2025 ರ ಪಂಜಾಬ್ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ (ಇಲ್ಲಿ) ವೈರಲ್ ಆಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 2025 ರ ಪಂಜಾಬ್ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ.
ಫ್ಯಾಕ್ಟ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ 2025 ರ ಪಂಜಾಬ್ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿಲ್ಲ. ಈ ಕ್ಲೇಮ್ ಅನ್ನು ಬೆಂಬಲಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಗಳಿಲ್ಲ. ವೈರಲ್ ಆಗಿರುವ ಈ ಕ್ಲೇಮ್ ನಕಲಿ ಮತ್ತು ಅಂತಹ ಯಾವುದೇ ದೇಣಿಗೆಯನ್ನು ನೀಡಲಾಗಿಲ್ಲ ಎಂದು ‘ಯು ವಿ ಕ್ಯಾನ್ ಫೌಂಡೇಶನ್’ ಫ್ಯಾಕ್ಟ್ಲಿಗೆ ಸ್ಪಷ್ಟಪಡಿಸಿದೆ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ಸುಳ್ಳು.
ಈ ಹೇಳಿಕೆಯನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ನಲ್ಲಿ ಹುಡುಕಿದೆವು ಆದರೆ ಯಾವುದೇ ಮಾಧ್ಯಮ ವರದಿಗಳು ಅಥವಾ ಅದನ್ನು ಪುಷ್ಟಿಕರಿಸುವ ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ. ದೇಣಿಗೆ ಕ್ಲೇಮ್ ನ ಪ್ರಮಾಣವನ್ನು ಪರಿಗಣಿಸಿದರೆ ಇದು ಸುದ್ದಿಯಾಗಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.
ನಂತರ ನಾವು ಯುವರಾಜ್ ಸಿಂಗ್ ಅವರ ಅಫೀಷಿಯಲ್ ಸೋಶಿಯಲ್ ಮೀಡಿಯಾ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಮತ್ತು ಅವರ ಫೌಂಡೇಶನ್ You We Can ನ ಖಾತೆಗಳು ಮತ್ತು ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಆದರೆ 600 ಟ್ರ್ಯಾಕ್ಟರ್‌ಗಳ ದೇಣಿಗೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಸೆಪ್ಟೆಂಬರ್ 01, 2025 ರಂದು ಪಂಜಾಬ್ ಪ್ರವಾಹದ ಬಗ್ಗೆ ದುಃಖ ಮತ್ತು ಪೀಡಿತ ಕುಟುಂಬಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿ ಅವರು ಮಾಡಿದ ಪೋಸ್ಟ್ ಕಂಡುಬಂದಿದೆ. ಆದರೆ ಅಂತಹ ದೇಣಿಗೆಯ ಬಗ್ಗೆ ಯಾವುದೇ ಉಲ್ಲೇಖವನ್ನು ನೀಡಿಲ್ಲ.
ವರದಿಗಳ ಪ್ರಕಾರ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ), ಸೋನು ಸೂದ್, ರಣದೀಪ್ ಹೂಡಾ, ಕಪಿಲ್ ಶರ್ಮಾ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ದಿಲ್ಜಿತ್ ದೋಸಾಂಜ್, ಆಮಿ ವಿರ್ಕ್, ಸೋನಮ್ ಬಾಜ್ವಾ, ಗುರುದಾಸ್ ಮಾನ್, ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್, ಕರಣ್ ಔಜ್ಲಾ, ಕರಣ್ ಔಜ್ಲಾ, ಜಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ. ಆದರೆ, ಯುವರಾಜ್ ಸಿಂಗ್ 600 ಟ್ರಾಕ್ಟರ್‌ಗಳನ್ನು ನೀಡಲು ನಿರ್ಧರಿಸಿದ್ದಾರೆ ಎಂಬುದಕ್ಕೆ ಯಾವುದೇ ಮಾಧ್ಯಮ ವರದಿಗಳು ಅಥವಾ ಪುರಾವೆಗಳು ನಮಗೆ ಕಂಡುಬಂದಿಲ್ಲ.
ವೈರಲ್ ಚಿತ್ರದ ಮೂಲವನ್ನು ಪತ್ತೆಹಚ್ಚುವಾಗ, ನಾವು ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಕೆಳಗಿನ ಬಲ ಮೂಲೆಯಲ್ಲಿ ‘ಜೆಮಿನಿ AI’ ವಾಟರ್‌ಮಾರ್ಕ್ ಕಂಡುಬಂದಿದೆ, ಇದು ಆರ್ಟಿಫಿಷಿಯಲ್ ಇಂಟೆಲ್ಲೆಗೆನ್ಸ್ ಅನ್ನು ಬಳಸಿ ರಚಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ.
ವೈರಲ್ ಚಿತ್ರವು AI-ರಚಿತವಾಗಿದೆಯೇ ಎಂದು ಮತ್ತಷ್ಟು ಪರಿಶೀಲಿಸಲು, ನಾವು AI ವಿಷಯ ಪತ್ತೆ ಪರಿಕರಗಳನ್ನು ಬಳಸಿಕೊಂಡು ಅದನ್ನು ವಿಶ್ಲೇಷಿಸಿದ್ದೇವೆ. AI ವಿಷಯ ಪತ್ತೆ ಸಾಧನವಾದ ಹೈವ್, ಚಿತ್ರವು AI-ರಚಿತವಾಗಿದೆ ಎಂಬ 98.1% ಸಾಧ್ಯತೆಯನ್ನು ಸೂಚಿಸುತ್ತದೆ.
ನಾವು ಯು ವಿ ಕ್ಯಾನ್ ಫೌಂಡೇಶನ್ ಅನ್ನು ಸಹ ಸಂಪರ್ಕಿಸಿದ್ದೇವೆ, ಅವರು ಪಂಜಾಬ್‌ನಲ್ಲಿ ಪ್ರವಾಹ ಪೀಡಿತ ರೈತರಿಗೆ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದ ಬಗ್ಗೆ ವೈರಲ್ ಆಗಿರುವ ಕ್ಲೇಮ್ ಸುಳ್ಳು ಮತ್ತು ಅಂತಹ ಯಾವುದೇ ದೇಣಿಗೆಯನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಯುವರಾಜ್ ಸಿಂಗ್ ಪಂಜಾಬ್ ಪ್ರವಾಹ ಪೀಡಿತರಿಗೆ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದ್ದಾರೆ ಎಂಬ ವೈರಲ್ ಕ್ಲೇಮ್ ಫೇಕ್.