ಪಾಕಿಸ್ತಾನಿ ವ್ಯಕ್ತಿಯೊಬ್ಬ 18 ವರ್ಷಗಳ ನಂತರ ತನ್ನ ತಾಯಿಯ ಮರುಮದುವೆಯನ್ನು ಬೆಂಬಲಿಸಿದ್ದಾನೆ ಹೊರತು ತಾನು ತನ್ನ ತಾಯಿಯನ್ನೇ ಮದುವೆಯಾಗುತ್ತಿಲ್ಲ

ಪಾಕಿಸ್ತಾನದಲ್ಲಿ ಯುವಕನೋರ್ವ 18 ವರ್ಷಗಳ ಕಾಲ ಬೆಳೆಸಿದ  ತನ್ನ ತಾಯಿಯನ್ನೇ ಮಗ ಮದುವೆಯಾಗಿದ್ದಾನೆ ಎನ್ನುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ( ಇಲ್ಲಿ) ವೈರಲ್ ಆಗುತ್ತಿದೆ. ಹಾಗಾದರೆ  ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ. 

ಕ್ಲೇಮ್: ಪಾಕಿಸ್ತಾನದಲ್ಲಿ 18 ವರ್ಷಗಳ ಕಾಲ ತನ್ನನ್ನು ಬೆಳೆಸಿದ ನಂತರ ಮಗ ತಾಯಿಯನ್ನೇ ಮದುವೆಯಾಗುವುದನ್ನು ವೀಡಿಯೊ ತೋರಿಸುತ್ತದೆ.

ಫ್ಯಾಕ್ಟ್: ಪಾಕಿಸ್ತಾನದ ಅಬ್ದುಲ್ ಅಹಾದ್ 18 ವರ್ಷಗಳ ನಂತರ ತನ್ನ ತಾಯಿಯ ಮರುಮದುವೆಯನ್ನು ಬೆಂಬಲಿಸಿ, ಆಕೆಯ ಜೀವನದಲ್ಲಿ ಪ್ರೀತಿಗೆ ಎರಡನೇ ಅವಕಾಶವನ್ನು ನೀಡಲು ಅವಳ ಮದುವೆಯನ್ನು ಏರ್ಪಡಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವನು ತನ್ನ ತಾಯಿಯನ್ನು ಮದುವೆಯಾಗಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಕ್ಲೇಮ್ ತಪ್ಪಾಗಿದೆ. 

ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ಡಿಸೆಂಬರ್ 30, 2024 ರಂದು ಹಿಂದೂಸ್ತಾನ್ ಟೈಮ್ಸ್ ರಿಪೋರ್ಟ್ (ಆರ್ಕೈವ್ ) ಸಿಕಕ್ಕಿದೆ. ಅದು ಅದೇ ಘಟನೆಯಾ ಬಗ್ಗೆ ತಿಳಿಸಿದ್ದು, ವರದಿಯಲ್ಲಿ ಆ ವ್ಯಕ್ತಿಯನ್ನು ಅಬ್ದುಲ್ ಅಹಾದ್ ಎಂದು ಗುರುತಿಸಲಾಗಿದೆ. ಅವರು 18 ವರ್ಷಗಳ ನಂತರ ತಮ್ಮ ತಾಯಿಯ ಮರುಮದುವೆಯನ್ನು ಬೆಂಬಲಿಸಿ, ಜೀವನದಲ್ಲಿ  ಪ್ರೀತಿ ಮತ್ತು ಎರಡನೇ ಅವಕಾಶವನ್ನು ನೀಡಲು ಅವರು ಅವರ ಮದುವೆಯನ್ನು ಏರ್ಪಡಿಸಿದ್ದರು ಎಂದು ತಿಳಿಸಿದೆ. 

ಲೇಖನದಲ್ಲಿ ಅಬ್ದುಲ್ ಅಹಾದ್ ತನ್ನ ತಾಯಿಯೊಂದಿಗೆ ಭಾವನಾತ್ಮಕ ಕ್ಷಣಗಳನ್ನು ಸೆರೆಹಿಡಿದ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದು ಅವರ ಸಂತೋಷದ ನಿಕಾಹ್‌ನೊಂದಿಗೆ ಕೊನೆಗೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ. ಈ ಕ್ಲೂ ಅನ್ನು ಇಟ್ಟುಕೊಂಡು, ನಾವು ಅವರ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಅನ್ನು ಕಂಡುಕೊಂಡೆವು, ಅಲ್ಲಿ ಅದೇ ವೀಡಿಯೊವನ್ನು (ಆರ್ಕೈವ್) “leaving it here” ಎಂಬ ಕ್ಯಾಪ್ಶನ್ ಜೊತೆಗೆ #love, #mother, #nikah, #cute, and #instagram ಎಂಬ ಹ್ಯಾಶ್ಟ್ಯಾಗ್ ಅನ್ನು ಹಾಕಿದ್ದಾರೆ. 

ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಅದೇ ವೈರಲ್ ಫೋಟೋ (ಆರ್ಕೈವ್ ) ನಮಗೆ ಸಿಕ್ಕಿದ್ದು, ಅದರಲ್ಲಿ ಅವರು ತಮ್ಮ ತಾಯಿಯ ಮದುವೆಯ ಸುದ್ದಿಯನ್ನು ಹಂಚಿಕೊಂಡ ನಂತರ ಪಡೆದ ಅಗಾಧ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. 

ಇದರ ಬಗ್ಗೆ ಹಲವಾರು ಪಾಕಿಸ್ತಾನಿ ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ (ಇಲ್ಲಿ, ಮತ್ತು ಇಲ್ಲಿ) (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ).

ಒಟ್ಟಾರೆಯಾಗಿ ಹೇಳುವುದಾದರೆ, ಈ ದೃಶ್ಯಗಳು ಪಾಕಿಸ್ತಾನಿ ವ್ಯಕ್ತಿ ತನ್ನ ತಾಯಿಯನ್ನು ಮದುವೆಯಾಗುತ್ತಿರುವುದಲ್ಲ ಬದಲಾಗಿ ತನ್ನ ತಾಯಿಯ ಮರುಮದುವೆಯನ್ನು ಬೆಂಬಲಿಸುತ್ತಿರುವುದನ್ನು ತೋರಿಸುತ್ತವೆ.