ಈ ಕಲ್ಲಿನ ಕೆತ್ತನೆ ರಾಮ ಮತ್ತು ಹನುಮಂತನನ್ನು ತೋರಿಸುತ್ತಿಲ್ಲ; ಇದು ಮೆಸೊಪಟ್ಯಾಮಿಯಾದ ಆಡಳಿತಗಾರ ಟಾರ್ದುನ್ನಿಯನ್ನು ತೋರಿಸುತ್ತದೆ

ಇರಾಕ್‌ನಲ್ಲಿ 6000 ವರ್ಷಗಳ ಹಿಂದೆ ಬಂಡೆಯಲ್ಲಿ ಕೆತ್ತನೆಯನ್ನು ಭಗವಾನ್ ರಾಮ ಮತ್ತು ಹನುಮಂತನ ಕೆತ್ತನೆಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಇರಾಕ್‌ನಲ್ಲಿ 6000 ವರ್ಷಗಳಷ್ಟು ಹಳೆಯದಾದ ರಾಮ ಮತ್ತು ಹನುಮಂತನ ಶಿಲಾ ಕೆತ್ತನೆ ಕಂಡುಬಂದಿದೆ.

ಫ್ಯಾಕ್ಟ್: ಈ ಕಲ್ಲಿನ ಕೆತ್ತನೆ ರಾಮ ಮತ್ತು ಹನುಮಂತನನ್ನು ತೋರಿಸುವುದಿಲ್ಲ. ಈ ಸ್ಥಳವು ಇರಾಕ್‌ನಲ್ಲಿದ್ದರೂ, ಪುರಾತತ್ತ್ವ ಶಾಸ್ತ್ರಜ್ಞರ ಪ್ರಕಾರ, ಇದು  4000 ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಮೆಸೊಪಟ್ಯಾಮಿಯಾದ ಆಡಳಿತಗಾರ ಟಾರ್ದುನ್ನಿಯನ್ನು ಹೋಲುತ್ತಿದೆ.  ಈತ ಹುರಿಯನ್ ಸೈನಿಕರನ್ನು ಸೋಲಿಸಲ್ಪಟ್ಟ ನಂತರ ಅಲ್ಲಿಯ ಜನರು ಟಾರ್ದುನ್ನಿಯ ಮುಂದೆ ಮಂಡಿಯೂರಿ ನಿಂತದಾಗಿದೆ. ಅಲ್ಲದೆ, ಈ ಕೆತ್ತನೆಗಳು   ರಾಮ ಮತ್ತು ಹನುಮಂತ ದೇವರಂತೆ ಕಾಣುತಿದೆ ಎಂದು ಸಾಬೀತುಪಡಿಸಲು  ಪುರಾತತ್ತ್ವ ಶಾಸ್ತ್ರದ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟದಲ್ಲಿ 2015 ರಲ್ಲಿ ಇರಾಕಿನ ನರವಿಜ್ಞಾನಿ ಮತ್ತು ಇತಿಹಾಸಕಾರರಾದ ಒಸಾಮಾ ಎಸ್.ಎಂ ಅಮೀನ್ etc.worldhistory.org ವೆಬ್‌ಸೈಟ್‌ನಲ್ಲಿ ಬರೆದ ಲೇಖನಕ್ಕೆ ನಮ್ಮನ್ನು ಕರೆದೊಯ್ಯಿತು. ಈ ಲೇಖನದ ಪ್ರಕಾರ, ವೈರಲ್ ಪೋಸ್ಟ್‌ನಲ್ಲಿ ಕಂಡು ಬಂದ  ಕೆತ್ತನೆಯನ್ನು ‘ರಿಲೀಫ್ ಆಫ್ ಟಾರ್ದುನ್ನಿ” ಅಥವಾ “ಬೆಲುಲಾ ಪಾಸ್ ರಾಕ್ ರಿಲೀಫ್” ಎಂದು ಕರೆಯಲಾಗುತ್ತದೆ. ಇದು ಇರಾಕ್‌ನ ಸುಲೈಮಾನಿಯಾ ನಗರದ ಸಮೀಪದಲ್ಲಿದೆ. ಅಕ್ಕಾಡಿಯನ್ ಶಾಸನಗಳ ಆಧಾರದ ಪ್ರಕಾರ, ಈ ಬಂಡೆಯ ಉಬ್ಬು ಸುಮಾರು 4000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇಕ್ಕಿ (ಇಕ್ಕಿದ್ ಸಮದ್) ನ ಮಗ ಶಸ್ತ್ರನಿಪುಣ  ಆಡಳಿತಗಾರ/ರಾಜ ಟಾರ್ದುನ್ನಿ(ಲಿಸಿರ್ ಪಿರಿನಿ) ಅನ್ನು ತೋರಿಸುತ್ತದೆ.

ಪುರಾತತ್ವಶಾಸ್ತ್ರಜ್ಞರು ಟಾರ್ದುನ್ನಿಯ  ಮುಂದೆ ಮಂಡಿಯೂರಿರುವವರು ಆತ ಸೋಲಿಸಲ್ಪಟ್ಟ ಹುರಿಯನ್ ಸೈನಿಕರನ್ನು ತೋರಿಸುತ್ತವೆ ಎಂದು ಹೇಳಲಾಗಿದೆ. ಒಸಾಮಾ ಎಸ್. ಎಂ ಅಮೀನ್ ಅಪ್‌ಲೋಡ್ ಮಾಡಿದ ಈ ರಾಕ್ ರಿಲೀಫ್‌ನ ಯುಟ್ಯೂಬ್ ವೀಡಿಯೊವನ್ನು ಇಲ್ಲಿ ನೋಡಬಹುದು. ಈ ಕೆತ್ತನೆಗಳು  ರಾಮ ಮತ್ತು ಹನುಮಂತನನ್ನು ಚಿತ್ರಿಸುತ್ತವೆ ಎಂದು ಸಾಬೀತುಪಡಿಸಲು  ಪುರಾತತ್ತ್ವ  ಇಲಾಖೆಯ ಯಾವುದೇ ಪುರಾವೆಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮೆಸೊಪಟ್ಯಾಮಿಯನ್ ನಾಗರಿಕತೆಗೆ ಸೇರಿದ ಕಲ್ಲಿನ ಕೆತ್ತನೆಯನ್ನು  ರಾಮ ಮತ್ತು ಹನುಮಂತ ದೇವರ ಚಿತ್ರಗಳು ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.