ಇದು ದಾಳಿ ಮಾಡಿದ ಭಯೋತ್ಪಾದಕರನ್ನು ಫ್ರಾನ್ಸ್ ಪೊಲೀಸರು ಬೆನ್ನಟ್ಟುತ್ತಿರುವ ವಿಡಿಯೋ ಅಲ್ಲ

ಇತ್ತೀಚಿಗೆ ಫ್ರಾನ್ಸದಲ್ಲಿ ದಾಳಿ ನಡೆಸಿದ ಭಯೋತ್ಪಾದಕನನ್ನು ಫ್ರಾನ್ಸ್ ಪೊಲೀಸರು ಬೆನ್ನಟ್ಟಿ ಬಂಧಿಸುವ ವಿಡಿಯೋ ಎಂದು, ಪೊಲೀಸರು ವ್ಯಕ್ತಿಯೊಬ್ಬನನ್ನು ಬೆನ್ನಟ್ಟುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಈ ಪೋಸ್ಟ್‌ನ ಅರ್ಕೈವ್‌ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು

ಪ್ರತಿಪಾದನೆ: ಇತ್ತೀಚೆಗೆ ಫ್ರಾನ್ಸದಲ್ಲಿ ದಾಳಿ ನಡೆಸಿದ ಭಯೋತ್ಪಾದಕನನ್ನು ಫ್ರಾನ್ಸ್ ಪೊಲೀಸರು ಬೆನ್ನಟ್ಟುವ ವಿಡಿಯೋದ ದೃಶ್ಯ.

ಸತ್ಯ: ಸ್ಪೇನ್‌ನ ಬಾರ್ಸಿಲೋನಾದಲ್ಲಿ ಹೊಸದಾಗಿ ಹೇರಿದ ಕೊರೊನಾ ಲಾಕ್‌ಡೌನ್ ನಿರ್ಬಂಧಗಳ ಕುರಿತು ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಉಂಟಾದ ಘರ್ಷಣೆಯನ್ನು ಈ ವೀಡಿಯೊ ತೋರಿಸುತ್ತದೆ. ಈ ವೀಡಿಯೊಗೂ ಫ್ರಾನ್ಸ್ ಭಯೋತ್ಪಾದಕ ದಾಳಿಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇದು ಸ್ಪೇನ್ ದೇಶದ ವಿಡಿಯೋ ಆಗಿರುವುದರಿಂದ ಫ್ರೆಂಚ್ ಪೊಲೀಸರು ಮುಸ್ಲಿಂ ಬಾಹುಳ್ಯಕ್ಕೆ ಹೋದಾಗ ನಡೆದ ಘಟನೆ ಎಂಬ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನ ವೀಡಿಯೊದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ ಸುದ್ದಿ ಸಂಸ್ಥೆಯೊಂದರ ಟ್ವೀಟ್‌ ಲಭಿಸಿದ್ದು, ಅದರಂತೆ ಕೊರೊನಾ ಲಾಕ್‌ಡೌನ್ ನಿರ್ಬಂಧಗಳ ಕುರಿತು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಇತ್ತೀಚೆಗೆ ನಡೆದ ಪೋಲಿಸ್ ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯ ವಿಡಿಯೋ ಇದೆಂದು ತಿಳಿದು ಬರುತ್ತದೆ.

ಈ ಟ್ವೀಟ್‌ನಿಂದ ಪಡೆದ ಮಾಹಿತಿಯ ಆಧಾರದಲ್ಲಿ, ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌‌ನಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ನವೆಂಬರ್ 2, 2020 ರ ಸುದ್ದಿಯೊಂದನ್ನು ಕಂಡುಬಂದಿದೆ. ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿರುವ ವೀಡಿಯೊವನ್ನು ಹೋಲುತ್ತದೆ. ಈ ವರದಿಯ ಪ್ರಕಾರ, ಹೊಸದಾಗಿ ಹೇರಿದ COVID-19 ನಿರ್ಬಂಧಗಳ ಕುರಿತು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಘಟನೆಯ ಇನ್ನೂ ಕೆಲವು ವೀಡಿಯೊಗಳನ್ನು ಇಲ್ಲಿ ನೋಡಬಹುದು. ಇದೇ ಘಟನೆಯನ್ನು ವರದಿ ಮಾಡಿದ ಇತರ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು. ಆದ್ದರಿಂದ ಇವುಗಳು, ಫ್ರಾನ್ಸ್ ಪೊಲೀಸರು ಭಯೋತ್ಪಾದಕನನ್ನು ಬಂಧಿಸುತ್ತಿರುವುದೊ, ಫ್ರೆಂಚ್ ಪೊಲೀಸರು ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಿಗೆ ಹೋದಾಗ ನಡೆದ ಘಟನೆ ಇದಾಗಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಕೊರೊನಾ ಲಾಕ್‌ಡೌನ್ ನಿರ್ಬಂಧಗಳ ಕುರಿತು ಸ್ಪೇನ್‌ನ ಬಾರ್ಸಿಲೋನಾದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಾಗಿದೆ.