಜೀವನದ ದೃಶ್ಯಗಳನ್ನು ಚಿತ್ರಿಸುವ AI ಬಳಸಿ ಮಾಡಿದ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.