ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಛಾಯಾಚಿತ್ರವು ಎಡಿಟ್ ಮಾಡಿದ್ದು, ಅದರಲ್ಲಿ 756 ಸಂಖ್ಯೆ ಇತ್ತು, 420 ಅಲ್ಲ ಎಂಬುದು ಖಾತ್ರಿಯಾಗಿದೆ

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಚಿತ್ರದಲ್ಲಿ, ರಾಹುಲ್ ಗಾಂಧಿಯವರು ಭಾರತೀಯ ಪಾಪ್ ಸಂಸ್ಕೃತಿಯಲ್ಲಿನ ಮೋಸಕ್ಕೆ ಸಂಬಂಧಿಸಿದ 420 ಸಂಖ್ಯೆಯೊಂದಿಗೆ ರೈಲ್ವೇ ಪೋರ್ಟರ್ (ಕೂಲಿ) ಬ್ಯಾಡ್ಜ್ ಅನ್ನು ಧರಿಸಿರುವುದು ಕಂಡುಬರುತ್ತದೆ. ಈ ಲೇಖನದ ಮೂಲಕ ನಿಜಾಂಶವನ್ನು ತಿಳಿಯೋಣ.

ಕ್ಲೇಮ್:  420 ಸಂಖ್ಯೆಯ ಕೂಲಿ ಬ್ಯಾಡ್ಜ್ ಧರಿಸಿರುವ ರಾಹುಲ್ ಗಾಂಧಿ.

ಫ್ಯಾಕ್ಟ್ : ರಾಹುಲ್ ಗಾಂಧಿ ಅವರ ಇನ್‌ಸ್ಟಾಗ್ರಾಮ್ ಪುಟದ ಮೂಲ ಚಿತ್ರವು ಅವರು 756 ಸಂಖ್ಯೆಯ ಕೂಲಿ ಬ್ಯಾಡ್ಜ್ ಅನ್ನು ಧರಿಸಿದ್ದು 420 ಅಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ವೈರಲ್ ಚಿತ್ರವನ್ನು ದೃಢೀಕರಿಸಲು ಅಂತರ್ಜಾಲದಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾಯಿತು. ಹುಡುಕಾಟವು ರಾಹುಲ್ ಗಾಂಧಿ ಅವರ ಇನ್ಸ್ಟಾಗ್ರಾಮ್ ಅಫೀಷಿಯಲ್ ಪುಟವನ್ನು ತೋರಿಸಿದ್ದು,  ಅಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ.

ಆದಾಗ್ಯೂ, ವೈರಲ್ ಫೋಟೋದಲ್ಲಿ ತೋರಿಸಿರುವಂತೆ ಬ್ಯಾಡ್ಜ್‌ನಲ್ಲಿನ ಸಂಖ್ಯೆ 756, ಆಗಿದೆಯೇ  ಹೊರತು  420 ಅಲ್ಲ.

ಮುಂದೆ, ಈ ಘಟನೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ಈ ಚಿತ್ರದ ಸಂದರ್ಭವನ್ನು ಅನ್ವೇಷಿಸಿದ್ದೇವೆ. ಸೆಪ್ಟೆಂಬರ್  21, 2023 ರಂದು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ (ಇಲ್ಲಿ ಮತ್ತು ಇಲ್ಲಿ) ರೈಲ್ವೆ ಹಮಾಲರನ್ನು ರಾಹುಲ್ ಗಾಂಧಿ ಭೇಟಿಯಾದಾಗ ತೆಗೆದುಕೊಳ್ಳಲಾಗಿದೆ. ಅವರು ಕಾರ್ಮಿಕರೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ಕೂಲಿ ಶರ್ಟ್ ಮತ್ತು ಬ್ಯಾಡ್ಜ್ ಧರಿಸಿದ್ದರು.

ಇದನ್ನು ಮತ್ತಷ್ಟು ಪರಿಶೀಲಿಸಲು, ರಾಹುಲ್‌ಗೆ ಬ್ಯಾಡ್ಜ್ ಕಟ್ಟಿದ್ದ ಕೂಲಿಯ ಸಂದರ್ಶನವನ್ನು ನಾವು ಕಂಡುಕೊಂಡಿದ್ದೇವೆ. ಅವರು ಬ್ಯಾಡ್ಜ್ ಸಂಖ್ಯೆ 756 ಅನ್ನು ಧರಿಸಿದ್ದರು ಎಂದು ಖಚಿತಪಡಿಸಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಛಾಯಾಚಿತ್ರವು ಎಡಿಟ್ ಮಾಡಿದ್ದು, ಅದರಲ್ಲಿ 756 ಸಂಖ್ಯೆ ಇತ್ತು, 420 ಅಲ್ಲ  ಎಂಬುದು ಖಾತ್ರಿಯಾಗಿದೆ.