ಮನಮೋಹನ್ ಸಿಂಗ್ ಅವರನ್ನು ವಿಶ್ವದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳುವ ಅಮೆರಿಕನ್‌ ಸಮೀಕ್ಷೆಯ ಯಾವುದೇ ರೇಟಿಂಗ್ ಇಲ್ಲ…!

ಅಮೆರಿಕ ನಡೆಸಿರುವ ಸಮೀಕ್ಷೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವದ 50 ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳ ಅಗ್ರಸ್ಥಾನದಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅಲ್ಲದೆ, ಆ 50 ಜನರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮನಮೋಹನ್ ಸಿಂಗ್ ಎಂದೂ ಸಹ ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ವಿಶ್ವದ 50 ಅತ್ಯಂತ ಪ್ರಾಮಾಣಿಕ ವ್ಯಕ್ತಿಗಳ ಬಗೆಗಿನ ಅಮೆರಿಕದ ಸಮೀಕ್ಷೆಯಲ್ಲಿ ಮನಮೋಹನ್ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ.

ಸತ್ಯ: ಮನಮೋಹನ್ ಸಿಂಗ್ ಅವರಿಗೆ ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗಿದೆ. ಅಲ್ಲದೆ, ಟೈಮ್ಸ್ ಸಮೀಕ್ಷೆಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಆದರೆ, ಮನಮೋಹನ್ ಸಿಂಗ್ ಅವರು ವಿಶ್ವದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳುವ ಯಾವುದೇ ಅಮೆರಿಕನ್ ಸಮೀಕ್ಷೆಯೂ ನಡೆದಿಲ್ಲ. ಯುಎಸ್‌ನ ಅಂತಹ ಯಾವುದೇ ಸಮೀಕ್ಷೆಯಲ್ಲಿ ಮನಮೋಹನ್ ಸಿಂಗ್ ಹೆಸರು ಕಂಡುಬಂದಿದ್ದರೆ, ಸುದ್ದಿ ಸಂಸ್ಥೆಗಳು ಅದನ್ನು ವರದಿ ಮಾಡುತ್ತಿದ್ದವು. ಆದಾಗ್ಯೂ, ಅಂತಹ ಸಮೀಕ್ಷೆಯನ್ನು ವರದಿ ಮಾಡಿದ ಯಾವುದೇ ಸುದ್ದಿ ಲೇಖನಗಳೂ ಕೂಡ ದೊರೆತಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ವಿಶ್ವದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳುವ ಯಾವುದೇ ಅಮೇರಿಕನ್ ಸಮೀಕ್ಷೆಯೂ ದೊರೆತಿಲ್ಲ. ಆದಾಗ್ಯೂ, ಈ ಹುಡುಕಾಟದಲ್ಲಿ ಕೆಲವು ಸುದ್ದಿ ಲೇಖನಗಳು ದೊರೆತಿದ್ದು, ಅದರಲ್ಲಿ,  ಟೈಮ್ 2010 – ವಿಶ್ವದ 100 ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಮನಮೋಹನ್‌ ಸಿಂಗ್‌ ಕೂಡ ಒಬ್ಬರು ಎಂದು ವರದಿ ಮಾಡಿದೆ. ಅಲ್ಲದೆ, ಜಪಾನ್‌ ಮೂಲದ ‘ದಿ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ದಿ ಪೌಲೋನಿಯಾ ಫ್ಲವರ್ಸ್’ ನಂತಹ ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಅವರಿಗೆ ನೀಡಲಾಗಿದೆ. ಭಾರತ-ಜಪಾನ್ ಸಂಬಂಧಗಳಿಗೆ ಅವರು ನೀಡಿದ ಕೊಡುಗೆ ಇದಾಗಿದೆ. ಅಲ್ಲದೆ, ಅಮೆರಿಕಾ ನೀಡುವ ‘ವಿಶ್ವ ಸ್ಟೇಟ್ಸ್‌ಮನ್ ಪ್ರಶಸ್ತಿ’ಯನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಮನಮೋಹನ್‌ ಸಿಂಗ್‌ ಅವರಿಗೆ ಇದೆ.

ಹಾಗಾಗಿ, ಪೋಸ್ಟ್‌ನಲ್ಲಿ ಹೇಳಲಾಗಿರುವಂತೆ ಮನಮೋಹನ್ ಸಿಂಗ್ ಅವರು ವಿಶ್ವದ 50 ಪ್ರಾಮಾಣಿಕರು ಎಂದು ಯುಎಸ್‌ನ ಸಮೀಕ್ಷೆ ಹೇಳಿದ್ದರೆ, ಸುದ್ದಿ ಸಂಸ್ಥೆಗಳು ಅದನ್ನು ವರದಿ ಮಾಡುತ್ತಿದ್ದವು. ಆದಾಗ್ಯೂ, ಅಂತಹ ಸಮೀಕ್ಷೆಯನ್ನು ವರದಿ ಮಾಡಿದ ಯಾವುದೇ ಸುದ್ದಿ ಲೇಖನಗಳು ನಮಗೆ ಸಿಗಲಿಲ್ಲ. ಆದ್ದರಿಂದ, ಅಂತಹ ಯಾವುದೇ ಸಮೀಕ್ಷೆ ನಡೆದಿಲ್ಲ ಎಂದು ಇದು ಸಾಬೀತುಪಡಿಸುತ್ತದೆ.

ಅಮೆರಿಕದ ಸಮೀಕ್ಷೆಯೊಂದು ಪಿಎಂ ಮೋದಿಯವರನ್ನು ವಿಶ್ವದ ಅತ್ಯಂತ ಪ್ರಾಮಾಣಿಕ ನಾಯಕ ಎಂದು ರೇಟ್ ಮಾಡಿದೆ ಎಂದು ಇದೇ ರೀತಿಯ ಹೇಳಿಕೆ ವೈರಲ್‌ ಆಗಿತ್ತು. ಅದಾದ ನಂತರ, ಆ ಹೇಳಿಕೆಯೂ ಸುಳ್ಳು ಎಂಬುದನ್ನು ಫ್ಯಾಕ್ಟ್ಲಿ ಪತ್ತೆ ಹಚ್ಚಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಮನಮೋಹನ್ ಸಿಂಗ್ ಅವರು ವಿಶ್ವದ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಎಂದು ಹೇಳಿರುವಂತಹ ಯಾವುದೇ ಸಮೀಕ್ಷೆಗಳು ಇಲ್ಲ.