ಪ್ರಧಾನಿ ಮೋದಿಯವರ ಪಕ್ಕದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯುವುದನ್ನು ರಕ್ಷಣಾ ಸಿಬ್ಬಂದಿ ತಡೆದಿರುವುದನ್ನು ಈ ವಿಡಿಯೋ ತೋರಿಸುವುದಿಲ್ಲ

ಪ್ರಧಾನಿ ಮೋದಿಯವರ ಪಕ್ಕದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯಲು ರಕ್ಷಣಾ ಸಿಬ್ಬಂದಿ ತಡೆದಿದ್ದಾರೆ ಎಂದು ಪ್ರತಿಪಾದಿಸಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಪ್ರಧಾನಿ ಮೋದಿಯವರ ಪಕ್ಕದಲ್ಲಿ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯುವುದನ್ನು ರಕ್ಷಣಾ ಸಿಬ್ಬಂದಿ ತಡೆದಿರುವ ವಿಡಿಯೋ.

ನಿಜಾಂಶ: ಪ್ರಧಾನಿ ಮೋದಿಯವರ ಪಕ್ಕದಲ್ಲಿ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯುವುದನ್ನು ತಡೆದವರು ಭೋಪಾಲ್‌ನ ಜಿಲ್ಲಾಧಿಕಾರಿ ಅವಿನಾಶ್ ಲಾವನಿಯರಾಗಿದ್ದಾರೆ ಹೊರತು ಭದ್ರತಾ ಸಿಬ್ಬಂದಿಯಲ್ಲ. ಅವಿನಾಶ್ ಲಾವನಿಯ ಶಿವರಾಜ್ ಸಿಂಗ್ ಚೌಹಾಣ್‌ರವರನ್ನು ತಡೆದಿದ್ದು ಭೋಪಾಲ್‌ನ ರಾಣಿ ಕಮಲಪತಿ ರೈಲ್ವೆ ನಿಲ್ದಾಣದ ಉದ್ಘಾಟನೆಯ ವಿಷಯದ ಕುರಿತು ಚರ್ಚಿಸುವುದಕ್ಕಾಗಿ. ಚರ್ಚೆಯ ನಂತರ ಶವರಾಜ್‌ಸಿಂಗ್ ಚೌಹಾಣ್ ಮತ್ತೆ ನರೇಂದ್ರ ಮೋದಿಯವರ ಜೊತೆಗೆ ನಡೆದಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ ಇದೇ ರೀತಿ ದೃಶ್ಯಗಳನ್ನೊಳಗೊಂಡ ವಿಡಿಯೋವೊಂದನ್ನು ಎನ್‌ಡಿಟಿವಿಯ ಪತ್ರಕರ್ತರಾದ ಅನುರಾಗ್ ದ್ವಾರಿಯವರು ನವೆಂಬರ್ 16, 2021ರಂದು ಟ್ವೀಟ್ ಮಾಡಿದ್ದಾರೆ.  ಅನುರಾಗ್ ದ್ವಾರಿಯವರು ಪ್ರಧಾನಿ ಮೋದಿಯವರ ಪಕ್ಕದಲ್ಲಿ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯುವುದನ್ನು ತಡೆದವರು ಭೋಪಾಲ್‌ನ ಜಿಲ್ಲಾಧಿಕಾರಿ ಅವಿನಾಶ್ ಲಾವನಿಯರಾಗಿದ್ದಾರೆ ಹೊರತು ಮೋದಿಯವರ ಭದ್ರತಾ ಸಿಬ್ಬಂದಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಷಯದ ಕುರಿತು ಎನ್‌ಡಿಟಿವಿ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭೋಪಾಲ್‌ನ ರಾಣಿ ಕಮಲಪತಿ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದ್ದ ವೇಳೆ ಈ ಘಟನೆ ಜರುಗಿದೆ.

ಶಿವರಾಜ್ ಸಿಂಗ್ ಚೌಹಾಣ್‌ರವರು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿಯವರ ಜೊತೆ ನಡೆಯುವಾಗಿ ತಡೆದವರು ಜಿಲ್ಲಾಧಿಕಾರಿ ಅವಿನಾಶ್ ಲಾವನಿಯ ಹೊರತು ಮೋದಿಯವರ ಭದ್ರತಾ ಸಿಬ್ಬಂದಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭೋಪಾಲ್‌ನ ರಾಣಿ ಕಮಲಪತಿ ರೈಲ್ವೆ ನಿಲ್ದಾಣದ ಉದ್ಘಾಟನೆಯ ಬಗ್ಗೆ ಮಹತ್ವದ ವಿಷಯದ ಕುರಿತು ಚರ್ಚಿಸುವುದಕ್ಕಾಗಿ ಅವಿನಾಶ್ ಲಾವನಿಯ ತಡೆದಿದ್ದರು. ಅವರೊಡನೆ ಚರ್ಚಿಸಿದ ನಂತರ ಮತ್ತೆ ಮೋದಿಯವರೊಂದಿಗೆ ಶಿವರಾಜ್ ಚೌಹಾಣ್ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋ ತಪ್ಪು ನಿರೂಪಣೆಯೊಂದಿಗೆ ವೈರಲ್ ಆದ ನಂತರ ಭೋಪಾಲ್‌ನ ಜಿಲ್ಲಾಧಿಕಾರಿ ಕಚೇರಿ ಕೂಡ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಕುರಿತು ಸ್ಪಷ್ಟೀಕರಣ ನೀಡಿದೆ.

ಒಟ್ಟಿನಲ್ಲಿ ಪ್ರಧಾನಿ ಮೋದಿಯವರ ಪಕ್ಕದಲ್ಲಿ ಶಿವರಾಜ್‌ಸಿಂಗ್ ಚೌಹಾಣ್‌ ನಡೆಯುವುದನ್ನು ತಡೆದವರು ಭೋಪಾಲ್‌ನ ಜಿಲ್ಲಾಧಿಕಾರಿ ಅವಿನಾಶ್ ಲಾವನಿಯರಾಗಿದ್ದಾರೆ ಹೊರತು ಮೋದಿಯವರ ಭದ್ರತಾ ಸಿಬ್ಬಂದಿಯಲ್ಲ.