ನರೇಂದ್ರ ಮೋದಿ ಫೋಟೊ ತೆಗೆಯುವಾಗ ಲೆನ್ಸ್ ಕ್ಲಿಪ್ ತೆಗೆದಿಲ್ಲದಿರುವ ಈ ಚಿತ್ರ ಎಡಿಟ್ ಮಾಡಿದುದಾಗಿದೆ

ಫೋಟೋ ಸೆರೆ ಹಿಡಿಯುವಾಗ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಯಾಮರಾದ ಮುಂದಿನ ಕ್ಯಾಪ್ ತೆಗೆಯದೆ ಫೋಟೋವನ್ನು ಕ್ಲಿಕ್ಕಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಪ್ರಧಾನಿ ನರೇಂದ್ರ ಮೋದಿಯವರು ಕ್ಯಾಮರ ಲೆನ್ಸ್‌ನ ಕ್ಯಾಪ್ ತೆಗೆಯದೆ ಫೋಟೊ ತೆಗೆಯುತ್ತಿದ್ದಾರೆ.

ನಿಜಾಂಶ: ಈ ಫೋಟೊವು 2022ರ ಸೆಪ್ಟಂಬರ್ 17ರಂದು ನರೇಂದ್ರ ಮೋದಿಯವರ 72ನೇ ಜನ್ಮದಿನದ ಸಂದರ್ಭದಲ್ಲಿ ನಮಿಬೀಯಾದಿಂದ ವಿಶೇಷ ಯೋಜನೆಯಡಿ ತರಿಸಿದ್ದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವಾಗ ತೆಗೆದುದ್ದಾಗಿದೆ. ಮೂಲ ಚಿತ್ರದಲ್ಲಿ ಪ್ರಧಾನಿಯವರು ಫೋಟೊ ತೆಗೆಯುವಾಗ ಲೆನ್ಸ್‌ನ ಕ್ಯಾಪ್ ಅನ್ನು ತೆಗೆದಿದ್ದಾರೆ. ಆದರೆ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೊ ಎಡಿಟ್ ಮಾಡಿದುದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಈ ಕುರಿತು ಕೀವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಿದಾಗಿ ನರೇಂದ್ರ ಮೋದಿಯವರು ಫೋಟೊ ತೆಗೆಯುತ್ತಿರುವುದನ್ನು ವರದಿ ಮಾಡಿದ ಹಲವು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸಹ ವರದಿಗಳಲ್ಲಿ ಉಲ್ಲೇಖಿಸಿರುವ ಮೋದಿಯವರು ಫೋಟೊ ತೆಗೆಯುತ್ತಿರುವ ಮೂಲ ಚಿತ್ರವನ್ನು ಪ್ರಕಟಿಸಿದೆ.

2022ರ ಸೆಪ್ಟಂಬರ್ 17ರಂದು ನರೇಂದ್ರ ಮೋದಿಯವರ 72ನೇ ಜನ್ಮದಿನದ ಸಂದರ್ಭದಲ್ಲಿ ನಮಿಬೀಯಾದಿಂದ ವಿಶೇಷ ಯೋಜನೆಯಡಿ ತರಿಸಿದ್ದ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುವ ಕಾರ್ಯಕ್ರಮದಲ್ಲಿಫೋಟೊ ತೆಗೆಯಲಾಗಿದೆ. ಮೂಲ ಚಿತ್ರದಲ್ಲಿ ಪ್ರಧಾನಿಯವರು ಫೋಟೊ ತೆಗೆಯುವಾಗ ಲೆನ್ಸ್‌ನ ಕ್ಯಾಪ್ ಅನ್ನು ತೆಗೆದಿದ್ದಾರೆ. ಆದರೆ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಫೋಟೊ ಎಡಿಟ್ ಮಾಡಿದುದ್ದಾಗಿದೆ. ನಿಕಾನ್ ಕ್ಯಾಮೆರಾಕ್ಕೆ ‘ಕ್ಯಾನನ್’ ಲೆನ್ಸ್ ಕವರ್ ಹಾಕಿ ಎಡಿಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಟಿಎಂಸಿ ರಾಜ್ಯಸಭಾ ಸಂಸದ ಜವಾಹರ್ ಸರ್ಕಾರ್ ಕೂಡ ಎಡಿಟೆಡ್ ಚಿತ್ರವನ್ನು ಟ್ವಿಟ್ ಮಾಡಿ ನಂತರ ಬಿಜೆಪಿ ಟೀಕೆ ಮಾಡಿದ ಕೂಡಲೇ ಡಿಲೀಟ್ ಮಾಡಿದ್ದರು.  ಅದರ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಈ ಎಲ್ಲಾ ಸಾಕ್ಷ್ಯಗಳ ಆಧಾರದಲ್ಲಿ ಒಟ್ಟಾರೆಯಾಗಿ ಹೇಳುವುದಾದರೆ, ವೈರಲ್ ಪೋಸ್ಟ್ ಎಡಿಟ್ ಮಾಡಿದುದ್ದಾಗಿ ಎಂಬ ತೀರ್ಮಾನಕ್ಕೆ ಬರಬಹುದು.

ಒಟ್ಟಾರೆಯಾಗಿ ಪ್ರಧಾನಿ ಮೋದಿವಯರ ಮೂಲ ಫೋಟೋವನ್ನು ಎಡಿಟ್ ಮಾಡುವ ಮೂಲಕ ತಿರುಚಿ ಹಂಚಿಕೊಳ್ಳಲಾಗಿದೆ.